RESPONSIVE LEADERBOARD AD AREA
Film News

ಕಾಲೇಜ್ ಹೈಕಳಿಗೆ “ಐ ಲವ್ ಯು” ಪಾಠ ಮಾಡಲು ಉಪ್ಪಿ ರೆಡಿ

ಕನ್ನಡ ಇಂಡಸ್ಟ್ರಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ಕಾಲದಲ್ಲಿ ಹುಟ್ಟು ಹಾಕಿದ ಕ್ರೇಜ್ ಗೆ ಇಂದಿಗೂ ಯಾವ ಸ್ಟಾರ್ ಕೂಡ ಸರಿಸಾಟಿಯಾಗಿ ನಿಲ್ಲುವುದಿಲ್ಲ. ಉಪೇಂದ್ರ ಅನ್ನೋ ಹೆಸರು ಕೇಳಿಯೇ ಮೈ ರೋಮಾಂಚನಗೊಳ್ಳುವಂತೆ ಮಾಡಿದ್ದರು ಉಪ್ಪಿ. ಅವರ ಬಗ್ಗೆ ಅಷ್ಟು ದೊಡ್ಡ ಮಟ್ಟದ ಕ್ರೇಜ್ ಬರಲು ಬಲು ಮುಖ್ಯ ಕಾರಣ ಅವರ “ಎ”, “ಉಪೇಂದ್ರ” ಮತ್ತು “ಪ್ರೀತ್ಸೆ” ಸಿನಿಮಾಗಳು. ಈ ಚಿತ್ರಗಳಲ್ಲಿನ ಅವರ ಪಾತ್ರ ಯುವಜನತೆಗೆ ಅಕ್ಷರಶಃ ಹುಚ್ಚು ಹಿಡಿಸಿತ್ತು. ಅವರ ಲುಕ್ಕು, ಡೈಲಾಗ್ಸು, ಶೋ ಮ್ಯಾನರಿಸಂ ಹಾಗೂ ಚಾರ್ಮ್ ಎಲ್ಲವೂ ಇಡೀ ಭಾರತೀಯ ಚಿತ್ರರಂಗವನ್ನೇ ಕನ್ನಡ ಚಿತ್ರರಂಗದಂತೆ ತಿರುಗಿ ನೋಡುವಂತೆ ಮಾಡಿದ್ದವು.

ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ “ಐ ಲವ್ ಯು” ಚಿತ್ರ ತನ್ನ ಟ್ರೈಲರ್ ಮೂಲಕವೇ ದೊಡ್ಡ ಸಂಚಲನ ಮೂಡಿಸಿದಂತಹ ಸಿನಿಮಾ. ಜೂನ್ ತಿಂಗಳಲ್ಲಿ ಕಾಲೇಜು ಶುರುವಾಗಿ ಸ್ಟೂಡೆಂಟ್ಸ್ ಗಳೆಲ್ಲ ಕಾಲೇಜಿನಲ್ಲಿ ಸೆಟಲ್ ಆಗುವ ಹೊತ್ತಿಗೆ ಅವರ ಮೊದಲ ಗುರುವಾಗಿ ಉಪ್ಪಿ, ಮೊದಲ ಪಾಠವಾಗಿ ‘ಐ ಲವ್ ಯೂ’ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಅನ್ನುವ ಹಾಗೆ ಒಂದಷ್ಟು ವರ್ಷಗಳ ಉಪ್ಪಿ ಅಭಿಮಾನಿಗಳ ಕೋರಿಕೆಯನ್ನು ತೀರಿಸಲೆಂದೇ ರಿಯಲ್ ಸ್ಟಾರ್ ಉಪ್ಪಿ ಅವರ ಜಬರ್ದಸ್ತ್ ರಿಯಲ್ ಮ್ಯಾನರಿಸಂ ಮತ್ತು ಕಾನ್ಸೆಪ್ಟ್ ಕಥೆಯುಳ್ಳ ‘ಐ ಲವ್ ಯೂ’ ಸಿನಿಮಾನ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಹೊತ್ತು ತರುತ್ತಿರುವ ಆರ್ ಚಂದ್ರು ಅವರಿಗೆ ಶುಭವಾಗಲಿ.

ಆಮೇಲೆ ಕೌಟುಂಬಿಕ ಪ್ರೇಕ್ಷಕರಿಗಾಗಿ ಇಮೇಜ್ ಬದಲಿಸಿಕೊಂಡ ರಿಯಲ್ ಸ್ಟಾರ್ ಕೌಟುಂಬಿಕ ಹಿಟ್ ಸಿನಿಮಾಗಳನ್ನೂ ನೀಡಿ ಪ್ರೇಕ್ಷಕರನ್ನು ತಣಿಸಿ ಸೂಪರ್ ಸ್ಟಾರ್ ಆಗಿ ಮೆರೆದವರು. ಈಗ ಬಹಳಷ್ಟು ದಿನಗಳ ಅಭಿಮಾನಿಗಳ ಕೋರಿಕೆಯಂತೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹಳೆಯ ವರಸೆಯೊಂದಿಗೆ “ಐ ಲವ್ ಯೂ” ಚಿತ್ರದ ಮೂಲಕ ಇದೇ ಜೂನ್ 14 ರಂದು ಎದುರಾಗುತ್ತಿದ್ದಾರೆ. ಈ ಬಾರಿ ಯುವ ಪ್ರೇಕ್ಷಕರಿಗೆ ಹಬ್ಬದೂಟ ನೀಡುವಂತಹ ರಿಯಲ್ ಸ್ಟಾರ್ ರಿಯಲ್ ಇಮೇಜ್ ಗೆ ಸೂಟ್ ಆಗೋ ಅಂತಹ ಸಿನಿಮಾ ನಿರ್ದೇಶನ ಮಾಡಿದ್ದಾರೆ ಸೂಕ್ಷ್ಮ ಸಂವೇದನೆ ಪ್ರೇಮಕಥೆಗಳ ಖ್ಯಾತಿಯ ನಿರ್ದೇಶಕ ಆರ್ ಚಂದ್ರು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top