RESPONSIVE LEADERBOARD AD AREA
Film News

ದುಬೈನಲ್ಲಿ ‘ದಿ ವಿಲನ್’ ಸಿನಿಮಾದ ಆಡಿಯೋ ಲಾಂಚ್

ಕನ್ನಡ ಸಿನಿ ಜಗತ್ತಿನಲ್ಲಿ ಬಿಡುಗಡೆಗೆ ಮುನ್ನವೇ ಹವಾ ಎಬ್ಬಿಸುತ್ತಿರುವ ‘ದಿ ವಿಲನ್’ ಸಿನಿಮಾ, ಇತ್ತೀಚೆಗೆ ದುಬೈನಲ್ಲಿ ಆಡಿಯೋ ಲಾಂಚ್ ಮಾಡಿ ಸಿನಿಪ್ರಿಯರ ಎದೆಬಡಿತ ಇನ್ನಷ್ಟು ಹೆಚ್ಚಿಸಿದೆ.ಸುದೀಪ್-ಶಿವಣ್ಣ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ಆಮಿ ಜಾಕ್ಸನ್, ಶ್ರೀಕಾಂತ್, ಹಿಂದಿಯ ಹಿರಿಯ ನಟ ಮಿಥುನ್ ಚಕ್ರವರ್ತಿ, ಮುಂತಾದ ಘಟಾನುಘಾಟಿ ನಟರ ಅಭಿನಯವಿದೆ.ವಿಭಿನ್ನ ಪ್ರಚಾರ ತಂತ್ರಗಳನ್ನು ಅರೆದು ಕುಡಿದಿರುವ ನಿರ್ದೇಶಕ ಪ್ರೇಮ್, ಈ ಮೊದಲು ಶಿವಣ್ಣ ಮತ್ತು ಕಿಚ್ಚ ಸುದೀಪ್ ರಿಂದ ಎರಡೆರಡು ಪ್ರತ್ಯೇಕ ಟ್ರೇಲರ್ ಬಿಟ್ಟು ಅಭಿಮಾನಿಗಳನ್ನು ಹುಚ್ಚೆಬ್ಬಿಸಲು ಯಶಸ್ವಿಯಾಗಿದ್ದರು. ಇದೀಗ ಆಡಿಯೋ ಲಾಂಚ್ ನಿಂದ ಮತ್ತೊಮ್ಮೆ ಸದ್ದುಮಾಡುತ್ತಿದ್ದಾರೆ. ಈ ಸಿನಿಮಾ ತನ್ನ ಸ್ಟಾರ್ ಕಾಸ್ಟ್ ನಿಂದಲೇ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಸುದ್ದಿ ಮಾಡುತ್ತಲೇ ಬಂದಿದೆ. ಮೊನ್ನೆಯ ಅದ್ದೂರಿ ಆಡಿಯೋ ಲಾಂಚ್ ನಲ್ಲಿ ಕನ್ನಡದ ಹಿರಿಯ ನಟ ಅಂಬರೀಷ್ ಅವರಿದ್ದುದು ವಿಶೇಷವಾಗಿತ್ತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಟ್ರೆಂಡಿ ಹಾಡುಗಳಿರುವ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top