RESPONSIVE LEADERBOARD AD AREA
Film News

‘ಐ ಲವ್ ಯು’ ಹೇಳಲು ದುಬೈಗೆ ಹೊರಟು ನಿಂತ ಆರ್ ಚಂದ್ರು..!!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಆರ್ ಚಂದ್ರು ನಿರ್ದೇಶನದ ‘ಐ ಲವ್ ಯೂ’ ಚಿತ್ರದ ಹಾಡಿನ ಚಿತ್ರೀಕರಣವನ್ನು ದುಬೈನ ಮರಳುಗಾಡಿನ ಪ್ರದೇಶಗಳಲ್ಲಿ ಚಿತ್ರೀಕರಿಸಲು ನಿರ್ದೇಶಕ ಆರ್ ಚಂದ್ರು ನಿರ್ಧರಿಸಿದ್ದಾರೆ.

‘ಪ್ರೀತ್ಸೆ.. ಪ್ರೀತ್ಸೆ.. ಕಣ್ಣು ಮುಚ್ಚಿ ನನ್ನ ಪ್ರೀತ್ಸೆ..’ ಇದು ಉಪೇಂದ್ರ ಮತ್ತು ಶಿವಣ್ಣ ಅಭಿನಯದ ‘ಪ್ರೀತ್ಸೆ’ ಚಿತ್ರದ ಅತ್ಯಂತ ಜನಪ್ರಿಯ ಗೀತೆ. ಈ ಹಾಡನ್ನು ಮತ್ತೊಮ್ಮೆ ‘ಐ ಲವ್ ಯೂ’ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅದರ ಚಿತ್ರೀಕರಣದ ಲೋಕೇಶನ್ ಗಳನ್ನು ದುಬೈನ ಮರಳುಗಾಡಿನಲ್ಲಿ ಗುರುತಿಸಲು ಆರ್.ಚಂದ್ರು ದುಬೈಗೆ ತೆರಳಲಿದ್ದಾರೆ. ಆ ಬಳಿಕವಷ್ಟೇ ಚಿತ್ರತಂಡವನ್ನು ದುಬೈಗೆ ಕರೆಸಿಕೊಳ್ಳಲಿದ್ದಾರಂತೆ.

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಆರ್ ಚಂದ್ರು ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಆರ್ ಚಂದ್ರು ತಮ್ಮ ಜನ್ಮದಿನವಾದ ಫೆಬ್ರವರಿ ಎಂಟರಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ.

ತಾಜ್ ಮಹಲ್, ಚಾರ್ಮಿನಾರ್ ಮುಂತಾದ ವಿಭಿನ್ನ ಪ್ರೇಮಕಥೆಗಳನ್ನು ರೂಪಿಸಿ ಗೆದ್ದಿರುವ ಆರ್. ಚಂದ್ರು, ಇದೇ ಮೊದಲ ಬಾರಿಗೆ ಉಪೇಂದ್ರರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

‘ಐ ಲವ್ ಯೂ’ ಚಿತ್ರದಲ್ಲಿ ಉಪೇಂದ್ರ ‘ಲವ್‌ ಗುರು’ವಿನ ಪಾತ್ರ ವಹಿಸುತ್ತಿದ್ದು, ರಚಿತಾರಾಮ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ಗೌಡ ಮತ್ತು ತ್ರಿವೇಣಿ ಚಿತ್ರದಲ್ಲಿ ಇದ್ದಾರೆ. ಚಿತ್ರಕ್ಕೆ ಕಿರಣ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top