RESPONSIVE LEADERBOARD AD AREA
Movie Reviews

ಪತ್ತೇಧಾರಿ ಕಾದಂಬರಿಯಂತಹ ಥ್ರಿಲ್ಲರ್ ಸಿನಿಮಾ : ತ್ರಾಟಕ

ಕೌತುಕ ಕುತೂಹಲಗಳ ರಂಜನೀಯ ಮಿಶ್ರಣ

ಮರ್ಡರ್ ಮಿಸ್ಟರಿ ಸಿನಿಮಾಗಳು ಒಂದು ಸಿದ್ಧಸೂತ್ರವನ್ನು ಪಾಲಿಸುತ್ತವೆ. ಕೊಲೆ, ಅದರ ಹಿಂದಿನ ರಹಸ್ಯ, ಕೊಲೆ ಮಾಡುವ ಹಿಂದಿನ ಉದ್ದೇಶ ಮತ್ತು ಕೊನೆಯದಾಗಿ ಕೊಲೆಗಾರನ ಪತ್ತೆ. ತ್ರಾಟಕ ಸಿನಿಮಾ ಇದೇ ಸೂತ್ರಗಳನ್ನು ಬಳಸಿದರೂ ತನ್ನದೇ ಆದ ಶೈಲಿಯಲ್ಲಿ ಪ್ರೇಕ್ಷಕರನ್ನು ಹಿಡಿತದಲ್ಲಿಟ್ಟುಕೊಂಡು ರಂಜಿಸುತ್ತದೆ.

ಕತೆ

ಚಾಣಾಕ್ಷ ಹಾಗೂ ದಕ್ಷ ಪೋಲೀಸ್ ಅಧಿಕಾರಿ ದೇವ್ ಹಲವಾರು ಕ್ಲಿಷ್ಟ ಕೇಸ್ಗಳನ್ನು ತನ್ನ ಬುದ್ಧಿವಂತಿಕೆಯಿಂದ ಬಗೆಹರಿಸಿರುತ್ತಾನೆ. ಅವನ ಜೊತೆಗೆ ಗೆಳೆಯನಾಗಿ ಸಹ ಅಧಿಕಾರಿಯಾಗಿ ರವಿ ಇರುತ್ತಾನೆ. ದೇವ್ಗೆ csp ಎನ್ನುವ ಮೂರ್ಛೆ ರೋಗವಿದ್ದು ಅದಕ್ಕಾಗಿ ವೈದ್ಯರ ಬಳಿ ಚಿಕಿತ್ಸ ಪಡೆಯುತ್ತಿರುತ್ತಾನೆ. ಇದೇ ವೇಳೆ ಮತ್ತೋರ್ವ ವೈದ್ಯೆಯ (ನಾಯಕಿ) ಪರಿಚಯವಾಗುತ್ತದೆ. ತಮ್ಮನ ಕೊಲೆಯಿಂದ ಮತ್ತಷ್ಟು ಮಾನಾಸಿಕವಾಗಿ ಕುಗ್ಗುವ ದೇವ್ ಸಾವಿನ ಹಿಂದಿರುವ ಕೊಲೆಗಾರನ ಹುಡುಕಾಟದಲ್ಲಿ ತೊಡಗುತ್ತಾನೆ. ಅದೇ ಮಾದರಿಯಲ್ಲಿ ಹಲವು ಕೊಲೆಗಳು ನಡಯುತ್ತದೆ. ಈ ಕೊಲೆಗಳನ್ನು ಮಾಡಿದ್ದು ನಾಯಕನೇ ಎಂಬಂತೆ ಸಂಶಯ ಮೂಡತ್ತದೆ. ಆದರೆ ಅಸಲಿ ಕೊಲೆಗಾರ ಯಾರು? ನಾಯಕನೇ ಕೊಲೆಗಾರನಾ? ಹೀಗೆ ಕಾಡುವ ಪ್ರಶ್ನೆಗಳಿಗೆ ತ್ರಾಟಕ ಸಿನಿಮಾ ನೋಡಬೇಕು.

ಅಭಿನಯ

ರಾಹುಲ್ ಐನಾಪುರ್ ಅವರದು ಮಾನಸಿಕವಾಗಿ ವಿಚಲಿತನಾಗಿರುವ csp ರೋಗದಿಂದ ಬಳಲುತ್ತಿರುವ ಪೋಲೀಸ್ ಪಾತ್ರದಲ್ಲಿ ಉತ್ತಮ ಅಭಿನಯ. ನಾಯಕಿ ಹೃದಯ ಅವಂತಿ, ಅಜಿತ್ ಜೈರಾಜ್ , ಯಶ್ವಂತ್ ಶೆಟ್ಟಿ ಎಲ್ಲರ ಅಭಿನಯ ಪೂರಕ. ದ್ವಿತೀಯಾರ್ಧದಲ್ಲಿ ಬರುವ ಪೋಲೀಸ್ ಪಾತ್ರದಲ್ಲಿ ಭವಾನಿ ಪ್ರಕಾಶ್ ಅವರ ಪಾತ್ರ ಕತೆಗೆ ಹೊಸ ವೇಗ ನೀಡುವುದರಿಂದ ಅಭಿನಯ ಗಮನಾರ್ಹವೆನಿಸುತ್ತದೆ.

ತಾಂತ್ರಿಕತೆ

ವಿನೋದ್ ಭಾರತಿಯವರ ಛಾಯಾಗ್ರಹಣ ಸಕತ್ ಕೆಲಸ ಮಾಡಿದೆ. ಅರುಣ್ ಸುರಧಾ ಸಂಗೀತ ಚೆನ್ನಾಗಿದೆಯಾದರೂ ಹಿನ್ನಲೆ ಸಂಗೀತ ಪ್ರಶಂಸನೀಯ. ಡಿಫರೆಂಟ್ ಆಗಿರುವ ಸಸ್ಪೆನ್ಸ್ ಸ್ಟೋರಿಯನ್ನು ಕೌತುಕಮಯವಾಗಿ ತೆರೆಗೆ ತರುವಲ್ಲಿ ನಿರ್ದೇಶಕ ಶಿವಗಣೇಶ್ ಭಾಗಶಃ ಯಶಸ್ವಿಯಾಗಿದ್ದಾರೆ. ಜನರಿಗೆ ಒಳ್ಳೇ ಥ್ರಿಲ್ಲರ್ ಚಿತ್ರ ನೀಡಬೇಕೆಂಬ ಅವರ ಉದ್ದೇಶ ಚಿತ್ರ ನೋಡುವಾಗ ಎದ್ದು ಕಾಣುತ್ತದೆ.

ಕೊನೆಯ ಮಾತು

ತಾಂತ್ರಿಕವಾಗಿ ಶ್ರೀಮಂತ ಮರ್ಡರ್ ಮಿಸ್ಟರಿಯಾಗಿ ರಂಜಿಸುವಲ್ಲಿ “ತ್ರಾಟಕ” ಬಹುಪಾಲು ಯಶಸ್ವಿಯಾಗುತ್ತದೆ. ಥ್ರಿಲ್ಲರ್ ಸಿನಿಮಾ ಪ್ರಿಯರು ಆರಾಮಾಗಿ ಒಮ್ಮೆ ನೋಡಬಹುದು.

ರೇಟಿಂಗ್ – 3.25/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top