RESPONSIVE LEADERBOARD AD AREA
Movie Articles

‘ರಾಜಕುಮಾರ’ನಿಗೆ ಮತ್ತೊಂದು ಫಿಲ್ಮ್ ಫೇರ್ ಅವಾರ್ಡ್

ಬಾಲ ನಟನೆಯಿಂದ ಹಿಡಿದು ಇಂದಿನವರೆಗೆ ದಶಕಗಳ ಕಾಲ ಚಿತ್ರಪ್ರಿಯರನ್ನು ಸೂಜಿಯಂತೆ ಸೆಳೆದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಸಾವಿರಾರು ಅಭಿಮಾನಿಗಳ ಹೃದಯ ಸಾಮ್ರಾಟ.ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ಪುನೀತ್ ರಾಜ್ ಕುಮಾರ್, ಅಭಿಮಾನಿಗಳ ಪ್ರೀತಿಯ ಅಪ್ಪು ಅವರಿಗೆ ಮತ್ತೊಂದು ಫಿಲ್ಮ್ ಫೇರ್ ಅವಾರ್ಡ್ ಗೌರವ ಸಿಕ್ಕಿದೆ. ಕಳೆದ ವರ್ಷ ಬಿಡುಗಡೆಯಾಗಿ ಇಂಡಸ್ಟ್ರೀ ಹಿಟ್ ಆದ ರಾಜಕುಮಾರ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ ಪುರಸ್ಕಾರ ಸಿಕ್ಕಿದೆ.

ಬಹುಶಃ ಭಾರತೀಯ ಚಿತ್ರರಂಗದಲ್ಲೇ ಅಪ್ಪು ಅವರಷ್ಟು ಯಶಸ್ಸಿನ ಸರಾಸರಿ ಹೊಂದಿರುವ ಸೂಪರ್ ಸ್ಟಾರ್ ನಟ ಮತ್ತೊಬ್ಬರಿಲ್ಲ. ಅವರ ಸಿನಿಮಾಗಳಿಗೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ, ಅಭಿಮಾನಿಗಳ ಪ್ರೀತಿ ಹಾಗೂ ಕೆಲಸ ಮಾಡಿದ ಚಿತ್ರ ತಂಡದ ಲಾಭದ ತೃಪ್ತಿಯ ಬಹುಮಾನಗಳು ಸಿಗುತ್ತಲೇ ಇವೆ. ಇದರ ಜೊತೆಗೆ ಪ್ರಶಸ್ತಿ ಪುರಸ್ಕಾರಗಳು ಕೂಡಾ ಅವರ ಬೆನ್ನು ಹತ್ತಿ ಬರುತ್ತಲೇ ಇವೆ.

ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟರಾಗಿರುವ ಅವರಿಗೆ ಇಲ್ಲಿಯವರೆಗೂ ಸಂದಿರುವ ಪ್ರಮುಖ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಇಲ್ಲಿದೆ ನೋಡಿ.

ಪುನೀತ್ ರಾಜ್ ಕುಮಾರ್ ಅವರಿಗೆ ಲಭಿಸಿದ ಪ್ರಶಸ್ತಿಗಳು:-

* ನ್ಯಾಷನಲ್ ಫಿಲ್ಮ್ ಪ್ರಶಸ್ತಿ – ಅತ್ಯುತ್ತಮ ಬಾಲನಟ – ಬೆಟ್ಟದ ಹೂವು(1985).

* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ – ಅತ್ಯುತ್ತಮ ಬಾಲನಟ- ಚಲಿಸುವ ಮೋಡಗಳು(1982-83).

* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ – ಅತ್ಯುತ್ತಮ ಬಾಲನಟ- ಎರಡು ನಕ್ಷತ್ರಗಳು(1983-84).

* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ – ಅತ್ಯುತ್ತಮ ನಟ- ಮಿಲನ(2007-08).

* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ – ಅತ್ಯುತ್ತಮ ನಟ- ಜಾಕಿ(2010-11).

* ಫಿಲ್ಮ್ ಫೇರ್ ಪ್ರಶಸ್ತಿ – ಅತ್ಯುತ್ತಮ ನಟ- ಅರಸು(2006).

* ಫಿಲ್ಮ್ ಫೇರ್ ಪ್ರಶಸ್ತಿ – ಅತ್ಯುತ್ತಮ ನಟ- ಹುಡುಗರು(2011)

* ದಕ್ಷಿಣ ಭಾರತದ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ- ಹುಡುಗರು(2011).

* ದಕ್ಷಿಣ ಭಾರತದ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ-ಅಣ್ಣ ಬಾಂಡ್(2012).

* ದಕ್ಷಿಣ ಭಾರತದ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಯೂತ್ ಐಕಾನ್- ದಕ್ಷಿಣ ಭಾರತ ಸಿನಿಮಾ(2013).

* ಸೌತ್ ಸ್ಕೋಪ್ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ-ವಂಶಿ (2008)

* ಸೌತ್ ಸ್ಕೋಪ್ ಫಿಲ್ಮ್ ಪ್ರಶಸ್ತಿ-ಅತ್ಯುತ್ತಮ ನಟ-ರಾಜ್ ದಿ ಶೋಮ್ಯಾನ್(2009).

* ಸುವರ್ಣ್ ಪ್ಲಸ್ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ- ಜಾಕಿ(2010).

* ಸುವರ್ಣ್ ಪ್ಲಸ್ ಫಿಲ್ಮ್ ಪ್ರಶಸ್ತಿ- ಅಚ್ಚುಮೆಚ್ಚಿನ ನಟ-ಅಣ್ಣ ಬಾಂಡ್(2012).

* ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ- ಜಾಕಿ(2010).

* ‘ರಣವಿಕ್ರಮ’ ಚಿತ್ರಕ್ಕೆ ಅತ್ಯುತ್ತಮ ನಟ ಫಿಲ್ಮ್ಸ್ ಫೇರ್ ಪ್ರಶಸ್ತಿ (2015).

* ‘ರಾಜಕುಮಾರ’ ಸಿನಿಮಾಗೆ ಅತ್ಯುತ್ತಮ ನಟ ಫಿಲ್ಮ್ಸ್ ಫೇರ್ ಪ್ರಶಸ್ತಿ (2017).

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಎಂಬಂತಹ ಯಶಸ್ಸು, ಹಲವಾರು ಪ್ರಶಸ್ತಿ ಪುರಸ್ಕಾರಗಳ ಗೌರವಗಳು ಹಾಗೂ ಅಭಿಮಾನಿ ದೇವರುಗಳ ನಿಷ್ಕಲ್ಮಶ ಅನಿರ್ವಚನೀಯ ಪ್ರೀತಿಯನ್ನು ಪಡೆದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೀಗೆಯೇ ರಾಜರತ್ನ ನಾಗಿ ಮಿನುಗುತ್ತಾಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಂತಹ ಸಿನಿಮಾಗಳನ್ನು ಮಾಡಲಿ ಎಂದು ಆಶಿಸೋಣ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top