ಸೈಬರ್ ಫ್ರಾಡ್ ಥ್ರಿಲ್ಲರ್ ಸಿನಿಮಾ “ಗೀಕ್”ನಲ್ಲಿ ಚೈತ್ರಾ ಆಚಾರ್

ಸ್ಯಾಂಡಲ್‌ವುಡ್‌ನಲ್ಲಿ ಹೊಸಹೊಸ ಪ್ರಯೋಗಗಳು ಜೋರಾಗುತ್ತಿರುವ ಈ ಸಮಯದಲ್ಲಿ, ನಟಿ ಚೈತ್ರ J ಆಚಾರ್ ಇದೀಗ ಮತ್ತೊಂದು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಗೀಕ್’ (Geek) ಎಂಬ ಸೈಬರ್ ಥ್ರಿಲ್ಲರ್ ಕಥೆಯಲ್ಲಿ ಚೈತ್ರಾ ಅಚಾರ್ ಡಾರ್ಕ್ ವೆಬ್ ಲೋಕಕ್ಕೆ ಎಂಟ್ರಿ ಕೊಡುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.

ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ಟೆಕ್ನಾಲಜಿ, ಸೈಬರ್ ಕ್ರೈಮ್ ಮತ್ತು ಡಿಜಿಟಲ್ ಜಗತ್ತಿನ ಅಪಾಯಕಾರಿ ಮುಖವನ್ನು ತೋರಿಸುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಅದೇ ಹಾದಿಯಲ್ಲಿ ಸಾಗುತ್ತಿರುವ ‘ಗೀಕ್’ ಸಿನಿಮಾ, ಮೊಬೈಲ್ ಡೇಟಾ ಸುರಕ್ಷಿತವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕಥೆಯನ್ನು ಹೇಳಲಿದೆ.

ಡಾರ್ಕ್ ವೆಬ್‌ನ ಅಜ್ಞಾತ ಹಾಗೂ ಭೀತಿದಾಯಕ ಜಗತ್ತಿನ ಸುತ್ತ ಕಥೆ ಸಾಗುತ್ತ, ಚೈತ್ರಾ ಅಚಾರ್ ಪಾತ್ರವೂ ಸಾಕಷ್ಟು ಇಂಟೆನ್ಸ್ ಆಗಿರಲಿದೆ ಎನ್ನಲಾಗಿದೆ.

ಪಾತ್ರಗಳ ಆಯ್ಕೆಯಲ್ಲಿ ಸದಾ ವಿಭಿನ್ನತೆ ಹುಡುಕುವ ಚೈತ್ರಾ ಆಚಾರ್, ಮತ್ತೆ ಹೊಸ ಜಾನರ್‌ಗೆ ಕಾಲಿಟ್ಟಿದ್ದಾರೆ. ‘ಟೋಬಿ’, ‘ಬ್ಲಿಂಕ್’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ತನ್ನ ನೈಜ ಅಭಿನಯದಿಂದ ಗಮನ ಸೆಳೆದಿದ್ದ ಅವರು, ಈಗ ಟೆಕ್-ಬೇಸ್‌ಡ್ ಥ್ರಿಲ್ಲರ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಅಚ್ಚರಿ ಪಡಿಸಲು ಸಜ್ಜಾಗಿದ್ದಾರೆ.

‘ಗೀಕ್’ ಸಿನಿಮಾ ಕೇವಲ ಥ್ರಿಲ್ಲರ್ ಆಗಿರದೇ, ಇಂದಿನ ಡಿಜಿಟಲ್ ಜಗತ್ತಿನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುವ ಕಥೆಯಾಗಿಯೂ ಮೂಡಿಬರಲಿದೆ ಎನ್ನಲಾಗುತ್ತಿದೆ. ಸೈಬರ್ ಲೋಕದ ಅಂಧಕಾರದ ಬಾಗಿಲು ತೆರೆದು, ಪ್ರೇಕ್ಷಕರನ್ನು ಹೊಸ ಅನುಭವಕ್ಕೆ ಕರೆದುಕೊಂಡು ಹೋಗುವ ಭರವಸೆಯನ್ನು ಚಿತ್ರತಂಡ ನೀಡಿದೆ.

Leave a Reply

Your email address will not be published. Required fields are marked *