RESPONSIVE LEADERBOARD AD AREA
Film News

‘ಮಾಲ್ಗುಡಿ ಡೇಸ್’ ಗೆ ಕರೆದೊಯ್ಯಲಿದ್ದಾರೆ ವಿಜಯ ರಾಘವೇಂದ್ರ…!!

‘ಮಾಲ್ಗುಡಿ ಡೇಸ್’ ಹೆಸರು ಕೇಳಿದೊಡನೆ 90ರ ದಶಕದಲ್ಲಿ ದೇಶದಾದ್ಯಂತ ಅಪಾರ ಜನಪ್ರಿಯತೆ ಪಡೆದಿದ್ದ ಟಿವಿ ಧಾರವಾಹಿ ನೆನಪಾಗುತ್ತದೆ. ಆರ್ ಕೆ ನಾರಾಯಣ್ ಅವರ ಕಥೆಗಳನ್ನು ಆಧರಿಸಿದ, ಶಂಕರ್ ನಾಗ್ ನಿರ್ದೇಶನದ ಈ ಧಾರಾವಾಹಿ, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ಈಗ ಇದೇ ಹೆಸರಿನ ಚಿತ್ರವೊಂದರಲ್ಲಿ ವಿಜಯ ರಾಘವೇಂದ್ರ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಿಶೋರ್ ಮೂಡಬಿದ್ರೆ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೂ ‘ಮಾಲ್ಗುಡಿ ಡೇಸ್’ ಧಾರಾವಾಹಿಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದ ಕಥೆ ಹಾಗೂ ಚಿತ್ರಕತೆಯನ್ನು ಕಿಶೋರ್ ರಚಿಸಿದ್ದು, ಸಂಭಾಷಣೆಯನ್ನೂ ಬರೆದಿದ್ದಾರೆ. ಈ ಚಿತ್ರವನ್ನು ಕೆ ರತ್ನಾಕರ್ ಕಾಮತ್ ನಿರ್ಮಿಸುತ್ತಿದ್ದು, ಇದೊಂದು ಅಪ್ಪಟ ಮನರಂಜನೆಯ ಚಿತ್ರವಾಗಲಿದೆಯಂತೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರದ ಪೋಸ್ಟರನ್ನು ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top