
KD The Devil ಒಂದು ಪಕ್ಕಾ ಪ್ರೇಮ್ ಸ್ಟೈಲ್ ಮಾಸ್ ಸಿನಿಮಾ. ಹಾರ್ಡ್-ಹಿಟ್ಟಿಂಗ್, ಪೈಸಾ ವಸೂಲ್ ಮಾಸ್ ದೃಶ್ಯಗಳೇ ಸಿನಿಮಾದ ಪ್ರಮುಖ ಆಕರ್ಷಣೆ.
ಸಿನಿಮಾ ಸಂಪೂರ್ಣವಾಗಿ 80ರ ದಶಕದ ಬೆಂಗಳೂರು ಸೆಟ್‌ನಲ್ಲಿ ನಡೆಯುತ್ತದೆ. ಪ್ರತಿಯೊಂದು ಪಾತ್ರವೂ ಯಾವಾಗಲೂ ಹೈನಲ್ಲಿ ಇರುವಂತೆ, ಸ್ವಲ್ಪ ಹೆಚ್ಚೇ ಎನರ್ಜಿ ಇಟ್ಕೊಂಡು ನಡ್ಕೊಳ್ತವೇ. ಅದ್ದೂರಿ ವಿಶುಯಲ್ಸ್, ಗ್ರ್ಯಾಂಡ್ ಸಿನೆಮಾಟೋಗ್ರಫಿ, ನೂರಾರು ಡ್ಯಾನ್ಸರ್‌ಗಳಿರುವ ಹಾಡುಗಳು… ಒಟ್ನಲ್ಲಿ ಒಂದ್ ಓವರ್ ವೈಬ್ ಅಲ್ಲೇ ಸಿನಿಮಾ ಇರುತ್ತೆ. ಆದರೆ ಅಂತಿಮವಾಗಿ ವರ್ಕ್ ಆಗೋದು ಮಾತ್ರ ಆ ಮಾಸ್ ಮೋಮೆಂಟ್ಸ್‌ಗಳೇ.
ಕ್ಲೈಮ್ಯಾಕ್ಸ್ ಕಡೆಗೆ Ramesh Aravind & Dhruva Sarja ದೃಶ್ಯಗಳಿವೆ ನೋಡಿ = ಫೈರ್ ಗುರು 🔥 ಅಬ್ಬಬ್ಬಾ ಅನಿಸೋ ಗೂಸ್‌ಬಂಪ್ಸ್ ಕ್ಷಣಗಳು ಬರೋದೇ ಅಲ್ಲಿ… ಸಿನಿಮಾದ ದೊಡ್ಡ ಹೈಲೈಟೇ ಈ ದೃಶ್ಯಗಳು!
ಅತಿಯಾಗಿ ಆಡೋ ಪಾತ್ರಗಳಿರೋ ಓವರ್ ದ ಟಾಪ್ ಎಂಟರ್ಟೈನರ್‌ಗಳನ್ನು ಇಷ್ಟಪಡದವರು ಇದ್ದಾರಲ್ಲ ಅವರಿಗೆ ಈ ಕೇಡಿ ಸಿನಿಮಾ ಆಗಿಬರಲ್ಲ.
ಅದೇ ಹೀರೋ ಆರಾಧನೆ ಮಾಡೋರು, ಹೀರೋ ಒಳ್ಳೆ ಎಮೋಷನ್ ಇಟ್ಕೊಂಡು ಹೊಡೆದಾಡೋದನ್ನ ಇಷ್ಟ ಪಡೋರು, ಮಾಸ್ ಮ್ಯಾಡ್ನೆಸ್ ಮತ್ತು ಆಕ್ಷನ್ ಬ್ಲಾಕ್ಸ್ ಇಷ್ಟಪಡುವವರಿಗೆ ಈ ಸಿನಿಮಾ ಪಕ್ಕಾ ಮಜಾ ಕೊಡುತ್ತೆ.
ಪರ್ಫಾರ್ಮನ್ಸ್ ಕಡೆಗೆ ನೋಡಿದರೆ – Dhruva Sarja ಕಾಳಿ ಪಾತ್ರದಲ್ಲಿ ಚಿತ್ರದುದ್ದಕ್ಕೂ ಹೈ ಎನರ್ಜಿ ಮೋಡ್ ನಲ್ಲೆ ಕಾಣಿಸಿಕೊಳ್ತಾರೆ. Reeshma Nanaiah ಮಚ್ ಲಕ್ಷ್ಮಿಯಾಗಿ ಮೊದಲಾರ್ಧದಲ್ಲಿ ತುಂಬಾ ಅತೀ ಅನ್ನಿಸಬಹುದು, ಆದರೆ ಸೆಕೆಂಡ್ ಹಾಫ್‌ನ ಒಂದು ಸುದೀರ್ಘ ಎಮೋಷನಲ್ ಸೀನ್‌ನಲ್ಲಿ ಮಿಂಚುತ್ತಾರೆ. Ramesh Aravind ಅಸಾಧಾರಣ ಅಂಶಗಳೊಂದಿಗೆ ಸರ್ಪ್ರೈಸ್ ಕೊಡುತ್ತಾರೆ. Sanjay Duttಗೆ ಒಳ್ಳೆ ಪಾತ್ರ ಸಿಕ್ಕಿದ್ದು, ತಮ್ಮ ಪ್ರೆಸೆನ್ಸ್ ಫೀಲ್ ಆಗುವಂತೆ ಮಾಡಿದ್ದಾರೆ. Shilpa Shetty ಕ್ಲೈಮ್ಯಾಕ್ಸ್‌ನಲ್ಲಿ ವರ್ಕ್ ಆಗುತ್ತಾರೆ. Kichcha Sudeep & V. Ravichandran ಇರುವಿಕೆ ಇನ್ನಷ್ಟು ಬೆಟ್ಟರ್ ಆಗಬಹುದಿತ್ತು. P. Ravi Shankar ತಮ್ಮ ಟ್ರೇಡ್ಮಾರ್ಕ್ ಬಿಲ್ಡ್-ಅಪ್ಸ್‌ನೊಂದಿಗೆ ಮೆರೆಯುತ್ತಾರೆ.
ಪ್ರೇಮ್ ಅವರಿಂದ Jogi ನಂತರ ಬಂದ ಉತ್ತಮ ಸಿನಿಮಾ ಇದು ಎನ್ನಬಹುದು. Dhruva Sarjaಗೂ ಇದು ಒಳ್ಳೆಯ ಕಂಬ್ಯಾಕ್.
ಹೌಸ್‌ಫುಲ್ ಥಿಯೇಟರ್‌ನಲ್ಲಿ, ಪ್ರಾಪರ್ ಮಾಸ್ ಅಟ್ಮಾಸ್ಫಿಯರ್‌ನಲ್ಲಿ KD ನೋಡಿದ್ರೆ ಮಾತ್ರ ಫುಲ್ ಕಿಕ್ ಸಿಗುತ್ತದೆ 🔥
NamCinema Rating ⭐ – 3.5/5