
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘Toxic’ ಇದೀಗ ದಕ್ಷಿಣ ಭಾರತೀಯ ಸಿನಿ ವಲಯದಲ್ಲೇ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ‘Jailer 2’ ಸಿನಿಮಾ ತನ್ನ ಮೂಲ ಆಗಸ್ಟ್ 15 ರಿಲೀಸ್ ಪ್ಲ್ಯಾನ್ ಅನ್ನು ಬದಲಾಯಿಸಲು ಕಾರಣವೇ ಯಶ್ ಸಿನಿಮಾದ ಭಾರೀ ಹೈಪ್ ಎನ್ನುವ ಚರ್ಚೆ ಈಗ ಟ್ರೇಡ್ ಸರ್ಕಲ್‌ನಲ್ಲಿ ಜೋರಾಗಿದೆ.
ಮೊದಲು ‘Jailer 2’ ತಂಡ ಆಗಸ್ಟ್ 14 ಅಥವಾ 15ರ ಸ್ವಾತಂತ್ರ್ಯೋತ್ಸವ ವೀಕೆಂಡ್ ಟಾರ್ಗೆಟ್ ಮಾಡಿತ್ತು ಎನ್ನಲಾಗಿತ್ತು. ಆದರೆ ಈಗ ಸೆಪ್ಟೆಂಬರ್ 11ಕ್ಕೆ ಚಿತ್ರವನ್ನು ಶಿಫ್ಟ್ ಮಾಡುವ ಚರ್ಚೆಗಳು ಬಲವಾಗಿ ಕೇಳಿಬರುತ್ತಿವೆ. ಗಣೇಶ ಚತುರ್ಥಿ ಹಾಲಿಡೇ ವೀಕೆಂಡ್‌ನಲ್ಲಿ ಸೋಲೋ ರನ್ ಸಿಗಬೇಕು ಎಂಬ ಲೆಕ್ಕಾಚಾರದಲ್ಲಿ ರಜಿನಿ ಸಾರ್ ತಂಡ ಈ ನಿರ್ಧಾರಕ್ಕೆ ಬಂದಿದೆಯಂತೆ.
ಈ ರಿಲೀಸ್ ಬದಲಾವಣೆ ಇದೀಗ ಯಶ್ ಅಭಿನಯದ ‘Toxic’ ಸಿನಿಮಾಗೆ ಬಂಪರ್ ಅವಕಾಶ ನೀಡಿದೆ. ಮೊದಲಿಗೆ ಮಾರ್ಚ್ 19 ಹಾಗೂ ನಂತರ ಜೂನ್ 4 ಬಿಡುಗಡೆ ಮಾತು ಕೇಳಿಬಂದಿದ್ದರೂ, ಪೋಸ್ಟ್ ಪ್ರೊಡಕ್ಷನ್ ಹಾಗೂ ಗ್ಲೋಬಲ್ ರಿಲೀಸ್ ಸ್ಟ್ರಾಟಜಿಯ ಕಾರಣ ಚಿತ್ರ ಮುಂದೂಡಲ್ಪಟ್ಟಿತ್ತು. ಈಗ ಖಾಲಿಯಾದ ಆಗಸ್ಟ್ ವಿಂಡೋವನ್ನು ‘Toxic’ ತಂಡ ಬಳಸಿಕೊಳ್ಳುವ ಸಾಧ್ಯತೆ ಗಟ್ಟಿಯಾಗಿದೆ.
‘KGF’ ಬಳಿಕ ಯಶ್ ಯಾವ ರೀತಿಯ ಕಂಬ್ಯಾಕ್ ಕೊಡುತ್ತಾರೆ ಎಂಬ ಕುತೂಹಲ ದೇಶದಾದ್ಯಂತ ಇದೆ. ಅದಕ್ಕೆ ತಕ್ಕಂತೆ ‘Toxic’ ಚಿತ್ರದ ಮೇಲೆ ಕ್ರೇಜ್ ದಿನದಿಂದ ದಿನಕ್ಕೆ ಏರುತ್ತಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಭಾರೀ ಸ್ಟೈಲಿಷ್ ಹಾಗೂ ಡಾರ್ಕ್ ಆಕ್ಷನ್ ವರ್ಲ್ಡ್ ಕಟ್ಟುತ್ತಿರುವುದು ಈಗಾಗಲೇ ಟೀಸರ್ ಮತ್ತು ಪೋಸ್ಟರ್‌ಗಳಿಂದ ಸ್ಪಷ್ಟವಾಗಿದೆ.
ಇನ್ನೊಂದೆಡೆ ನಿರ್ದೇಶಕ ನೆಲ್ಸನ್ ದಿಲೀಪಕುಮಾರ್ ನಿರ್ದೇಶನದ ‘Jailer 2’ ಕೂಡ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಆದರೆ ಯಶ್ ಸಿನಿಮಾದ ಪ್ಯಾನ್ ಇಂಡಿಯಾ ಹೈಪ್ ಹಾಗೂ ಆಗಸ್ಟ್ ವಿಂಡೋದಲ್ಲಿ ಬಾಕ್ಸ್ ಆಫೀಸ್ ಕ್ಲ್ಯಾಶ್ ಬೇಡ ಎನ್ನುವ ಕಾರಣದಿಂದಲೇ ರಜಿನಿ ಸಾರ್ ತಂಡ ಸೇಫ್ ಗೇಮ್ ಆಡುತ್ತಿದೆ ಎನ್ನುವ ಟಾಕ್ ಸಿನಿ ವಲಯದಲ್ಲಿ ಜೋರಾಗಿದೆ.
ಒಟ್ಟಾರೆ, ಕನ್ನಡದ ಸ್ಟಾರ್ ಯಶ್ ಅವರ ‘Toxic’ ಇನ್ನೂ ಅಧಿಕೃತ ರಿಲೀಸ್ ಡೇಟ್ ಘೋಷಿಸದೇ ಇದ್ದರೂ, ಈಗಾಗಲೇ ಬೇರೆ ಇಂಡಸ್ಟ್ರಿಗಳ ದೊಡ್ಡ ಸಿನಿಮಾಗಳ ರಿಲೀಸ್ ಪ್ಲ್ಯಾನ್‌ಗಳನ್ನೇ ಬದಲಾಯಿಸುವ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದು ರಾಕೀ ಭಾಯ್ ಸಾಧನೆಯೇ ಅಲ್ಲವೇ.