
RCB ಕ್ರೇಜ್ಗೆ ಮತ್ತೊಂದು ಪವರ್ ಬೂಸ್ಟ್ ಕೊಟ್ಟಿದೆ ಡಾಲಿ ಪಿಕ್ಚರ್ಸ್ನ ‘ಮದರ್ ಪ್ರಾಮಿಸ್’!
“ಉರ್ಕೊಳೋರು ಉರ್ಕೊಳಿ… ಕಿತ್ಕೊಳಕ್ಕೆ ಆಗದಿಲ್ಲ ಏನು!” ಅಂತ ಮಾಸ್ ಎಂಟ್ರಿ ಕೊಡ್ತಾರೆ ಇಲ್ಲಿ ಡಾಲಿ 😎
ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಮೂಡಿಬರುತ್ತಿರುವ ‘ಮದರ್ ಪ್ರಾಮಿಸ್’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ ಆಗಿದ್ದು, ಇದು ಪಕ್ಕಾ RCB ಫ್ಯಾನ್ಸ್ಗೆ ಫೀಸ್ಟ್ ಆಗಿದೆ! ಹಾಡು ಕೇಳಿದ್ರೆ ಸಾಕು, ಅಭಿಮಾನಿಗಳ ಹೃದಯದಲ್ಲಿ ಸೀಟಿ ಹೊಡೆಯುತ್ತೆ 💥

ಇದು ರೆಗ್ಯುಲರ್ ಸಿನಿಮಾ ಅಲ್ಲ… ಡಾಲಿ ತಮ್ಮ ಸ್ನೇಹಿತರ ಬಳಗವನ್ನೇ ಜೊತೆಗೂಡಿಸಿಕೊಂಡು ಮಾಡ್ತಿರೋ ಪ್ರಾಜೆಕ್ಟ್. ಡೈರೆಕ್ಷನ್ ಹೊಣೆ ಹೊತ್ತಿರೋದು ಡಾಲಿ ಫ್ರೆಂಡ್ ಪೂರ್ಣಚಂದ್ರ ಮೈಸೂರು — ಇದು ಇನ್ನೊಂದು ಸ್ಪೆಷಲ್ ಹೈಲೈಟ್. ಡಾಲಿ ಪಿಕ್ಚರ್ಸ್ ಜೊತೆಗೂಡಿ ಹರ್ಷ ಕೂಡ ಈ ಸಿನಿಮಾಗೆ ಹಣ ಹೂಡಿದ್ದಾರೆ.
ಕೆಲ ದಿನಗಳ ಹಿಂದೆ ರಿಲೀಸ್ ಆದ ಪೋಸ್ಟರ್ ಕೂಡ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. “ಮದರ್ ಪ್ರಾಮಿಸ್” ಅನ್ನೋ ಟೈಟಲ್ ಕೇಳೋಕೆ ಎಮೋಷನಲ್ ಅನ್ಸುತ್ತೆ… ಆದ್ರೆ ಅದರ ಒಳಗೆ ಮಾಸ್ & ಎಂಟರ್ಟೈನ್ಮೆಂಟ್ ಫುಲ್ ಲೋಡ್ ಆಗಿದೆ!

ಈಗ ಬಂದಿರುವ ಫಸ್ಟ್ ಸಾಂಗ್ಗೆ ಇನ್ನೊಂದು ದೊಡ್ಡ ಪ್ಲಸ್ — ಖ್ಯಾತ ಗಾಯಕ ಗುರುಕಿರಣ್ ಅವರ ಧ್ವನಿ! ಬಹಳ ದಿನಗಳ ನಂತರ ಅವರ ವಾಯ್ಸ್ ಕೇಳೋಕೆ ಸಿಕ್ಕಿದೆ ಅನ್ನೋದೇ ಫ್ಯಾನ್ಸ್ಗೆ ಒಂದು ಟ್ರೀಟ್ 🎶
ಹಾಡಿನಲ್ಲಿ ಡಾಲಿ, ಪೂರ್ಣ ಮೈಸೂರು ಮತ್ತು ಫ್ರೆಂಡ್ಸ್ ಎಲ್ಲರೂ ಸೇರಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ವೈಟ್ ಸೂಟ್ನಲ್ಲಿ ಡಾಲಿ ಸ್ಟೈಲಿಶ್ ಎಂಟ್ರಿ ಕೊಡೋದು ಪಕ್ಕಾ ಹೈಲೈಟ್ ಆಗುತ್ತೆ 😎🔥

ಈ ಹಾಡಿಗೆ ಮ್ಯೂಸಿಕ್ ಕೊಟ್ಟಿರೋದು ನವನೀತ್ ಶ್ಯಾಮ್, ಲಿರಿಕ್ಸ್ ಬರೆದಿರೋದು ಶಶಾಂಕ್ ಸೋಘಲ್. ಟ್ಯೂನ್ ಕೂಡ ಕ್ಯಾಚಿ ಆಗಿ ಸೆಟ್ ಆಗಿದೆ 👌
‘ಮದರ್ ಪ್ರಾಮಿಸ್’ ಒಂದು ಕಾಮಿಡಿ + ಥ್ರಿಲ್ಲಿಂಗ್ ಎಂಟರ್ಟೈನರ್. ಡಾಲಿ ಧನಂಜಯ ಜೊತೆ ನಟ ನಾಗಭೂಷಣ್, ಹಿರಿಯ ನಟಿ ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಹಲವರು ನಟಿಸಿದ್ದಾರೆ.

ಈ ಸಿನಿಮಾದ ಮೂಲಕ ಡಾಲಿ ಫ್ರೆಂಡ್ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ. ನಿರ್ದೇಶನ ಪೂರ್ಣ ಮೈಸೂರು ಕೈಯಲ್ಲಿ ಇದ್ದು, ‘ಡೇರ್ ಡೆವಿಲ್ ಮುಸ್ತಾಫ’ ನಿರ್ದೇಶಕ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ವರ್ಕ್ ಮಾಡ್ತಿದ್ದಾರೆ.
ಕ್ಯಾಮೆರಾ ವರ್ಕ್ ರಾಹುಲ್ ರಾಯ್, ಮ್ಯೂಸಿಕ್ ನವನೀತ್ ಶ್ಯಾಮ್ — ಒಟ್ಟಾರೆ ತಂಡ ತುಂಬಾ ಸ್ಟ್ರಾಂಗ್ ಆಗಿದೆ!
ಒಟ್ಟಿನಲ್ಲಿ… ‘ಮದರ್ ಪ್ರಾಮಿಸ್’ RCB ಫ್ಯಾನ್ಸ್ಗೂ, ಮಾಸ್ ಸಿನಿಮಾ ಲವರ್ಸ್ಗೂ ಪಕ್ಕಾ ಹಬ್ಬ ಆಗೋ ಅಂತ ಲಕ್ಷಣಗಳು ಕಾಣ್ತಿದೆ 💥🏏
