RESPONSIVE LEADERBOARD AD AREA
Film News

ಸಂಕ್ರಾಂತಿಗೆ ಕೇಳಲಿದ್ದೀರಿ ‘ಯಜಮಾನ’ನ ಹಾಡು…!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಚಿತ್ರದ ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ಇಂಟ್ರೊಡಕ್ಷನ್ ಸಾಂಗ್ ಆಗಿದ್ದು, ದರ್ಶನ್ ಅವರನ್ನು ಬಹಳ ವಿಭಿನ್ನವಾಗಿ ಈ ಹಾಡಿನ ಮುಖಾಂತರ ತೋರಿಸಲಾಗಿದೆ ಎನ್ನುತ್ತಾರೆ ನಿರ್ಮಾಪಕಿ ಶೈಲಜಾ ನಾಗ್.

ಈ ಚಿತ್ರದ ಮ್ಯೂಸಿಕ್ ಅಲ್ಬಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ವಿಶೇಷವಾದದ್ದಾಗಿದ್ದು, ಈ ಜೋಡಿಯ 25 ನೇ ಸಿನಿಮಾ ಇದಾಗಿದೆ. ‘ಶಿವನಂದಿ..’ ಎಂದು ಆರಂಭವಾಗುವ ಈ ಗೀತೆಯನ್ನು ನಿರ್ದೇಶಕ ಚೇತನ್ ಕುಮಾರ್ ಬರೆದಿದ್ದಾರೆ.

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ಇದೊಂದು ದೊಡ್ಡ ಬಜೆಟ್ ನ ಚಿತ್ರವಾಗಿದ್ದು, vfx ಎಫೆಕ್ಟ್ಸ್ ಮತ್ತು ತ್ರೀಡಿ ಕ್ರಿಯೇಶನ್ಸ್ ಒಳಗೊಂಡ ದೊಡ್ಡ ದೊಡ್ಡ ಸೆಟ್ ಗಳಲ್ಲಿ ಚಿತ್ರದ ಹಾಡುಗಳನ್ನು ಚಿತ್ರೀಕರಿಸಲಾಗಿದೆ.

ಚಿತ್ರತಂಡ ಸ್ವೀಡನ್ ನಲ್ಲಿ ಹಾಡುಗಳನ್ನು ಚಿತ್ರೀಕರಿಸಿದೆ. ಚಾಲೆಂಜಿಂಗ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ ಸ್ವೀಡನ್ ನಲ್ಲಿ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಸಂಗೀತ ನಿರ್ದೇಶಕ ಹರಿಕೃಷ್ಣ ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚನೆಯಲ್ಲಿ ‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ಜೊತೆಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದರು. ಚಿತ್ರಕ್ಕೆ ಸಂಗೀತ ನಿರ್ದೇಶನದ ಜೊತೆಗೆ, ಹರಿಕೃಷ್ಣ ಈ ಚಿತ್ರದ ನಿರ್ದೇಶನವನ್ನೂ ಕೂಡ ಮುಂದೆ ನಿಂತು ಮಾಡಿದ್ದಾರೆ.

ಚಿತ್ರಕ್ಕೆ ಬಿ ಸುರೇಶ ಮತ್ತು ಶೈಲಜಾ ನಾಗ್ ಹಣ ಹೂಡಿದ್ದು, ಚಿತ್ರದಲ್ಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ತಾನ್ಯ ಹೋಪ್ ಹಾಗೂ ರಶ್ಮಿಕ ಮಂದಣ್ಣ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶ್ರೀಶ ಕುಡುವಳ್ಳಿ ಛಾಯಾಗ್ರಹಣ ಚಿತ್ರಕ್ಕೆ ಇದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top