RESPONSIVE LEADERBOARD AD AREA
Film News

‘ಕೆಜಿಎಫ್’ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶಿಸಲಿರುವ ಚಿತ್ರದಲ್ಲಿ ವಿನಯ ರಾಜಕುಮಾರ್…!?

‘ಅನಂತು ವರ್ಸಸ್ ನುಸ್ರತ್’ ಚಿತ್ರ ಸೈಲೆಂಟ್ ಹಿಟ್ ಆದ ಬಳಿಕ ವಿನಯ್ ರಾಜ್ ಕುಮಾರ್ ತಮ್ಮ ‘ಗ್ರಾಮಾಯಣ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಹೊಸ ಸುದ್ದಿಯೊಂದು ಬಂದಿದ್ದು, ಅವರು ‘ಕೆಜಿಎಫ್’ ನ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ.

ಹೊಸ ಚಿತ್ರಗಳನ್ನು ಅಳೆದು ತೂಗಿ ಒಪ್ಪಿಕೊಳ್ಳುವ ವಿನಯ್ ರಾಜ್ ಕುಮಾರ್ ಗೆ ರವಿ ಬಸ್ರೂರು ಹೇಳಿರುವ ಕಥೆ ಒಪ್ಪಿಗೆ ಆಗಿದೆಯಂತೆ. ಅಲ್ಲದೆ ತಂದೆ ರಾಘವೇಂದ್ರ ರಾಜಕುಮಾರ್ ಕೂಡ ಕಥೆಯನ್ನು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಹಾಗಾಗಿ ಚಿತ್ರದ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ ಎನ್ನಲಾಗಿದೆ.

ಮೇ 7ರಂದು ವಿನಯ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅದೇ ದಿನ ಈ ಚಿತ್ರದ ಘೋಷಣೆಯಾಗುವ ಸಂಭವವಿದೆ.
ಚಿತ್ರವನ್ನು ಎನ್ ಎಸ್ ರಾಜಕುಮಾರ್ ನಿರ್ಮಾಣ ಮಾಡುವುದು ಖಚಿತ ವಾಗಿದೆ.

ಈ ಮೊದಲು ರವಿ ಬಸ್ರೂರು ಮತ್ತು ನಿರ್ಮಾಪಕ ಎನ್ ಎಸ್ ರಾಜಕುಮಾರ್ ‘ಕಟಕ’ ಚಿತ್ರಕ್ಕಾಗಿ ಜೊತೆಯಾಗಿ ಕೆಲಸ ಮಾಡಿದ್ದರು. ಅಲ್ಲದೆ ಅವರು ಜೊತೆಯಾಗಿ ಕೆಲಸ ಮಾಡಿದ ‘ಗಿರ್ಮಿಟ್’ ಚಿತ್ರ ಕೂಡ ಮೂಡಿಬರಲಿದೆ. ಹಾಗಾಗಿ ಈ ಜೋಡಿಯ ಮೂರನೇ ಪ್ರಯತ್ನ ಇನ್ನೂ ಹೆಸರಿಡದ ಈ ಪ್ರಾಜೆಕ್ಟ್.

ಎನ್ ಎಸ್ ರಾಜಕುಮಾರ್ ಈ ಮೊದಲು ಪುನೀತ್ ರಾಜಕುಮಾರ್ ಅಭಿನಯದ ‘ಪೃಥ್ವಿ’ ಅಲ್ಲದೆ ಪ್ರಶಸ್ತಿ ವಿಜೇತ ಚಿತ್ರಗಳಾದ ‘ಜಟ್ಟ’, ‘ಮೈನಾ’, ‘ಮೈತ್ರಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಇವರ ನಿರ್ಮಾಣದ ಚಿತ್ರಗಳು ಸಾಕಷ್ಟು ಹೆಸರನ್ನು ಪಡೆಯುವ ಜೊತೆಗೆ ಯಶಸ್ವಿಯೂ ಆಗಿವೆ

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರಕ್ಕೆ ರವಿ ಬಸ್ರೂರು ಅತ್ಯುತ್ತಮ ಸಂಗೀತ ನೀಡಿ, ಭಾರೀ ಬೇಡಿಕೆ ಹೊಂದಿರುವ ಸಂಗೀತ ನಿರ್ದೇಶಕರೆನಿಸಿದ್ದಾರೆ. ಆದಾಗ್ಯೂ ಅವರು ಮತ್ತೊಮ್ಮೆ ಚಿತ್ರ ನಿರ್ದೇಶನಕ್ಕೆ ಇಳಿದಿರುವುದು ಕುತೂಹಲಕಾರಿಯಾಗಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top