RESPONSIVE LEADERBOARD AD AREA
Film News

‘ದಿ ವಿಲನ್’ ಅಕ್ಟೋಬರ್ ಹದಿನೆಂಟಕ್ಕೆ ಬಿಡುಗಡೆ

ಪ್ರೇಮ್ ನಿರ್ದೇಶನದ, ಶಿವಣ್ಣ ಮತ್ತು ಕಿಚ್ಚ ಸುದೀಪ ಅಭಿನಯದ ‘ದಿ ವಿಲನ್’ ಚಿತ್ರ ಇದೇ ದಸರಾದಲ್ಲಿ ತೆರೆಗೆ ಬರಲಿದೆ ಎಂದು ಪ್ರೇಮ್ ಘೋಷಿಸಿದ್ದಾರೆ.

ಮೊದಲು ಗಣೇಶ ಹಬ್ಬದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು, ನಿರ್ಮಾಪಕರು ಹೇಳಿದ್ದರು. ಬೇರೆ ಬೇರೆ ಕಾರಣದಿಂದ ಮುಂದೆ ಹೋಗಿದ್ದ ಚಿತ್ರ, ಇದೀಗ ದಸರಾದಲ್ಲಿ ಅಂದರೆ ಅಕ್ಟೋಬರ್ 18 ರಂದು ತೆರೆಕಾಣಲಿದೆ. ಈಗಾಗಲೇ ಡಬ್ಬಿಂಗ್ ಕೆಲಸ ಮುಗಿದಿದ್ದು, ಏಕಕಾಲದಲ್ಲಿ
ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಕೂಡ ಬರಲಿದೆ ಎಂದು ಪ್ರೇಮ್ ಹೇಳಿದ್ದಾರೆ.

ಅಕ್ಟೋಬರ್ 2ರಿಂದ ಟಿಕೆಟ್ ಬುಕಿಂಗ್ ಆರಂಭವಾಗಲಿದ್ದು, ಅಭಿಮಾನಿಗಳು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಕರ್ನಾಟಕದಾದ್ಯಂತ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಕಾಣಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ ‘ಟೀಸರ್’ ಹವಾ ಮೂಡಿಸುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಚಿತ್ರದುರ್ಗ, ಕೇಂದ್ರಗಳಿಗೆ ಚಿತ್ರ ದಾಖಲೆ ಬೆಲೆಗೆ ಮಾರಾಟವಾಗಿದ್ದು, ಉಳಿದ ಕೇಂದ್ರಗಳಿಂದಲೂ ಭಾರಿ ಬೇಡಿಕೆ ಬರುತ್ತಿದೆ. ಎಂದು ಪ್ರೇಮ್ ಹೇಳಿದ್ದಾರೆ.

ತನ್ವಿ ಕ್ರಿಯೇಷನ್ಸ್ ರವರ ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ, ಆಮಿ ಜಾಕ್ಸನ್ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ತೆಲುಗಿನ ಶ್ರೀಕಾಂತ್, ರವಿಶಂಕರ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಛಾಯಾಗ್ರಹಣ ಗಿರಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top