
ಬೆಲ್ ಬಾಟಂ ಹಿಟ್ ಜೋಡಿಯಿಂದ ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಕ್ಷಣ ಇದೀಗ ಸಿನಿಪ್ರಿಯರ ಗಮನ ಸೆಳೆದಿದೆ. Rishab Shetty ಅವರು ನಿರ್ಮಾಪಕ Santosh Kumar KC ಅವರಿಗೆ ತಮ್ಮ ಹೊಸ ಸಿನಿಮಾಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಂತೋಷ್ ಕುಮಾರ್ ಕೆ.ಸಿ ನಿರ್ಮಾಣದ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರಕ್ಕೆ ರಿಷಬ್ ಶೆಟ್ಟಿ ಬೆಂಬಲ ಸೂಚಿಸಿದ್ದು, ಈ ಜೋಡಿಯ ಒಡನಾಟ ಮತ್ತೆ ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ. ‘ಬೆಲ್ ಬಾಟಂ’ ಮೂಲಕ ಸದ್ದು ಮಾಡಿದ ಈ ಕಾಂಬಿನೇಶನ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿರುವುದು ವಿಶೇಷ.
ಸಮರ್ಥ್ ಬಿ ಕಡಕೊಳ್ ನಿರ್ದೇಶನದ ಈ ಚಿತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನೀಡಿರುವ ಬೆಂಬಲ ಚಿತ್ರತಂಡಕ್ಕೆ ದೊಡ್ಡ ಬೂಸ್ಟ್ ಆಗಿದ್ದು, ಸಿನಿ ಅಭಿಮಾನಿಗಳಲ್ಲಿ ಕೂಡಾ ಕುತೂಹಲ ಹೆಚ್ಚಿಸಿದೆ.