
ಕನ್ನಡದ ಸ್ಟಾರ್ ನಟ ಯಶ್ ಇದೀಗ ನಿಜವಾದ ಗ್ಲೋಬಲ್ ಲೀಗ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಲಿವುಡ್ ಮಟ್ಟದ ಸಿನೆಮಾ ಪತ್ರಿಕೆ ಎಂದೇ ಹೆಸರು ಪಡೆದಿರುವ Varietyನಲ್ಲಿ ಯಶ್ ಕುರಿತ ವಿಶೇಷ ಲೇಖನ ಪ್ರಕಟವಾಗಿರುವುದು ಕನ್ನಡ ಚಿತ್ರರಂಗಕ್ಕೇ ದೊಡ್ಡ ಹೆಮ್ಮೆ. ವಿಶೇಷವಾಗಿ ‘Toxic’ ಮತ್ತು ‘Ramayana’ ಸಿನಿಮಾಗಳ ಬಗ್ಗೆ ಯಶ್ ನೀಡಿರುವ ಅಭಿಪ್ರಾಯಗಳು ಈಗ ಇಂಡಿಯನ್ ಸಿನೆಮಾವನ್ನು ಜಾಗತಿಕ ಮಟ್ಟದಲ್ಲಿ ಹೇಗೆ ಪ್ರೆಸೆಂಟ್ ಮಾಡಬೇಕು ಅನ್ನೋದರ ಸ್ಪಷ್ಟ ದಿಕ್ಕನ್ನು ತೋರಿಸುತ್ತಿವೆ.

‘KGF’ ನಂತರ ಯಶ್ ಕೇವಲ ಸ್ಟಾರ್ ಆಗಿ ಉಳಿದಿಲ್ಲ. ಅವರು ಬ್ರ್ಯಾಂಡ್ ಆಗಿದ್ದಾರೆ. ಈಗ ‘Toxic’ ಮೂಲಕ ಒಂದು ಹೊಸ ಸಿನೆಮಾಟಿಕ್ ಯುನಿವರ್ಸ್ ಕಟ್ಟುವ ಪ್ರಯತ್ನದಲ್ಲಿದ್ದಾರೆ. Geetu Mohandas ನಿರ್ದೇಶನದ ಈ ಸಿನಿಮಾ ಭಾರತೀಯ ಸಿನೆಮಾವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ರೂಪುಗೊಳ್ಳುತ್ತಿದೆ ಎಂದು Variety ವರದಿಯಲ್ಲಿ ಉಲ್ಲೇಖವಾಗಿದೆ. ಯಶ್ ಸ್ವತಃ ಬರವಣಿಗೆ, ನಿರ್ಮಾಣ ಮತ್ತು ನಟನೆಯ ಮೂರು ವಿಭಾಗಗಳಲ್ಲೂ ತೊಡಗಿಸಿಕೊಂಡಿರುವುದು ಅವರ ವಿಷನ್ ಎಷ್ಟು ನಿಖರ ಹಾಗೂ ದೊಡ್ಡದು ಅನ್ನೋದಕ್ಕೆ ಸಾಕ್ಷಿ.

ಇನ್ನೊಂದು ಕಡೆ Ramayana ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಯಶ್, ಪ್ಯಾನ್ ಇಂಡಿಯಾ ಗಡಿಯನ್ನು ದಾಟಿ ಗ್ಲೋಬಲ್ ಮೈಥಾಲಜಿಕಲ್ ಸಿನೆಮಾ ಸ್ಪೇಸ್‌ಗೆ ಕಾಲಿಡುತ್ತಿದ್ದಾರೆ. Hollywood ತಂತ್ರಜ್ಞರು, DNEG ಮಟ್ಟದ VFX ಕಂಪನಿಗಳು, Hans Zimmer–A.R. Rahman ಸಂಗೀತ ಕಾಂಬಿನೇಷನ್… ಈ ಮಟ್ಟದ ಪ್ರಾಜೆಕ್ಟ್‌ನಲ್ಲಿ ಯಶ್ ಪ್ರಮುಖ ಮುಖವಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಒಬ್ಬ ಕನ್ನಡ ನಟ Varietyನಲ್ಲಿ ಫೀಚರ್ ಆಗೋದು ಸಣ್ಣ ವಿಷಯ ಅಲ್ಲ. ಇದೇ ಪತ್ರಿಕೆ ಹಾಲಿವುಡ್‌ನ Oscar race ರಿಂದ ಜಾಗತಿಕ ಸಿನೆಮಾ ಟ್ರೆಂಡ್ಸ್‌ವರೆಗೆ ಡಿಸೈಡ್ ಮಾಡುವ ಪ್ರಭಾವ ಹೊಂದಿದೆ. ಅಲ್ಲಿ ಯಶ್ ಬಗ್ಗೆ ಬರೆಯಲಾಗುತ್ತಿದೆ ಅಂದ್ರೆ, ಅದು ಕೇವಲ ವ್ಯಕ್ತಿಗತ ಸಾಧನೆ ಅಲ್ಲ — ಕನ್ನಡ ಸಿನೆಮಾ ಈಗ ಜಗತ್ತಿನ ಟೇಬಲ್ ಮೇಲೆ ಕೂತಿದೆ ಅನ್ನೋದರ ಸಿಂಬಲ್.

ಇವತ್ತು ಯಶ್ ಕೇವಲ ಸ್ಯಾಂಡಲ್‌ವುಡ್ ಸ್ಟಾರ್ ಅಲ್ಲ. ಭಾರತೀಯ ಸಿನೆಮಾದ ಗ್ಲೋಬಲ್ ಫೇಸ್ ಆಗಿ ನಿಧಾನವಾಗಿ ರೂಪುಗೊಳ್ಳುತ್ತಿದ್ದಾರೆ. ‘Rocky Bhai’ ಇಮೇಜ್‌ನಿಂದ ಹೊರಬಂದು, ಕಂಟೆಂಟ್, ವಿಷನ್ ಮತ್ತು ವರ್ಲ್ಡ್ ಮಾರ್ಕೆಟ್‌ನ್ನು ಟಾರ್ಗೆಟ್ ಮಾಡುತ್ತಿರುವ ಯಶ್ ಪ್ರಯಾಣ ಈಗ ಮತ್ತೊಂದು ಲೆವೆಲ್‌ಗೆ ಹೋಗಿದೆ. ಕನ್ನಡ ಚಿತ್ರರಂಗದ ಕನಸುಗಳನ್ನು ಜಗತ್ತಿನ ವೇದಿಕೆಗೆ ಕೊಂಡೊಯ್ಯುತ್ತಿರುವ ಅವರ ಈ ಹೆಜ್ಜೆ ನಿಜಕ್ಕೂ ಐತಿಹಾಸಿಕ.