RESPONSIVE LEADERBOARD AD AREA
Film News

ಧ್ರುವ ಸರ್ಜಾ ‘ಪೊಗರು’..! ಜಗಪತಿಬಾಬು ಖದರು!!!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ‘ಕಿರಿಕ್ ಪಾರ್ಟಿ’ ರಶ್ಮಿಕಾ ಮಂದಣ್ಣ, ಅಭಿನಯಿಸುತ್ತಿರುವ ‘ಪೊಗರು’ ಚಿತ್ರದ ಎರಡನೇ ಶೆಡ್ಯೂಲ್ ನ ಶೂಟಿಂಗ್ ಫೆಬ್ರವರಿ 4 ರಿಂದ ಪ್ರಾರಂಭವಾಗಿದ್ದು, ತೆಲುಗಿನ ಹಿರಿಯ ನಟ ಜಗಪತಿ ಬಾಬು, ಆಕ್ಷನ್ ಪ್ರಿನ್ಸ್ ಎದುರು ಖಳನಾಯಕನಾಗಿ ಅಬ್ಬರಿಸಲಿದ್ದಾರೆ.

ದಕ್ಷಿಣ ಭಾರತದ ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚುವ ಕಂಚಿನ ಕಂಠದ ಜಗಪತಿಬಾಬು, ತೆಲುಗಿನ ಪ್ರಮುಖ ನಾಯಕರ ಎದುರು ಗರ್ಜಿಸಿ ಗೆದ್ದವರು. ಈ ಮೊದಲು ಕನ್ನಡದಲ್ಲಿಯೂ ಖಳನಾಯಕನಾಗಿ ನಟಿಸಿರುವ ಇವರು, ಕಿಚ್ಚ ಸುದೀಪ ಅಭಿನಯದ ‘ಬಚ್ಚನ್’, ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಜಾಗ್ವಾರ್’ ಚಿತ್ರಗಳಲ್ಲಿ ಖಳ ನಟನಾಗಿ ಕಾಣಿಸಿಕೊಂಡಿದ್ದರು.

‘ಪೊಗರು’ ಚಿತ್ರದ ಚಿತ್ರೀಕರಣ ಹೈದ್ರಾಬಾದ್ ನಲ್ಲಿ ನಡೆಯುತ್ತಿದ್ದು, ಚಿತ್ರದಲ್ಲಿ ರವಿಶಂಕರ್ ಸಾಧು ಕೋಕಿಲ, ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ.

ಧ್ರುವ ಈ ಚಿತ್ರದ ಮೊದಲ ಭಾಗದಲ್ಲಿ ಶಾಲಾ ಬಾಲಕನ ಪಾತ್ರ ನಿರ್ವಹಿಸಿದ್ದು, ಈಗ ಮತ್ತೆ ಯುವಕನಾಗಿ ಕಾಣಿಸಿಕೊಳ್ಳಲು 30 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಈ ನಡುವೆ ಅವರು ಗಡ್ಡ ಮತ್ತು ತಲೆಗೂದಲನ್ನು ಬೆಳೆಯಲು ಬಿಟ್ಟಿದ್ದು, ಅವರ ಹೊಸ ಲುಕ್ ನ ಫೋಟೋಗಳು ಜಬರ್ದಸ್ತ್ ಆಗಿವೆ.

ಸುಮಾರು 30 ದಿನಗಳ ಈ ಶೆಡ್ಯೂಲ್ ನಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಪಾಲ್ಗೊಂಡಿದ್ದಾರೆ. ಇದಕ್ಕಾಗಿ ಹೈದರಾಬಾದ್ ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ವಿಶೇಷ ಸೆಟ್ ಗಳನ್ನು ನಿರ್ಮಿಸಿದ್ದು, ನಂದಕಿಶೋರ್ ನಿರ್ದೇಶನದಲ್ಲಿ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಚಿತ್ರೀಕರಣ ನಡೆಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top