
‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಂ ಮೆಕ್ಸಿಕೋ’ ಬಳಗದಿಂದ ಭರ್ಜರಿ ಅಪ್‌ಡೇಟ್ ಸಿಕ್ಕಿದೆ. ಈಗಾಗಲೇ ರಿಲೀಸ್ ಆಗಿ ಧೂಳೆಬ್ಬಿಸಿದ್ದ ‘ಪುಟ್ಟಮಲ್ಲಿ’ ಮೆಲೋಡಿ ಟ್ರ್ಯಾಕ್ ಸೂಪರ್ ಹಿಟ್ ಆದ ಬೆನ್ನಲ್ಲೇ, ಚಿತ್ರತಂಡವೀಗ ಡಾಲಿ ಫ್ಯಾನ್ಸ್‌ಗೆ ಕಿಕ್ ಕೊಡುವಂತಹ ಪವರ್‌ಫುಲ್ ಮಾಸ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದೆ.
ವೈರಲ್ ಆಗ್ತಿದೆ ‘ಮಾಸಿಗೂ ಅಣ್ಣನೇ’ ಲಿರಿಕಲ್ ಸಾಂಗ್!
“ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೇ, ಮಾಸ್ಟರು ಅಣ್ಣನೇ ಬ್ಲಾಸ್ಟರ್ರೂ ಅಣ್ಣನೇ, ಮಾರ್ನಿಂಗು ಅಣ್ಣನೇ ಇವ್ನಿಂಗ್ ಅಣ್ಣನೇ…” ಎಂಬ ಕ್ಯಾಚಿ ಸಾಲುಗಳ ಈ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- ಸಾಹಿತ್ಯ: ನಾಗಾರ್ಜುನ್ ಶರ್ಮಾ
- ಗಾಯನ: ಆಂಟೋನಿ ದಾಸನ್ ಮತ್ತು ನಕಾಶ್ ಅಜೀಜ್
- ಸಂಗೀತ: ವಾಸುಕಿ ವೈಭವ್

ವಾಸುಕಿ ವೈಭವ್ ಅವರ ಮಾಸ್ ಬೀಟ್ಸ್ ಹಾಗೂ ಆಂಟೋನಿ ದಾಸನ್-ನಕಾಶ್ ಅಜೀಜ್ ಅವರ ಎನರ್ಜಿಟಿಕ್ ಕಂಠಸಿರಿ ಡಾಲಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ.
ಮತ್ತೆ ಒಂದಾದ ‘ಬಡವ ರಾಸ್ಕಲ್’ ಹಿಟ್ ಕಾಂಬೋ
‘ಬಡವ ರಾಸ್ಕಲ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ಶಂಕರ್ ಗುರು ಮತ್ತು ಧನಂಜಯ್ ಈ ಚಿತ್ರದ ಮೂಲಕ ಮತ್ತೊಮ್ಮೆ ಒಂದಾಗಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ಚಿತ್ರದಲ್ಲಿ ಧನಂಜಯ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಸಾಥ್ ನೀಡಿದ್ದಾರೆ. ಉಳಿದಂತೆ ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ, ಪೂರ್ಣಚಂದ್ರ ಮೈಸೂರು ಹಾಗೂ ಹುಲಿ ಕಾರ್ತಿಕ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.’

ಡಿಸೆಂಬರ್ 24ಕ್ಕೆ ಅದ್ದೂರಿ ರಿಲೀಸ್!
ಐರಾ ಫಿಲಂಸ್ ಮತ್ತು ರಾಯಲ ಸ್ಟುಡಿಯೋಸ್ ಜಂಟಿ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ. ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಹಾಗೂ ಜಾನ್ವಿ ರಾಯಲ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎ ಜೆ ಶೆಟ್ಟಿ ಮತ್ತು ಎಸ್. ಕೆ. ರಾವ್ ಛಾಯಾಗ್ರಹಣವಿದ್ದು, ನಿರಂಜನ್ ದೇವರಮನೆ ಹಾಗೂ ಅಜಯ್ ಕುಮಾರ್ ಸಂಕಲನ ಮಾಡಿದ್ದಾರೆ.
ಈಗಾಗಲೇ ಸಾಂಗ್ಸ್ ಮೂಲಕ ನಿರೀಕ್ಷೆ ಗರಿಗೆದರಿಸಿರುವ ಈ ಮಾಸ್ ಎಂಟರ್‌ಟೈನರ್ ಸಿನಿಮಾ ಇದೇ ಡಿಸೆಂಬರ್ 24ರಂದು ರಾಜ್ಯಾದ್ಯಂತ ತೆರೆಕಾಣಲಿದೆ.