ಸ್ಟಾರ್ ಇಲ್ಲ… ‘ಪೀಟರ್’ ಕಥೆನೇ ಸ್ಟಾರ್ ಆಗ್ತಿದೆ!

ರಿಲೀಸ್ ಆದ್ಮೇಲೆ ಪಾಸಿಟಿವ್ ರೆಸ್ಪೋನ್ಸ್ ✌️
ಏಪ್ರಿಲ್ 10ರಂದು ಬಿಡುಗಡೆಯಾದ ‘ಪೀಟರ್’ಗೆ ಆರಂಭದಿಂದಲೇ ಒಳ್ಳೆಯ ಟಾಕ್. ಮಲ್ಟಿಪ್ಲೆಕ್ಸ್‌ಗಳಲ್ಲಿ ಸೂಪರ್ ರೆಸ್ಪಾನ್ಸ್. ಸಿಂಗಲ್ ಸ್ಕ್ರೀನ್‌ಗಳಲ್ಲೂ ಪಿಕ್‌ಅಪ್ ಆಗಿತ್ತು. ಮಂಡ್ಯ, ಮೈಸೂರು, ಶಿವಮೊಗ್ಗ, ದಾವಣಗೆರೆ, ಬೆಂಗಳೂರು — ಎಲ್ಲ ಕಡೆ ನಿಧಾನವಾಗಿ ಸಿನಿಮಾ ನೋಡೋ ಜನ ಹೆಚ್ಚಾಗ್ತಿದ್ದಾರೆ.

ಸ್ಟಾರ್ ಇಲ್ಲ, ಕಂಟೆಂಟ್ ಹಿಟ್👌
ಸ್ಟಾರ್ ಕಾಸ್ಟ್ ಇಲ್ಲದಿದ್ದರೂ, ಕಂಟೆಂಟ್ ಮತ್ತು ಕ್ವಾಲಿಟಿ ಚಿತ್ರದ ದೊಡ್ಡ ಪ್ಲಸ್. ರಿವ್ಯೂಗಳು ಜನರನ್ನು ಥಿಯೇಟರ್‌ಗೆ ಎಳೆಯುತ್ತಿವೆ.

ಸೆಕೆಂಡ್ ವೀಕ್‌ಗೂ ಸ್ಟ್ರಾಂಗ್ ರನ್ 🙏
ಮೊದಲ ವಾರ ಸಕ್ಸಸ್. ಇದೇ ವೇಗ ಇದ್ದರೆ, ಇನ್ನಷ್ಟು ಥಿಯೇಟರ್‌ಗಳಲ್ಲಿ ರಿಲೀಸ್ ಆಗೋ ಚಾನ್ಸ್ ಇದೆ.

ಟೆಕ್ನಿಕಾಲಿಟಿ & ಕಥೆ — ಎರಡೂ ಸ್ಟ್ರಾಂಗ್ ಇರೋ ವಿಶಿಷ್ಟ ಚಿತ್ರಕಥೆ, ಹಿಡಿಸುವ ದೃಶ್ಯಗಳು. ಭಾವನಾತ್ಮಕವಾಗಿ ಕೂಡ ಟಾಪ್ ಲೆವೆಲ್ ಪರ್ಫಾರ್ಮೆನ್ಸ್.

ಸುಕೇಶ್ ಶೆಟ್ಟಿ ಟಚ್ ವರ್ಕೌಟ್ ಆಗಿದೆ 💥
‘ದೂರದರ್ಶನ’ ನಂತರ ಸುಕೇಶ್ ಶೆಟ್ಟಿ ಮತ್ತೊಮ್ಮೆ ಪ್ರೇಕ್ಷಕರ ನಾಡಿ ಹಿಡಿದಿದ್ದಾರೆ. ಒಟ್ಟಿನಲ್ಲಿ ‘ಪೀಟರ್’ — ಕಂಟೆಂಟ್ ನಿಂದ ಗೆದ್ದ ಸಿನಿಮಾ. ಈಗ ಟ್ರೆಂಡ್ ಕ್ಲಿಯರ್ ನೋಡಿ… ಸ್ಟಾರ್ ಅಲ್ಲ, ಸ್ಟೋರಿ ಮುಖ್ಯ! 🔥

Leave a Reply

Your email address will not be published. Required fields are marked *