RESPONSIVE LEADERBOARD AD AREA
Film News

ವಿನಯ್ ರಾಜ್ ಕುಮಾರ್ ರ ‘ಅನಂತು v/s ನುಸ್ರತ್’ ಬಿಡುಗಡೆಗೆ ಸಿದ್ಧ….!

‘ಅನಂತು v/s ನುಸ್ರತ್’ ಎಂಬ ವಿನಯ್ ರಾಜ್ ಕುಮಾರ್ ಅಭಿನಯದ ವಿಶಿಷ್ಟ ಹೆಸರಿನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಸುಧೀರ್ ಶಾನಭೋಗ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಒಂದು ಬಿಗ್ ಬ್ರೇಕ್ ಗಾಗಿ ಕಾದಿರುವ ವಿನಯ್ ರಾಜಕುಮಾರ್ ಈಗಾಗಲೇ ‘ಗ್ರಾಮಾಯಣ’ ಚಿತ್ರದಲ್ಲಿ ಹಳ್ಳಿ ಹೈದನಾಗಿ ನಟಿಸುತ್ತಿರುವ ಬಗ್ಗೆ ಇದೇ ಕಾಲಂ ನಲ್ಲಿ ಬರೆದಿದ್ದೆವು. ಇದೀಗ ಅವರ ‘ಅನಂತು v/s ನುಸ್ರತ್’ ಎಂಬ ರೋಮ್ಯಾಂಟಿಕ್ ಕಾಮಿಡಿ ಚಿತ್ರ ಸದ್ದಿಲ್ಲದೇ ತೆರೆಗೆ ಬರಲು ಸಿದ್ಧವಾಗಿದೆ.

ಮಾಣಿಕ್ಯ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರವಿಶಂಕರ್, ಗುರುಪ್ರಸಾದ್, ಭಗವಾನ್, ತಾರಾಗಣದಲ್ಲಿದ್ದಾರೆ. ಲತಾ ಹೆಗಡೆ ಅನಂತುವಿನ ‘ನುಸ್ರತ್’ ಪಾತ್ರದಲ್ಲಿ ಮಿಂಚಲಿದ್ದಾರೆ. ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಗೌಪ್ಯವಾಗಿ ಇಟ್ಟಿದೆ. ವಿನಯ್ ರಾಜಕುಮಾರ್ ವಕೀಲನ ಪಾತ್ರದಲ್ಲಿ, ಹಾಗೂ ಲತಾ ಹೆಗಡೆ ನ್ಯಾಯಾಧೀಶೆಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ತಿಳಿದು ಬಂದಿದೆ.

ಸುಧೀರ್ ಶಾನಭೋಗ್, ‘ಈ ಚಿತ್ರ ವಿಶಿಷ್ಟ ಪ್ರೇಮಕಥೆಯೊಂದಿಗೆ ತೆರೆಯ ಮೇಲೆ ಬರುತ್ತಿದೆ. ವಿನಯ್ ರಾಜಕುಮಾರ್ ಮತ್ತು ಶುಭ ಹೆಗಡೆಯವರ ಸ್ಟಿಲ್ಸ್ ಗಳು ಆಕರ್ಷಕವಾಗಿ ಮೂಡಿ ಬಂದಿವೆ. ಚಿತ್ರವನ್ನು ಅತಿ ಶೀಘ್ರವಾಗಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ. ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top