RESPONSIVE LEADERBOARD AD AREA
Film News

ದಿ ವಿಲನ್ ಚಿತ್ರದ ಬಾಲ್ಕನಿ ಟಿಕೆಟ್ ದರವೆಷ್ಟು ಗೊತ್ತಾ..?!

ಪ್ರೇಮ್ ನಿರ್ದೇಶನದ, ಶಿವಣ್ಣ ಮತ್ತು ಕಿಚ್ಚ ಸುದೀಪ ಅಭಿನಯದ ‘ದಿ ವಿಲನ್’ ಚಿತ್ರ ಇದೇ ಅಕ್ಟೋಬರ್ 18ಕ್ಕೆ ಬರುತ್ತಿರವುದು ನಮಗೆಲ್ಲ ಗೊತ್ತೇ ಇದೆ. ಹೊಸ ಸುದ್ದಿ ಏನೆಂದರೆ ‘ದಿ ವಿಲನ್’ ಚಿತ್ರದ ಬಾಲ್ಕನಿ ಟಿಕೆಟ್ ನ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.

ಹೌದು..! ‘ದಿ ವಿಲನ್’ ಕನ್ನಡ ಸಿನಿಮಾಗಳ ಹಳೆಯ ಲೆಕ್ಕಾಚಾರವನ್ನು ತಲೆಕೆಳಗು ಮಾಡುತ್ತಿದೆ. ಭಾರೀ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರವು ಪ್ರಪಂಚದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕನ್ನಡದ ಮಟ್ಟಿಗೆ ದಾಖಲೆ ನಿರ್ಮಿಸಲಿದೆ. ಈಗ ಚಿತ್ರದ ಬಾಲ್ಕನಿ ಟಿಕೆಟ್ ದರವನ್ನು 200 ರೂಪಾಯಿ ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ 500 ರೂ ನಿಗದಿಗೊಳಿಸಲಾಗಿದೆ.

ಈ ಬಗ್ಗೆ ಪ್ರೇಮ್ ಹೇಳುವುದು ಹೀಗೆ. “ದಿ ವಿಲನ್ ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ನಿರ್ಮಾಪಕನನ್ನು ಉಳಿಸಲು ದರ ಹೆಚ್ಚಳ ಮಾಡಲಾಗಿದೆ. ಹಿಂದಿ, ತಮಿಳು, ತೆಲುಗು ಚಿತ್ರಗಳು ಬಿಡುಗಡೆಯಾದಾಗ ಸಾವಿರ ರೂಗಳನ್ನು ಖರ್ಚು ಮಾಡಲು ಹಿಂದೆ ಮುಂದೆ ನೋಡದ ಪ್ರೇಕ್ಷಕರು, ನಮ್ಮ ಸಿನಿಮಾಗೆ ಎರಡು ಪಟ್ಟು ಹಣ ನೀಡಿ ನೋಡಲು ಹಿಂಜರಿಯಲಾರರು. ಉತ್ತಮ ಸಿನಿಮಾ ಮಾಡಿದ್ದೇವೆ. ಖಂಡಿತವಾಗಿ ಕನ್ನಡ ಪ್ರೇಕ್ಷಕರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ” ಎನ್ನುತ್ತಾರೆ.

“ಚಿತ್ರಕ್ಕೆ ಭಾರಿ ವೆಚ್ಚವನ್ನು ಮಾಡಿದ್ದೇವೆ. ಹಾಗಾಗಿ ದರ ಹೆಚ್ಚಿಸಿದ್ದೇವೆ. ಒಂದು ಒಳ್ಳೆಯ ಕನ್ನಡ ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ನಮಗೆ ಇದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಮನೋಹರ್

ಅಕ್ಟೋಬರ್ 11ರಿಂದ ಟಿಕೆಟ್ ಬುಕಿಂಗ್ ಆರಂಭವಾಗಲಿದ್ದು, ಅಭಿಮಾನಿಗಳು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಚಿತ್ರದುರ್ಗ, ಕೇಂದ್ರಗಳಿಗೆ ಚಿತ್ರ ದಾಖಲೆ ಬೆಲೆಗೆ ಮಾರಾಟವಾಗಿದ್ದು, ಚಿತ್ರದ ಕಲೆಕ್ಷನ್ ಕನ್ನಡದ ಮಟ್ಟಿಗೆ ದಾಖಲೆಯಾಗಲಿದೆ ಎನ್ನುತ್ತಿದೆ ಗಾಂಧಿನಗರ.

ತನ್ವಿ ಕ್ರಿಯೇಷನ್ಸ್ ನಲ್ಲಿ, ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ತೆಲುಗಿನ ಶ್ರೀಕಾಂತ್, ರವಿಶಂಕರ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಗಿರಿ ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top