RESPONSIVE LEADERBOARD AD AREA
Film News

"ವಾಸ್ತು ಪ್ರಕಾರ" ದಲ್ಲಿ ನಮ್ಮ "ನವರಸ" ನಾಯಕ

ನವರಸ ನಾಯಕ ಜಗ್ಗೇಶ್ ಟಿವಿ ಪರದೆ ಮೇಲೆ ಬಂದರೆ ಸಾಕು ಏನೇ ಕೆಲಸ ಮಾಡುತ್ತಿದ್ದರು ಸಹ ಹಣ್ಣು ಹಣ್ಣು ಮುದುಕರಿಂದ ಹಿಡಿದು ಇಂದಿನ ಪೀಳಿಗೆಯ ಯುವಕರು ಸಹ ಅದಕ್ಕೆ ಸ್ವಲ್ಪ ವಿರಾಮ ಹೇಳಿ ತಮ್ಮ ಗಮನವನ್ನು ಟಿವಿ ಕಡೆ ಕೊಡುತ್ತಾರೆ, ಏಕೆಂದರೆ ಅವರ ಆ ವಿಶೇಷ ತರ್ಲೆ ಮಾತುಗಳು ಮತ್ತು ಅವರ ಮುಖದ ಮೇಲೆ ಮೂಡುವ ಹಲವು ಭಂಗಿಗಳನ್ನು ನೋಡಲು, ಹೌದು ಅವರ ಆ ವಿಶೇಷತೆ ಮತ್ತು ಅವರಲ್ಲಿನ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅವರು ಕನ್ನಡ ಚಿತ್ರರಂಗ ಕಂಡ ಓರ್ವ ಅಪರೂಪದ ನಟರೂ ಹಾಗೂ ತುಂಬಾ ಸರಳಜೀವಿಯೂ ಹೌದು.

1980ರಲ್ಲಿ ತಮ್ಮ ಸಿನಿಪಯಣ ಆರಂಭಿಸಿದ ಅವರು ಅಂದಿನ ಕಾಲದಲ್ಲೆ ಅನೇಕ ಕಾಮಿಡಿ ಸಿನೆಮಾಗಳನ್ನು ಮಾಡಿ ಹೆಸರು ಮಾಡಿದವರು, ಭಂಡ ನನ್ನ ಗಂಡ, ಸೂಪರ್ ನನ್ ಮಗ & ತರ್ಲೆ ನನ್ ಮಗ ಹೀಗೆ ಹತ್ತು ಹಲವು ಚಿತ್ರಗಳಿಂದ ಜನರನ್ನು ರಂಜಿಸುತ್ತಲೇ ಬಂದಿರುವ ಅವರು ಮೊನ್ನೆ ತೆರೆಕಂಡ “ವಾಸ್ತು ಪ್ರಕಾರ” ಚಿತ್ರದಲ್ಲೂ ಸಹ ಅದೇ ರೀತಿಯ ಒಂದು ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಜನರನ್ನು ಚಿತ್ರಮಂದಿರದೆಡೆಗೆ ಸೆಳೆಯುವಲ್ಲಿ ಸಫಲರಾಗಿದ್ದಾರೆ.

ಆದರೆ ಕನ್ನಡದ ಒಂದು ದೈನಂದಿನ ಪತ್ರಿಕೆಯು “ವಾಸ್ತು ಪ್ರಕಾರ” ಚಿತ್ರವಿಮರ್ಶೆ ಮಾಡುವುದರ ಬದಲು..! ಚಿತ್ರದಲ್ಲಿರುವ ನಟರ ಬಗ್ಗೆ ವಿಮರ್ಶೆಮಾಡಿದೆ, ಚಿತ್ರದಲ್ಲಿ ನಟಿಸಿರುವವರ್ಯಾರು ಹೊಸಬರಲ್ಲಾ ಅವರಿಗೆ ಬಹಳಷ್ಟು ಅನುಭವವಿದ್ದು ಅದರಲ್ಲೂ ಜಗ್ಗೇಶ್ ಅಂತ ಹಿರಿಯರ ನಟರಿಗೆ ಈ ರೀತಿಯ ಒಂದು ಅಪವಾದದ ಬರಹಗಳ ಮೂಲಕ ಚಿತ್ರವಿಮರ್ಶೆಮಾಡಿ ಚಿತ್ರ ಸರಿಯಿಲ್ಲ ಎನ್ನುವುದು ಬಹಳ ತಪ್ಪು.

ಕನ್ನಡ ಚಿತ್ರ ರಂಗ ಸೊರಗಿ ಕುಳಿತಿದ್ದ ಸಮಯದಲ್ಲಿ ಇತ್ತೀಚಿನ ಕೆಲವು ಚಿತ್ರಗಳಿಂದ ಚಿತ್ರರಂಗವು ಹೊಸ ಹೊಸ ಪ್ರಯತ್ನಗಳ ಮೂಲಕ ತನ್ನ ಅಭಿಮಾನಿಗಳನ್ನು ತಲುಪುತ್ತಿರುವ ಇಂತಹ ಒಂದು ಸಮಯದಲ್ಲಿ ಈ ರೀತಿ ಕಾಲೆಳೆಯುವ ಕೆಲಸಗಳು ನಡೆಯುತ್ತಿರುವುದು ತುಂಬಾ ವಿಶಾದನೀಯ ವಿಷಯವಾಗಿದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೇ ಇಂತಹ ವಿಷಯಗಳನ್ನು ಹಾಗೂ ಅಂತಹ ಕೃತ್ಯವನ್ನು ಎಸಗುವ ಕಿಡಿಗೇಡಿಗಳನ್ನು ಬೆಳೆಯುವ ಮೊದಲೆ ಕಿತ್ತು ಹಾಕಬೇಕು.

“ವಾಸ್ತು ಪ್ರಕಾರ” ಚಿತ್ರವನ್ನು ಅವರೆಲ್ಲೂ ಕಾಮಿಡಿ ಚಿತ್ರ ಹಾಗೇ ಹೀಗೆ ಅಂತ ಎಲ್ಲೂ ಪ್ರಚಾರ ಮಾಡಿಲ್ಲಾ…! ಚಿತ್ರದಲ್ಲಿ ನಾವಿಂದು ಹೊಸ ಪ್ರಯತ್ನ ಮಾಡಿದ್ದೇವೆ ಒಂದು ಉತ್ತಮ ಸಂದೇಶ ನೀಡಿದ್ದೇವೆ ಎನ್ನುವುದು ಅವರ ಪ್ರಚಾರವಾಗಿತ್ತು…! ಹೌದು ಚಿತ್ರದಲ್ಲಿ ಅವರು ನಿಜವಾಗಿಯು ವಾಸ್ತುವಿನ ಬಗ್ಗೆ ಒಳ್ಳೆಯ ಸಂದೇಶವನ್ನೆ ನೀಡಿದ್ದಾರೆ.

ಹಾಗಂತ ಜಗ್ಗೇಶ್ ಅವರನ್ನು ನಂಬಿ ಬಂದ ಅಭಿಮಾನಿಗಳಿಗೂ ಅವರು ಮೋಸ ಮಾಡಿಲ್ಲಾ, ಅವರದೇ ಆದ ಶೈಲಿಯಲ್ಲದಿದ್ದರೂ ಭಟ್ಟರ ಅಭಿರುಚಿಗೆ ತಕ್ಕಂತೆ ಹಾಸ್ಯ ಭೋಜನವನ್ನು ಉಣಬಡಿಸಿದ್ದಾರೆ ಹಾಗೂ ಅನಂತ ನಾಗ್, ಸುಧಾರಾಣಿ, ಪರೂಲ್ ಯಾದವರ, ಐಶಾನಿ ಮತ್ತು ರಕ್ಷಿತ್ ಶೆಟ್ಟಿ ಯವರು ಸಹ ತಮ್ಮ ನಟನೆಯಲ್ಲಿ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಚಿತ್ರವು ಕಲೆಕ್ಷನ್ ನಲ್ಲೂ ಕೂಡ ಯಾವ ರಾಜಿಯನ್ನು ಮಾಡಿಕೊಂಡಿಲ್ಲಾ ತೆರೆಕಂಡ ಮೊದಲೆರಡು ದಿನದಲ್ಲೇ 10,00,000 ಕ್ಕೂ ಹೆಚ್ಚು ಸಂಪಾದನೆ ಮಾಡಿದೆ.

ಚಿತ್ರಗಳು ಚೆನ್ನಾಗಿಲ್ಲದಿದ್ದ ಪಕ್ಷದಲ್ಲಿ ಚಿತ್ರದ ಬಗ್ಗೆ ವಿಮರ್ಶೆ ಮಾಡಿ ಚಿತ್ರವನ್ನು ಟೀಕಿಸಿ ಬರಯಬೇಕು ಅದನ್ನು ಬಿಟ್ಟು ನಾನು ಚಿತ್ರವಿಮರ್ಶೆ ಮಾಡುತ್ತೇನೆ ಅಂತ ಚಿತ್ರದಲ್ಲಿ ನಟಿಸಿರುವ ನಟರ ದೈಹಿಕ ಪರಿಸ್ಥಿತಿಯ ಬಗ್ಗೆ ಮಾತಾಡಿ ಅವರ ಬಗ್ಗೆ ಕಟು ಟೀಕೆಗಳನ್ನು ಮಾಡಬಾರದು & ತಾಂತ್ರಿಕ ಕೆಲಸದವರ ಬಗ್ಗೆಯೂ ಅಷ್ಟೆ ವಿಮರ್ಶೆ ಚಿತ್ರದ ಬಗ್ಗೆ ಇರಬೇಕೆ ಹೊರತು ಅವರ ವಯಕ್ತಿಕ ವಿಷಯದ ಮೇಲಲ್ಲಾ..!

ಕೆಲವು ಪತ್ರಿಕೆಗಳು ತಮ್ಮ ಮನಬಂದಂತೆ ಒಳ್ಳೆಯ ಚಿತ್ರಗಳ ಬಗ್ಗೆ ಮನಬಂದಂತೆ ಚಿತ್ರವಿಮರ್ಶಯನ್ನು ಗೀಚುವುದರಿಂದ ಕಲಾವಿದರ ಮನಸ್ಸಿಗೆ ಹಾಗೂ ಅಭಿಮಾನಿಗಳಿಗೆ ಎಷ್ಟು ನೋವಾಗುತ್ತದೆ ಎನ್ನುವುದನ್ನು ಇಂದಿನಿಂದಾದರೂ ಸ್ವಲ್ಪ ಯೋಚಿಸಿ ಮುನ್ನಡೆಯಬೇಕುಂಬುದೇ ನಮ್ಮ ಒಂದು ಸಣ್ಣ ಆಶಯ.

RESPONSIVE LEADERBOARD AD AREA
RESPONSIVE LEADERBOARD AD AREA
To Top