RESPONSIVE LEADERBOARD AD AREA
Film News

ಪಂಟರ್ ಸಾವಲ್ಲಿ ಹುಟ್ಟಿದ ಹಿಟ್ ಸಾಂಗ್

ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಬಿಡುಗಡೆ ಮಾಡಿದ “ಸಲಗ” ಚಿತ್ರದ “ಸೂರಿ ಅಣ್ಣ” ಹಾಡು ಹಿಟ್ ಆಗಿದೆ. 2020ರ ಮೊದಲ ಹಿಟ್ ಸಾಂಗ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಬಿಡುಗಡೆ ಮಾಡುವಾಗಲೇ ಶಿವಣ್ಣ ಹೇಳಿದ್ದರು, ಟಗರು ಬಂತು ಟಗರು ತರ ಹಿಟ್ ಆಗುತ್ತೆ ಅಂತ. ಆ ಹಾಡನ್ನು ಹಾಡಿದ್ದ ಅಂತೋನಿ ದಾಸನ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಚರಣರಾಜ್ ಮತ್ತೊಂದು ಮಾಸ್ ಸಾಂಗ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಡಿನ ಸೀನ್ ಬಹಳ ವಿಶೇಷವಾಗಿದೆ. ಸೂರಿ ಅನ್ನೋ ಪಂಟರ್ ಒಬ್ಬನ ಸಾವು ಆಗಿದೆ. ಸಾವಿಗೆ ಬಂದಿರುವ ಮಿಕ್ಕ ಪಂಟರ್ ಗಳು ಸೂರಿ ಅಣ್ಣನ ಗುಣಗಾನ ಮಾಡಬೇಕು. ಆಗ ಹುಟ್ಟಿಕೊಂಡಿದ್ದೇ ಸೂರಿ ಅಣ್ಣ ಹಾಡು. ಎಷ್ಟು ಕುಡಿದ್ರು ಸ್ಟಡಿಯಾಗಿ ನಿಲ್ತಾ ಇದ್ದೆ, ಪಂಟರ್ ಗಳಿಗೆ ಪಂಟರ್ ನೀನು, ನಿನ್ನಂತಹ ಪಂಟರ್ ನ ಇವತ್ತು ಈಸಿಯಾಗಿ ಹೊಗೆ ಹಾಕಿದ್ದಾರೆ. ಎಂದೆಲ್ಲ ವಿವರಿಸುವ ಈ ಹಾಡು ಮಾಸ್ ಆಡಿಯನ್ಸ್ ಗಳಿಗೆ ಕೇಳಿದ ಕೂಡಲೇ ಮಜಾ ಕೊಡುತ್ತೆ.

ದುನಿಯಾ ವಿಜಯ್ ನಿರ್ದೇಶನದ “ಸಲಗ” ಚಿತ್ರ ಮುಹೂರ್ತ ದಿನದಿಂದಲೇ ಸೌಂಡು ಮಾಡುತ್ತಲೇ ಬಂದಿರುವ ಸಿನಿಮಾ. ದುನಿಯಾ ವಿಜಯ್ ಅವರು ತಮಗಿರುವ ಎಲ್ಲಾ ಪ್ರತಿಭೆಯನ್ನು ಈ ಸಿನಿಮಾದಲ್ಲಿ ಪಣವಾಗಿ ಇಟ್ಟಿದ್ದಾರೆ. ಅದು ಚಿತ್ರದ ಪೋಸ್ಟರ್, ಮೇಕಿಂಗ್ ವಿಡಿಯೋ, ಹಾಗೂ ಈ ಹಾಡಿನಲ್ಲಿ ನಿಚ್ಚಳವಾಗಿ ಕಾಣುತ್ತಿದೆ. ಸಿನಿಮಾದಲ್ಲಿ ಹಿಟ್ ಕಂಟೆಂಟ್ ಇದೆ ಅನ್ನೋದರ ಹಿ0ಟ್ ಒಂದೊಂದಾಗಿ ಸಿಗುತ್ತಾ ಹೋಗುತ್ತಿದೆ.

ಸಿನಿಮಾದಲ್ಲಿ 5 ಹಾಡುಗಳಿದ್ದು ಮಿಕ್ಕ 4 ಹಾಡುಗಳು ಸದ್ಯದಲ್ಲೇ ಒಂದೊಂದಾಗಿ ಬಿಡುಗಡೆ ಆಗಲಿದೆ. ಮೊದಲ ಹಾಡು ನಿರೀಕ್ಷೆಯಂತೆಯೇ ಹಿಟ್ ಆಗಿದ್ದು ಚರಣರಾಜ್ ಮ್ಯೂಸಿಕ್ ನಲ್ಲಿ ಮೂಡಿಬಂದಿರುವ ಬಾಕಿ ನಾಲ್ಕು ಹಾಡುಗಳು ಕೂಡ ಇದೇ ರೀತಿ ಸಂಚಲನ ಮೂಡಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ದಿನೇ ದಿನೇ ಸಲಗ ಕ್ರೇಜ್ ಹೆಚ್ಚುವುದು ನಿಶ್ಚಿತ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top