
ಎಕ್ಕಾ ಚಿತ್ರದ ನಂತರ, ನಟ ಯುವ ರಾಜಕುಮಾರ್ ಅವರು ತಮ್ಮ ಮುಂದಿನ ಸಿನಿಮಾ ಸುಮಾರು 8 ತಿಂಗಳೊಳಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಈಗ ಅದೇಷ್ಟು ತಿಂಗಳುಗಳು ಕಳೆದರೂ, ಮುಂದಿನ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಅಪ್‌ಡೇಟ್ ಇಲ್ಲ.
ಆದರೆ ಇದೀಗ ನಿರೀಕ್ಷೆಯ ಅಂತ್ಯವಾಗುವಂತೆ ಕಾಣುತ್ತಿದೆ. ಯುವ ರಾಜಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ “📢 soon” ಎಂದು ಪೋಸ್ಟ್ ಮಾಡಿದ್ದು, ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ.
ಆದರೂ ಚಿತ್ರದ ಶೀರ್ಷಿಕೆ ಮತ್ತು ಯಾವ ತಂಡದೊಂದಿಗೆ ಅವರು ಕೈಜೋಡಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗಬಹುದು.