ರೋಡ್‌ ರೇಜ್‌ ಕಿರುಚಿತ್ರಕ್ಕೆ ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಸಾಥ್‌

ರೋಡ್‌ ರೇಜ್‌ ಕಿರುಚಿತ್ರ ಬಿಡುಗಡೆ ಮಾಡಿದ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌
ರಿಲೀಸ್‌ ಆಯ್ತುರೋಡ್‌ ರೇಜ್‌ ಶಾರ್ಟ್‌ ಫಿಲ್ಮಂ ರೋಡ್‌ ರೇಜ್‌ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ಕೇಳಿ ಬರುತ್ತಿರುವ ಪದ . ಅದರಲ್ಲಿಯೂ ಬೆಂಗಳೂರಿನಲ್ಲಿ ರೋಡ್‌ ರೇಜ್‌ ಸಿಕ್ಕಾಪಟ್ಟೆ ಕಾಮನ್‌ ಆಗಿದೆ. ಇದೇ ವಿಚಾರವನ್ನ ಇಟ್ಟುಕೊಂಡು ನಿರ್ದೇಶಕ ಸೂರ್ಯ, ರೋಡ್‌ ರೇಜ್‌ ಅನ್ನೋ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಾಜಶೇಖರ್‌ ಸೋಮಶೇಖರ್‌ ಈ ಸಿನಿಮಾವನ್ನ ಶ್ರೀ ಸಾಯಿ ಗಗನ್‌ ಡಿಸ್ಟ್ಯೂಬ್ಯೂಟರ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ…

ರೋಡ್‌ ರೇಜ್‌ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿರೋ ಬೆಂಗಳೂರು ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಇಡೀ ತಂಡದ ಜೊತೆ ಬಂದು ರೋಡ್‌ ರೇಜ್‌ ಕಿರು ಚಿತ್ರವನ್ನ ಬಿಡುಗಡೆ ಮಾಡಿಕೊಟ್ಟರು. ಪೊಲೀಸ್‌ ಕಮಿಷನರ್‌ ಜೊತೆಯಲ್ಲಿ ಡೈಲಾಗ್‌ ರೈಟರ್‌ ಮಾಸ್ತಿ ನಟ ಸುಚೇಂದ್ರ ಪ್ರಸಾದ್‌ , ಲಹರಿ ವೇಲು ಭಾಗಿ ಆಗಿದ್ದರು . ನಟ ಶ್ರೀ ಮುರಳಿ ಕಿರು ಚಿತ್ರಕ್ಕೆ ಧ್ವನಿ ನೀಡುವ ಮೂಲಕ ರೋಡ್ ರೇಜ್ ತಂಡಕ್ಕೆ ಸಾಥ್ ಕೊಟ್ಟಿದಾರೆ

ರೋಡ್‌ ರೇಜ್‌ ಕಿರುಚಿತ್ರ ಲಾಂಚ್‌ ಮಾಡಿದ ನಂತರ ಮಾತನಾಡಿದ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಈ ರೀತಿಯ ಜಾಗೃತಿ ಮೂಡಿಸೋ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು ಇಡೀ ತಂಡಕ್ಕೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಡ್ರಗ್ಸ್‌ ಬಗ್ಗೆ ಜಾಗೃತಿ ಮೂಡಿಸೋ ಚಿತ್ರಗಳು ಬರಲಿ ಎಂದರು.

ಇನ್ನು ಡೈಲಾಗ್‌ ರೈಟರ್‌ ಮಾಸ್ತಿ ಮಾತನಾಡಿ, ಈ ರೀತಿಯ ಚಿತ್ರಗಳಿಗೆ ಬರೆಯೋದ್ರಿಂದ ಆತ್ಮಸಾಕ್ಷಿಗೆ ಖುಷಿ ಕೊಡುತ್ತೆ. ಈಗೋ ಬಿಟ್ಟರೆ ಲೈಫ್‌ ಇಸ್‌ ಬ್ಯೂಟಿಫುಲ್‌’ ಅಂದರು.

ಇನ್ನು ರೋಡ್‌ ರೇಜ್‌ ಕಿರುಚಿತ್ರವನ್ನ ಸೂರ್ಯ ನಿರ್ದೇಶನ ಮಾಡಿದ್ದು ಗಗನ್‌ ಶೇಖರ್‌, ಆದಿ, ಸಮೀರ್‌ ಆಚಾರ್ಯ, ಆದ್ಯ, ಯೋಷಿತಾ, ಯೋಶಿತಾ ಮತ್ತು ಮನು ಅಭಿನಯಿಸಿದ್ದಾರೆ.. ಪವನ್‌ ರಾವ್‌ ಸಂಗೀತ ನೀಡಿದ್ದು, ಪ್ರಮೋದ್‌ ಕೋಟ್ಯಾನ್‌ ಕ್ಯಾಮೆರಾ ವರ್ಕ್‌ ಸಿನಿಮಾಗಿದೆ.
ಸಾಯಿ ಗಗನ್‌ ಯೂಟ್ಯೂಬ್‌ ಚಾನೆಲ್‌ ನಲ್ಲಿ ರೋಡ್‌ ರೇಜ್‌ ಕಿರು ಚಿತ್ರ ಬಿಡುಗಡೆ ಆಗಿದೆ,

Leave a Reply

Your email address will not be published. Required fields are marked *