RESPONSIVE LEADERBOARD AD AREA
Film News

ವಶಿಷ್ಟ ಸಿಂಹ ರ ವಿಶಿಷ್ಟ ಧ್ವನಿ ‘ಭೈರವ ಗೀತ’ದಲ್ಲಿ..!!

ಕನ್ನಡದ ಪ್ರತಿಭಾವಂತ ಯುವ ನಟ ಡಾಲಿ ಧನಂಜಯ್, ಅಭಿನಯದ ರಾಮ್ ಗೋಪಾಲ್ ವರ್ಮಾ ಸಹ ನಿರ್ಮಾಣ ವಿರುವ ತೆಲುಗು ಮತ್ತು ಕನ್ನಡ ಚಿತ್ರ ‘ಭೈರವ ಗೀತ’ ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೆಟ್ ಪಡೆದುಕೊಂಡಿದ್ದು, ರಾಜ್ಯಾದ್ಯಂತ ಡಿಸೆಂಬರ್ 7 ರಂದು ತೆರೆಗೆ ಬರುತ್ತಿದೆ.

ಕನ್ನಡದ ಮತ್ತೊಬ್ಬ ಪ್ರತಿಭಾವಂತ ಯುವ ನಟ ವಸಿಷ್ಟ ಸಿಂಹ ಚಿತ್ರಕ್ಕೆ ಹಿನ್ನೆಲೆ ದ್ವನಿಯನ್ನು ನೀಡಿದ್ದಾರೆ. ತಮ್ಮ ವಿಶಿಷ್ಟ ಬೇಸ್ ಧ್ವನಿಗಾಗಿ ಹೆಸರಾಗಿರುವ ವಶಿಷ್ಠ, ಚಿತ್ರದ ಹಿನ್ನೆಲೆಯಲ್ಲಿ ಬರುವ ಕಥಾ ನಿರೂಪಣೆ ಮಾಡಿದ್ದಾರೆ. ಚಿತ್ರದ ತೆಲುಗು ವರ್ಷನ್ ನಲ್ಲಿ ಸ್ವತಃ ರಾಮ್ ಗೋಪಾಲ್ ವರ್ಮ ಧ್ವನಿ ನೀಡಿದ್ದಾರೆ.

ಸಿದ್ದಾರ್ಥ ತಾತೋಲು ನಿರ್ದೇಶಿಸುತ್ತಿರುವ, ರಿಷಿ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ‘ಭೈರವ ಗೀತ’ ಈ ಮೊದಲು ನವೆಂಬರ್ 30 ರಂದು ಬಿಡುಗಡೆಯಾಗುವುದಾಗಿ ಘೋಷಿಸಲಾಗಿತ್ತು. ಇದೀಗ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 7 ಕ್ಕೆ ನಿಗದಿಗೊಳಿಸಲಾಗಿದ್ದು, ರಾಜ್ಯಾದ್ಯಂತ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು ವರ್ಷನ್ ಡಿಸೆಂಬರ್ 14 ರಂದು ಬಿಡುಗಡೆಯಾಗಲಿದೆ.

ಭೈರವ ಗೀತ ಒಂದು ವೈಲೆಂಟ್ ಲವ್ ಸ್ಟೋರಿ. ಧನಂಜಯ್ ಜೊತೆಗೆ ಇರಾ ಮೋರ್ ನಾಯಕಿಯಾಗಿ ನಟಿಸಿದ್ದಾರೆ. ಇಂದಿನ ಯುವಕ ಯುವತಿಯರ ಜೀವನವನ್ನು ಸದೃಶವಾಗಿ ತೋರಿಸುವಂತಹ ಕಥಾನಕ ಹೊಂದಿದ್ದು, ಭಾರತದ ಜಾತಿ ವ್ಯವಸ್ಥೆಯ ಸಂಕೀರ್ಣತೆಯನ್ನು ಪ್ರೇಮಕಥೆಯ ಮೂಲಕ ಹೇಳಲಾಗಿದೆ ಎನ್ನಲಾಗಿದೆ.

‘ಭೈರವ ಗೀತ’ ಚಿತ್ರಕ್ಕೆ ರವಿಶಂಕರ್ ಸಂಗೀತವಿದ್ದು, ಜಗದೀಶ್ ಚೀಕೆಟಿಯವರ ಛಾಯಾಗ್ರಹಣವಿದೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿರುವ ಈ ಚಿತ್ರ ತೀವ್ರ ಕುತೂಹಲ ಕೆರಳಿಸಿದ್ದು, ಪ್ರೇಕ್ಷಕರು ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top