RESPONSIVE LEADERBOARD AD AREA
Film News

ಸಸ್ಪೆನ್ಸ್ ಇನ್ವೆಸ್ಟಿಗೇಶನ್ ಥ್ರಿಲ್ಲರ್ ‘ಕವಲುದಾರಿ’ ಟೀಸರ್ ಔಟ್..!!

ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ರವರ ಚೊಚ್ಚಲ ನಿರ್ಮಾಣದ ‘ಕವಲು ದಾರಿ’ ಚಿತ್ರ, ಭರವಸೆಯ ಯುವ ನಟ ರಿಷಿ ನಾಯಕತ್ವದಲ್ಲಿ ಮೂಡಿಬರುತ್ತಿದ್ದು, ಚಿತ್ರದ ಕುತೂಹಲಕಾರಿಯಾದ ಟೀಸರ್ ಬಿಡುಗಡೆಯಾಗಿದೆ .

ಹೇಮಂತ್. ಆರ್. ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಇನ್ವೆಸ್ಟಿಗೇಶನ್ ಥ್ರಿಲ್ಲರ್ ಆಗಿದ್ದು, ಟೀಸರ್ ಕುತೂಹಲ ಕೆರಳಿಸುವಂತಿದೆ. ಚಿತ್ರವನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದ್ದು, ಚಿತ್ರದ ಟ್ರೇಲರನ್ನು ಚಿತ್ರ ಬಿಡುಗಡೆಯ ಎರಡು ವಾರ ಮುಂಚಿತವಾಗಿ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಾರೆ.

ಇದು ಹೇಮಂತ್ ರಾವ್ ಅವರ ಎರಡನೇ ಪ್ರಯತ್ನ. ಮೊದಲು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದ ಮೂಲಕ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಸೆಳೆದಿದ್ದಲ್ಲದೆ ಕಮರ್ಷಿಯಲ್ ಆಗಿಯೂ ಯಶಸ್ಸು ಗಳಿಸಿದ್ದರು. ಹಾಗಾಗಿ ಈ ಯುವ ನಿರ್ದೇಶಕನ ಚಿತ್ರವನ್ನು ಜನ ಕುತೂಹಲದಿಂದ ಕಾಯುತ್ತಿದ್ದಾರೆ.

‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ಗೋಧಿ ಬಣ್ಣ..’ದಲ್ಲಿ ಮರೆಗುಳಿ ವೃದ್ಧನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಅನಂತನಾಗ್, ಈ ಚಿತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ. ಅಚ್ಯುತ್ ಕುಮಾರ್, ರೋಶನಿ ಪ್ರಕಾಶ್, ಸುಮನ್ ರಂಗನಾಥ್ ಸಮನ್ವಿತಾ ಶೆಟ್ಟಿ, ಸಿದ್ಧಾರ್ಥ ಮಾಧ್ಯಮಿಕ, ಮುಂತಾದವರ ತಾರಾಗಣವಿದೆ. ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top