Jerax Review– ಹೊಸ ಐಡಿಯಾ, ಹಾಸ್ಯಭರಿತ ಕಥೆ… ಸ್ವಲ್ಪ ಲೈಟ್ ಅನಿಸೋ ಅನುಭವ..

ಕನ್ನಡ OTT ಸ್ಪೇಸ್‌ನಲ್ಲಿ ಕ್ರೈಮ್, ಥ್ರಿಲ್ಲರ್ ಕಥೆಗಳ ಮಧ್ಯೆ ಒಂದು ವಿಭಿನ್ನ ಪ್ರಯತ್ನವಾಗಿ ಬಂದಿರುವುದು Jerax. ZEE5 ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಸೀರೀಸ್, ಸಾಮಾನ್ಯ ‘ಜರಾಕ್ಸ್’ ಯಂತ್ರವನ್ನೇ ಸೂಪರ್‌ನಾಚುರಲ್ ಟ್ವಿಸ್ಟ್ ನೀಡಿ “ಮನುಷ್ಯರನ್ನೇ ಡುಪ್ಲಿಕೇಟ್ ಮಾಡೋ” ಐಡಿಯಾ ಮೇಲೆ ಕಟ್ಟಲಾಗಿದೆ.

ನಿರ್ದೇಶಕ Srinidhi Bengaluru ಅವರ ಕಲ್ಪನೆಗೆ ಬೆಂಬಲವಾಗಿ, Dhananjaya ನಿರ್ಮಾಣ—ಇದು ಸೀರೀಸ್‌ಗೆ ಒಳ್ಳೆಯ ಕ್ರೆಡಿಬಿಲಿಟಿ ಕೊಟ್ಟಿದೆ.

ಕಥೆ ಏನು?

ಪಟ್ಟಣ ಒಂದರ ಸರ್ವೇ ಸಾಧಾರಣ ವ್ಯಕ್ತಿ ಪ್ರಕಾಶನ (Nagabhushana) ಜೀವನದಲ್ಲಿ ಒಂದು ವಿಚಿತ್ರ ತಿರುವು ಬರುತ್ತದೆ. ಅವನ ಕೈಗೆ ಸಿಕ್ಕೋದು ಒಂದು ಮಿಸ್ಟೀರಿಯಸ್ ಜಿರಾಕ್ಸ್ ಮೆಷಿನ್… ಆದರೆ ಇದು ಕಾಗದವನ್ನಲ್ಲ, ಮನುಷ್ಯರನ್ನೇ ಕಾಪಿ ಮಾಡೋ ಸಾಮರ್ಥ್ಯ ಹೊಂದಿದೆ!

ಮೊದಲಿಗೆ ಕುತೂಹಲದಿಂದ ಶುರುವಾದ ಈ ಆಟ, ಬೇಗನೇ ಗೊಂದಲ, ಹಾಸ್ಯ, ಕಾನ್ಫ್ಲಿಕ್ಟ್‌ಗಳಿಗೆ ತಿರುಗುತ್ತದೆ. ಒಂದೇ ವ್ಯಕ್ತಿಯ ಹಲವು ರೂಪಗಳು, ಸಂಬಂಧಗಳಲ್ಲಿ ಗಲಾಟೆ, ಐಡೆಂಟಿಟಿ ಕ್ರೈಸಿಸ್—all mix ಆಗಿ ಒಂದು ‘ಉಲ್ಟಾ-ಪಲ್ಟಾ’ ಜಗತ್ತು ಸೃಷ್ಟಿಯಾಗುತ್ತದೆ.

ಈ ನಡುವೆ ಸೂಜಿ (Payal Chengappa) ಜೊತೆಗಿನ ಲವ್ ಟ್ರ್ಯಾಕ್ ಕಥೆಗೆ ಸ್ವಲ್ಪ ಎಮೋಷನಲ್ ಬ್ಯಾಲೆನ್ಸ್ ಕೊಡೋ ಪ್ರಯತ್ನ ಮಾಡುತ್ತದೆ.

👍 ಏನು ವರ್ಕ್ ಆಗಿದೆ?

  1. ಫ್ರೆಶ್ & ಕ್ರೇಜಿ ಐಡಿಯಾ ಜಿರಾಕ್ಸ್ ಮೂಲಕ ಮನುಷ್ಯನ ಡುಪ್ಲಿಕೇಶನ್ ಅನ್ನೋ ಕಾನ್ಸೆಪ್ಟ್ ತುಂಬಾ ಹೊಸದು. ಕನ್ನಡದಲ್ಲಿ ಇಂತಹ ‘ವಾಟ್ ಇಫ್’ ಫ್ಯಾಂಟಸಿ ಕಾಮಿಡಿ ಅಪರೂಪ.
  2. ನಾಗಭೂಷಣ ಪರ್ಫಾರ್ಮೆನ್ಸ್. ಕಾಮಿಡಿ, ಕನ್ಫ್ಯೂಷನ್ ಎರಡನ್ನೂ ಬ್ಯಾಲೆನ್ಸ್ ಮಾಡೋವಾಗಿ ಚೆನ್ನಾಗಿ ನಟಿಸಿದ್ದಾರೆ. ಅವರ ಟೈಮಿಂಗ್ ಸೀರೀಸ್‌ಗೆ ಲೈಫ್ ಕೊಡುತ್ತದೆ.
  3. ಸಪೋರ್ಟಿಂಗ್ ಕಾಸ್ಟ್ ಮಜಾಇದೆ. ಮನ್ಜು ಪಾವಗಡ, ಸಂತೋಷ್, ಓಂ ಪ್ರಕಾಶ್ ಹೀಗೆ ಸಪೋರ್ಟಿಂಗ್ ಆರ್ಟಿಸ್ಟ್ಸ್ ಸನ್ನಿವೇಶಗಳಿಗೆ ಚೆನ್ನಾದ ಕಾಮಿಡಿ ಎಲಿಮೆಂಟ್ ಮಜಾ ಕೊಡ್ತಾರೆ.
  4. ಲೈಟ್-ಹಾರ್ಟೆಡ್ ಟ್ರೀಟ್ಮೆಂಟ್ ಸೀರೀಸ್ ತುಂಬಾ ಸೀರಿಯಸ್ ಆಗೋದಿಲ್ಲ. ‘ಟೈಮ್ ಪಾಸ್, ಫನ್ ವಾಚ್’ ಅಂತ ಹೇಳೋ ತರಹ ಹಾಸ್ಯಭರಿತವಾಗಿ ಹೋಗುತ್ತದೆ.

👎 ಎಲ್ಲಿ ತಪ್ಪಾಗಿದೆ?

ಎಮೋಷನಲ್ ಕನೆಕ್ಟ್ ಕಡಿಮೆ ಕಥೆ ಸಖತ್ ಆಗಿದ್ದರು ಐಡಿಯಾ ಒಳ್ಳೇದು ಇದ್ದರೂ, ಪಾತ್ರಗಳ ಡೆಪ್ತ್ ಕಡಿಮೆ. ಸನ್ನಿವೇಶಗಳು ಮನಸಿಗೆ ತಟ್ಟೋ ಮಟ್ಟಕ್ಕೆ ಬರೋದಿಲ್ಲ.

ಫೈನಲ್ ವರ್ಡ್✌️

Jerax ಒಂದು ಫನ್, ಕ್ರಿಯೇಟಿವ್, ಮತ್ತು ಡಿಫರೆಂಟ್ ಅಟೆಂಪ್ಟ್. ತುಂಬಾ ಸೀರಿಯಸ್ ಆಗಿ ನೋಡೋವರಿಗಿಂತ, ಲೈಟ್ ಆಗಿರೋ ಕಂಟೆಂಟ್ ಎಂಜಾಯ್ ಮಾಡೋರಿಗೆ ಹೆಚ್ಚು ಸೂಟ್ ಆಗುತ್ತದೆ.
👉 ಮಜಾ ಇದೆ
👉 ಹೊಸತನ ಇದೆ
👉 ಆದರೆ ‘ಹೃದಯಕ್ಕೆ ತಟ್ಟೋ’ ಎಮೋಷನ್ ಸ್ವಲ್ಪ ಕಡಿಮೆ

ರೇಟಿಂಗ್ 👇
⭐️⭐️⭐️💥 / 5 – “ಆರಾಮಾಗಿ ನೋಡ್ಬೋದು, ಫುಲ್ ಟೈಮ್ ಪಾಸ್!”

Leave a Reply

Your email address will not be published. Required fields are marked *