RESPONSIVE LEADERBOARD AD AREA
Film News

ನಾಯಕಿಯೊಂದಿಗೆ ನೃತ್ಯ ಮಾಡಿದ ‘ಪೈಲ್ವಾನ’…!

ಕಿಚ್ಚ ಸುದೀಪ ಅಭಿನಯದ ‘ಪೈಲ್ವಾನ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಗೆ ನೃತ್ಯ ನಿರ್ದೇಶನ ಮಾಡಿದ್ದ, ಬಾಲಿವುಡ್‌ ಹಿರಿಯ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಈಗ ಡ್ಯುಯೆಟ್ ಹಾಡಿಗೂ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

ಈ ಯುಗಳ ಗೀತೆಗೆ ಕಿಚ್ಚ ಸುದೀಪ ಹಾಗೂ ನಾಯಕಿ ಆಕಾಂಕ್ಷ ಸಿಂಗ್ ಹೆಜ್ಜೆ ಹಾಕುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪೈಲ್ವಾನ್ ಕಾಣಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ, ದೇಹ ಹುರಿಗೊಳಿಸಿದ್ದು, ಕಳೆದ ಏಳೆಂಟು ತಿಂಗಳಿನಿಂದ ಬೆವರು ಹರಿಸಿದ್ದಾರೆ. ಅದರ ಪರಿಣಾಮ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಬಂದಿದ್ದು, ಹೊಸ ರೂಪ ಪಡೆದುಕೊಂಡಿದೆ. ಕನ್ನಡದ ಹಲವು ನಟರು ಸಿಕ್ಸ್‌ ಪ್ಯಾಕ್‌ ಹಿಂದೆ ಬಿದ್ದಿದ್ದರೂ, ಒಂಚೂರು ತಲೆ ಕೆಡಿಸಿಕೊಳ್ಳದ ಸುದೀಪ್ ‘ಪೈಲ್ವಾನ್’ ಚಿತ್ರಕ್ಕಾಗಿ ವಿಶೇಷ ತಯಾರಿ ನಡೆಸಿರುವುದು ಚಿತ್ರದ ಪೋಸ್ಟರ್ ಗಳನ್ನು ನೋಡಿದಾಗ ತಿಳಿಯುತ್ತದೆ.

ಇದೇ ಮೊದಲ ಬಾರಿಗೆ ಹಿಂದಿಯ ಹೀ ಮ್ಯಾನ್ ಸುನಿಲ್ ಶೆಟ್ಟಿ, ಸುಶಾಂತ್ ಸಿಂಗ್, ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕನ್ನಡದ ಶರತ್ ಲೋಹಿತಾಶ್ವ ಅಭಿನಯಿಸುತ್ತಿದ್ದಾರೆ. ಇದುವರೆಗೂ ಸುದೀಪ್ ಮಾಡಿರುವ ಚಿತ್ರಗಳಲ್ಲಿ ವಿಭಿನ್ನ ಚಿತ್ರ ಇದಾಗಲಿದೆ. ಸುದೀಪ್ ರ ಹೊಸ ಅವತಾರ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

RRR ಪ್ರೊಡಕ್ಷನ್ಸ್ ರವರ ಪ್ರಥಮ ಕಾಣಿಕೆ ಆಗಿರುವ ‘ಪೈಲ್ವಾನ್’ ಚಿತ್ರವನ್ನು ಕೃಷ್ಣ ನಿರ್ದೇಶಿಸುತ್ತಿದ್ದಾರೆ. ‘ಹೆಬ್ಬುಲಿ’ ಚಿತ್ರದ ನಂತರ ಕೃಷ್ಣ ಮತ್ತು ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದ ಛಾಯಾಗ್ರಹಣ ಕರುಣಾಕರ್ ಅವರದ್ದು.

ಚಿತ್ರದ ಟೈಟಲ್ ಅನ್ನು ಕನ್ನಡ, ತಮಿಳು, ತೆಲುಗು ಮತ್ತು ಮರಾಠಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಚಿತ್ರವನ್ನು ಎಂಟು ಭಾಷೆಗಳಲ್ಲಿ ಇದೇ ಬೇಸಿಗೆ ರಜೆಯಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆಯಂತೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top