‘ಜನನಾಯಗನ್’ ಛಾಯೆ ‘ಕೆಡಿ’ ಮೇಲೂ? ಸೆನ್ಸಾರ್ ಗೊಂದಲಕ್ಕೆ ಪ್ರೇಮ್ ಸಿನಿಮಾ! 💥

KVN ಪ್ರೊಡಕ್ಷನ್ಸ್ ನಿರ್ಮಾಣದ ‘ಕೆಡಿ’ ರಿಲೀಸ್‌ಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಹೊಸ ತಲೆನೋವು ಎದುರಾಗಿದೆ. ಇನ್ನೇನು ಎರಡು ವಾರಗಳಲ್ಲಿ ತೆರೆಗೆ ಬರಬೇಕಿರುವ ಈ ಸಿನಿಮಾಗೆ ಸೆನ್ಸಾರ್ ಹಂತದಲ್ಲೇ ಕಂಟಕ ಎದುರಾಗಿದೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮತ್ತು ರವಿಚಂದ್ರನ್ ಅಭಿನಯದ ‘ಕೆಡಿ’ ಏಪ್ರಿಲ್ 30ಕ್ಕೆ ರಿಲೀಸ್ ಪ್ಲಾನ್. ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಿನಿಮಾ ನೋಡಿ ಕೆಲವು ಕಟ್‌ಗಳೊಂದಿಗೆ ‘A’ ಸರ್ಟಿಫಿಕೆಟ್ ನೀಡಿತ್ತು.

ಆದ್ರೆ ಟ್ವಿಸ್ಟ್ ಏನಂದ್ರೆ — ಮುಂಬೈನ ಕೇಂದ್ರ ಸೆನ್ಸಾರ್ ಮಂಡಳಿ, ಯಾರಿಗೂ ತಿಳಿಸದೇ ಸಿನಿಮಾನ ರಿವೈಸಿಂಗ್ ಕಮಿಟಿಗೆ ಕಳುಹಿಸಿದೆ ಎನ್ನಲಾಗುತ್ತಿದೆ. ಇದೇ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಮೊದಲು ದಳಪತಿ ವಿಜಯ್ ನಟನೆಯ ‘ಜನನಾಯಗನ್’ಗೂ ಇದೇ ರೀತಿಯ ಸೆನ್ಸಾರ್ ಗೊಂದಲ ಎದುರಾಗಿ, ಕೋರ್ಟ್‌ವರೆಗೂ ಹೋಗಿದ್ದ ಘಟನೆ ಇನ್ನೂ ತಾಜಾ ಇದೆ. ಹೀಗಾಗಿ ‘ಕೆಡಿ’ಗೂ ಅದೇ ಹಾದಿ ಎನ್ನುವ ಅನುಮಾನಗಳು ಮೂಡಿವೆ.

ಇನ್ನೂ ‘ಸೆರಗು ಸರಿಸೆ..’ ಹಾಡಿನ ಸಾಲು ಬದಲಾವಣೆ ಸೇರಿ ಕೆಲವು ಆಕ್ಷೇಪಣೆಗಳಿದ್ದರೂ, ಪ್ರಾದೇಶಿಕ ಮಂಡಳಿ ಕ್ಲಿಯರ್ ಕೊಟ್ಟಿದ್ದರೂ, ಕೇಂದ್ರದ ಈ ನಡೆಗೆ ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗ ‘ಕೆಡಿ’ ರಿವೈಸಿಂಗ್ ಕಮಿಟಿ ಮುಂದೆ. 15 ದಿನಗಳಲ್ಲಿ ಸಮಸ್ಯೆ ಕ್ಲಿಯರ್ ಆಗುತ್ತಾ? ಇಲ್ಲ ಮತ್ತೆ ಸೆನ್ಸಾರ್ ಡ್ರಾಮಾನೇ? ಅನ್ನೋದನ್ನ ನೋಡೋಕೆ ಗಾಂಧಿನಗರ ಕಾದು ಕೂತಿದೆ! ‎

Leave a Reply

Your email address will not be published. Required fields are marked *