‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ — ಮೆಚ್ಚುಗೆ ಪಡೆದ ಥ್ರಿಲ್ಲರ್ ಈಗ OTTಗೆ 💥

ಥಿಯೇಟರ್‌ನಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಮೆಚ್ಚುಗೆ ಗಳಿಸಿದ್ದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಇದೀಗ OTTಗೆ ಬರಲು ಸಜ್ಜಾಗಿದೆ. ಅಚ್ಚುಕಟ್ಟಾದ ಥ್ರಿಲ್ಲರ್ ಅನ್ನಿಸಿಕೊಂಡ ಈ ಸಿನಿಮಾ, ಈಗ ಮನೆಮಾತಾಗೋ ಸಮಯಕ್ಕೆ ಬಂದಿದೆ.

ಮಲೆನಾಡಿನ ಸೊಗಡು — ಕಥೆಯ ಬಲ ಈ ಚಿತ್ರದ ವಿಶೇಷವೆಂದರೆ, ಕಥೆಯ ಜೊತೆಗೆ ಮಲೆನಾಡಿನ ಸೊಗಡನ್ನು ಸುಂದರವಾಗಿ ತೆರೆ ಮೇಲೆ ತರಲಾಗಿದೆ. ಅಲ್ಲಿನ ಊರು, ಬದುಕು, ಪರಿಸರ ಎಲ್ಲವೂ ನೈಸರ್ಗಿಕವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ರಿಯಲ್ ಫೀಲ್ ಕೊಡುತ್ತದೆ.

ನಟನೆ — ಎಲ್ಲರೂ ನ್ಯಾಚುರಲ್
ಸೀತಾರಾಮನಾಗಿ ವಿಜಯ ರಾಘವೇಂದ್ರ ಇಷ್ಟವಾಗುವಂತೆ ಕಾಣಿಸಿಕೊಂಡಿದ್ದಾರೆ. ಸಬಾಸ್ಟಿನ್ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಗಮನ ಸೆಳೆದಿದ್ದಾರೆ. ಜೊತೆಗೆ, ಬಹುತೇಕ ಪಾತ್ರಗಳಲ್ಲಿ ಸ್ಥಳೀಯರನ್ನು ಬಳಸಿರುವುದು ಸಿನಿಮಾಕ್ಕೆ natural ಟಚ್ ನೀಡಿದೆ.

ಸಂಗೀತ ಮತ್ತು ಸರ್ಪ್ರೈಸ್ ಅಂಶ
ಕಥೆಯೊಂದಿಗೆ ಸಂಗೀತವನ್ನು ಬೆರೆಸಿದ ರೀತಿ ಮನಸೆಳೆಯುತ್ತದೆ. ಹಿನ್ನೆಲೆ ಸಂಗೀತ ಕೂಡ ಕಥೆಗೆ ಹತ್ತಿರವಾಗಿ ಕೆಲಸ ಮಾಡುತ್ತದೆ. ಸಾಗರ್ ಪುರಾಣಿಕ್ ಪಾತ್ರ ಸರ್ಪ್ರೈಸ್ ಎಲಿಮೆಂಟ್ ಆಗಿ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ.

OTTನಲ್ಲಿ ಮಿಸ್ ಮಾಡ್ಬೇಡಿ💥
ಇಷ್ಟು ಪಾಸಿಟಿವ್ ಅಂಶಗಳೊಂದಿಗೆ ಬಂದಿರುವ ‘ಸೀತಾರಾಮ್’ ಸಿನಿಮಾ ಇದೀಗ ಏಪ್ರಿಲ್ 17ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ. ಥಿಯೇಟರ್‌ನಲ್ಲಿ ಮಿಸ್ ಮಾಡಿದವರು, OTTನಲ್ಲಿ ತಪ್ಪದೇ ನೋಡಬಹುದಾದ ಸಿನಿಮಾ ಇದು. 🔥

Leave a Reply

Your email address will not be published. Required fields are marked *