
ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಹೀರೋಗಳ ಕುರಿತಾಗಿ ಚರ್ಚೆಗಳು ನಡೆಯುತ್ತಿರುವ ಈ ಸಮಯದಲ್ಲಿ, ದಿಗ್ಗಜ ನಟ Vishnuvardhan ಅವರ ಮೊಮ್ಮಗ ಜೇಷ್ಠವರ್ಧನ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ಸಜ್ಜಾಗಿರುವ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ವಿಷ್ಣುವರ್ಧನ್ ನೆನಪಿನಲ್ಲಿ ‘ಕೋಟಿಗೊಬ್ಬ’ ರೀ-ರಿಲೀಸ್
ಅಭಿನಯ ಭಾರ್ಗವ, ಸಾಹಸ ಸಿಂಹ ಎಂದು ಪ್ರಸಿದ್ಧರಾಗಿದ್ದ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಯಜಮಾನ ದಾದಾ. ಅವರ ಸರಳತೆ, ಸಜ್ಜನಿಕೆ ಮತ್ತು ಅಪಾರ ಅಭಿಮಾನಿ ಬಳಗ ಇಂದು ಕೂಡ ಅಷ್ಟೇ ಬಲವಾಗಿದೆ.
ಸಾಹಸ ಸಿಂಹ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಯಜಮಾನ ದಾದಾ ಅವರು ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿ. ಅವರ ಸಜ್ಜನ ವ್ಯಕ್ತಿತ್ವವನ್ನು ಎಷ್ಟು ಕೊಂಡಾಡಿದರು ಕಡಿಮೆಯೇ. ಅವರ ಅಭಿಮಾನಿಗಳು ಅವರನ್ನು ಯಾವಾಗಲೂ ಆರಾಧಿಸುತ್ತಲೇ ಇರುತ್ತಾರೆ ಅದರ ಭಾಗವಾಗಿಯೇ ಅವರ ಅಭಿನಯದ ಕೋಟಿಗೊಬ್ಬ ಚಿತ್ರ ಏಪ್ರಿಲ್ 10 ರಂದು 25 ವರ್ಷಗಳ ಸವಿನೆನಪಿನಲ್ಲಿ ರೀ-ರಿಲೀಸ್ ಆಗುತ್ತಿದೆ.
ಜೇಷ್ಠವರ್ಧನ್ – ಸ್ಯಾಂಡಲ್‌ವುಡ್‌ಗೆ ಹೊಸ ಹೀರೋ?
ವಿಷ್ಣು ದಾದಾ ಅವರ ಸುಪುತ್ರಿ ಕೀರ್ತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ ಅವರ ಸುಪುತ್ರ ಜೇಷ್ಠವರ್ಧನ್ ಕನ್ನಡ ಕಲಾ ಪ್ರಪಂಚಕ್ಕೆ, ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಹೀರೋ ಆಗಿ ಎಂಟ್ರಿ ಕೊಡಲು ತಯಾರಾಗಿ ನಿಂತಿದ್ದಾರೆ. ನಟ ಅನಿರುದ್ಧ ಹಂಚಿಕೊಂಡಿರುವ ಅವರ ಮಗನ ಚಿತ್ರಗಳನ್ನು ನೋಡುತ್ತಿದ್ದರೆ, ಮೊದಲೇ ಹೀರೋಗಳ ಕೊರತೆಯಿಂದ ಸೊರಗಿ ಹೋಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಒಬ್ಬ ಯುವ ಹೀರೋ ಮೆಟೀರಿಯಲ್ ವಿಷ್ಣುವರ್ಧನ್ ಮೊಮ್ಮಗನ ರೂಪದಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಗಬಹುದಾ ಎಂಬ ಆಸೆ ಅಭಿಮಾನಿಗಳಲ್ಲಿ ಮೂಡುತ್ತಿದೆ. ಚಿತ್ರರಂಗ ಬಹಳ ವಿಶೇಷವಾದ – ವಿಚಿತ್ರವಾದ ಒಂದು ಉದ್ಯಮ. ಇಲ್ಲಿ ಯಶಸ್ವಿಯಾಗಬೇಕಾದರೆ ಅದೃಷ್ಟ, ಪರಿಶ್ರಮ, ರೂಪ, ನಡತೆ, ಹಿನ್ನೆಲೆ ಎಲ್ಲವೂ ಮುಖ್ಯವಾಗುತ್ತದೆ. ಈಗಿನ ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ನಟರು ಭರವಸೆ ಏನೋ ಮೂಡಿಸುತ್ತಿದ್ದಾರೆ. ಆದರೆ ಅಂತಹ ಹೇಳಿಕೊಳ್ಳುವಂತಹ ಜನರನ್ನ ಥಿಯೇಟರ್ ಗೆ ಕರೆಸಬಲ್ಲ ಹೀರೋ ಮೆಟೀರಿಯಲ್ ಗಳ ಕೊರತೆ ಬಹಳ ಇದೆ. ವಿಷ್ಣು ದಾದಾ ಮೊಮ್ಮಗ ಜೇಷ್ಠ ಮೇಲೆ ನಿರೀಕ್ಷೆ ಅಂತೂ ಇದ್ದೇ ಇದೆ. ಒಳ್ಳೆಯ ಕಥೆ, ನಿರ್ದೇಶಕ, ನಿರ್ಮಾಣ ಸಂಸ್ಥೆ ಹಾಗೂ ಸಮಯ ಎಲ್ಲವೂ ಚೆನ್ನಾಗಿ ಕೂಡಿಬಂದು ಜೇಷ್ಠ ಹೀರೋವಾಗಿ ಎದ್ದು ನಿಂತರೆ ವಿಷ್ಣುವರ್ಧನ್ ಅಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ಸಂತೋಷ ಇನ್ಯಾವುದಿದೆ.