‘ಕೆಡಿ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೇಮಿಯೋ: ಪ್ರೇಮ್ ಟ್ವೀಟ್‌ನಿಂದ ಅಧಿಕೃತ ಘೋಷಣೆ!

ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ KD: The Devil ಇದೀಗ ಮತ್ತಷ್ಟು ಹೈಪ್ ಪಡೆಯುತ್ತಿದೆ. ನಿರ್ದೇಶಕ Prem ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಕಿಚ್ಚ ಸುದೀಪ್ ಅವರ ಎಂಟ್ರಿಯನ್ನು ಅಧಿಕೃತವಾಗಿ ದೃಢಪಡಿಸಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಕನ್ನಡದ ಬಹುಭಾಷಾ ಸ್ಟಾರ್ Kichcha Sudeep ಈ ಸಿನಿಮಾದಲ್ಲಿ ಕೇಮಿಯೋ (guest appearance) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಕಾನ್ಫರ್ಮ್ ಆಗಿದೆ. ಈ ಬಗ್ಗೆ ಕೆಲವು ದಿನಗಳಿಂದ ಗಾಸಿಪ್ ಹರಿದಾಡುತ್ತಿದ್ದರೂ, ಇದೀಗ ಪ್ರೇಮ್ ಹಂಚಿಕೊಂಡಿರುವ ಪೋಸ್ಟ್ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದೆ.

ಭಾರೀ ಸ್ಟಾರ್ ಕಾಸ್ಟ್ ಜೊತೆಗೆ ಕಿಚ್ಚ ಎಂಟ್ರಿ

ಈಗ ಕೇಡಿ ಸಿನಿಮಾದ ಭರ್ಜರಿ ಕಾಂಟ್ರವರ್ಸಿ ಎಲ್ಲಾ ಕಡೆ ಹವಾ ಮಾಡಿದೆ. ಆದರೆ ಆ controversy ಯನ್ನು ಮರೆಸೋ ಅಂತಹ ಬೊಂಬಾಟ್ ಅಪ್ಡೇಟ್ ಸಿನಿಮಾ ತಂಡದಿಂದ ಬಂದಿದೆ. ಅದೇನೆಂದರೆ ಕೇಡಿ ಸಿನಿಮಾದಲ್ಲಿ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಕೂಡ ನಟಿಸಿದ್ದಾರೆ ಅನ್ನೋದು. ಈಗಾಗಲೇ ಸಿನಿಮಾದಲ್ಲಿ ರವಿಚಂದ್ರನ್ ರಮೇಶ್ ಅರವಿಂದ್ ರಂತಹ ಸೂಪರ್ ಸ್ಟಾರ್ಗಳೇ ಇದ್ದಾರೆ. ಈಗ ಕಿಚ್ಚ ಸುದೀಪ್ ಕೂಡ ಸಿನಿಮಾದಲ್ಲಿ ಇರೋದು ಕೇಡಿ ಸಿನಿಮಾಗೆ ದೊಡ್ಡ ಪವರ್ ಸಿಕ್ಕಂತೆ ಆಗಿದೆ. ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಸಿನಿಮಾವನ್ನ ತಡೆಯೋರು ಯಾರು ಇಲ್ಲ. ಯಾಕೆಂದರೆ ಸಿನಿಮಾ ಗೆಲ್ಲಿಸಿ ಕೊಡುವ ಎಲ್ಲಾ ಸ್ಟಾರ್ ಗಳು ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳು ಸಿನಿಮಾದಲ್ಲಿದೆ. 

‘ದಿ ವಿಲನ್’ ನಂತರ ಮತ್ತೆ ಪ್ರೇಮ್-ಸುದೀಪ್ ಜೋಡಿ

ನಿರ್ದೇಶಕ ಪ್ರೇಮ್ ಮತ್ತು ಸುದೀಪ್ ಈ ಹಿಂದೆ The Villain ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಆ ಸಿನಿಮಾ ಭಾರೀ ಚರ್ಚೆಗೆ ಗ್ರಾಸವಾಗಿದ್ದರೆ, ಈಗ ‘ಕೆಡಿ’ ಮೂಲಕ ಈ ಕಾಂಬಿನೇಶನ್ ಮತ್ತೆ ಬರುತ್ತಿರುವುದು ವಿಶೇಷ.

Leave a Reply

Your email address will not be published. Required fields are marked *