RESPONSIVE LEADERBOARD AD AREA
Film News

‘ದಾರಿ ತಪ್ಪಿದ ಮಗ’ನ ಮೂರನೇ ಹಂತದ ಚಿತ್ರೀಕರಣ..!!

ಡಾ.ರಾಜ್ ಕುಟುಂಬದ ಕುಡಿ, ಹಿರಿಯ ನಟ ರಾಮ್ ಕುಮಾರ್ ಪುತ್ರ ಧೀರೇನ್ ಕುಮಾರ್ ಅಭಿನಯಿಸುತ್ತಿರುವ ‘ದಾರಿ ತಪ್ಪಿದ ಮಗ’ ಚಿತ್ರದ ಮೂರನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಬುಧವಾರ ಮೂರನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

ಧೀರೇನ್ ಕುಮಾರ್ ಗೆ ನಾಯಕಿಯಾಗಿ ಮಾನ್ವಿತ ಕಾಮತ್ ನಟಿಸಿದ್ದು ಈಗಾಗಲೇ 30 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು 30 ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಮಾತಿನ ಭಾಗದ ಚಿತ್ರೀಕರಣವನ್ನು ನಡೆಸಲಾಗುವುದು. ಬಳಿಕ ಹಾಡುಗಳ ಚಿತ್ರೀಕರಣ ಮಾಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಡಾ. ರಾಜಕುಮಾರ್ 1975 ರಲ್ಲಿ ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ದಾರಿ ತಪ್ಪಿದ ಮಗ’. ಇದನ್ನು ಪೀಕೇಟಿ ಶಿವರಾಂ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ರಾಜ್ ಕುಮಾರ್ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಅದೇ ಹೆಸರನ್ನು ಮೊಮ್ಮಗನ ಮೊದಲ ಚಿತ್ರಕ್ಕೆ ಇಟ್ಟಿರುವುದು ಕುತೂಹಲ ಕೆರಳಿಸಿದೆ.

ಡಾಕ್ಟರ್ ಸೂರಿ ಮತ್ತು ಜಯಣ್ಣ ಕಂಬೈನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಹಿರಿಯ ನಟರಾದ ಚರಣರಾಜ್ ಸಾಧುಕೋಕಿಲ, ಅವಿನಾಶ್ ಮತ್ತು ಚಿಕ್ಕಣ್ಣ ನಟಿಸುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top