ವರ್ಷದ ಮೊದಲ ಹಿಟ್ ಆಗಿ ಯುಗಾದಿ ಹಬ್ಬದ ದಿನವೇ ಗೆಲುವಿನ ಭಾಗ್ಯ ತಂದ ಲವ್ ಮಾಕ್ಟೈಲ್ 3

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ದಂಪತಿಗೆ ಇರುವ ಅದೃಷ್ಟ ಯಾರಿಗೂ ಇಲ್ಲ ಬಿಡಿ. ಅಷ್ಟಿಲ್ಲದೇ ಇಡೀ ದೇಶ ಕಾಯುತ್ತಿದ್ದ ಟ್ಯಾಕ್ಸಿಕ್ ಬಿಡುಗಡೆ ಮುಂದಕ್ಕೆ ಹೋಗಿ ಆ ಡೇಟ್ ಇವರ ಸಿನಿಮಾಗೆ ಸಿಗುತ್ತೆ ಅಂದ್ರೆ ದೈವಬಲ ಇವರಿಗೆ ಇದ್ದೇ ಇದೆ. ಎಲ್ಲಕ್ಕಿಂತ ಮೇಲಾಗಿ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಒಂದು ಒಳ್ಳೆಯ ಸಿನಿಮಾನೇ ಮಾಡಿದ್ದರಲ್ಲ. ಅದೀಗ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಪಸಲು ಕೊಡುತ್ತಿದೆ. ಲವ್ ಮಾಕ್ಟೈಲ್ 3 ನಲ್ಲಿ ತಂದೆ ಮಗಳ ಬಾಂಧವ್ಯದ ಸುಂದರ ಕಥೆ ಇದೆ. ಇಂತಹ ಕಥೆಗಳು ಸಿನಿಮಾದಲ್ಲಿ ಓವರ್ ಮೆಲೋಡ್ರಾಮ ಆಗಿ, ಲ್ಯಾಗ್ ಆಗಿ, ಬೋರ್ ಹೊಡೆಸೋ ಸಂಭವವೇ ಹೆಚ್ಚು. ಆದರೆ ಡಾರ್ಲಿಂಗ್ ಕೃಷ್ಣ ಒಳ್ಳೆಯ ಲೈನನ್ನೇ ಹಿಡಿದು, ಒಳ್ಳೆಯ ತಾರಾಗಣವನ್ನೇ ಸೇರಿಸಿಕೊಂಡು, ಅದರಲ್ಲೂ ಆ ಮಗು ಆ ಮುದ್ದು ಮಗು ಸಂವೃತ್ತಿ ಇದೆಯಲ್ಲ, ಅದೇ ಸಿನಿಮಾದ ಹೈಲೈಟ್. ಈಗ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ಸಿಗುವುದೇ ಕಷ್ಟ ಆಗಿದೆ. ಆತರ ಸಿನಿಮಾ ಓಡುತ್ತಿದೆ.

ಸೆಕೆಂಡ್ ಹಾಫ್ ನಲ್ಲಿ ಚಿತ್ರದ ಸಾರ ಅಡಗಿದೆ. ಅಲ್ಲಿ ವಕೀಲರಾಗಿ ದಿಲೀಪ್ ರಾಜ ಹಾಗೂ ಶ್ವೇತಾ ಪ್ರಸಾದ್ ಅಭಿನಯ ಸೂಪರ್. ಡಾರ್ಲಿಂಗ್ ಕೃಷ್ಣ ಬರವಣಿಗೆಯಂತೂ ಅವರ ವೃತ್ತಿ ಜೀವನದಲ್ಲೇ ಬೆಸ್ಟ್. ಸಂಗೀತವೂ ಅಲ್ಲಿ ಸಿನಿಮಾಗೆ ಬಲವಾಗಿ ನಿಲ್ಲುತ್ತೆ. ಒಟ್ಟಾರೆಯಾಗಿ ಒಂದೊಳ್ಳೆ ಭಾವನಾತ್ಮಕ ಸಿನಿಮಾ ನೋಡಿದ ಅನುಭವ ಪ್ರೇಕ್ಷಕರಿಗೆ ದಕ್ಕುತ್ತಿದೆ. ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾ ಕೊಟ್ಟಿರುವ ಗೆಲುವು, ಈ ಬಿಸಿಲಿನ ಬೇಗೆಯಲ್ಲಿ ತಂಪಾದ ಜ್ಯೂಸ್ ಕೊಟ್ಟಂತೆ ಆಗಿದೆ. ಇನ್ನು ಮುಂದೆಯೂ ಇಂತಹ ಒಳ್ಳೆ ಸಿನಿಮಾಗಳು ಬರಲಿ, ಡಾರ್ಲಿಂಗ್ ಕೃಷ್ಣರಂತ ಬುದ್ಧಿವಂತ ನಿರ್ದೇಶಕರು ಹೆಚ್ಚಾಗಲಿ.

Leave a Reply

Your email address will not be published. Required fields are marked *