RESPONSIVE LEADERBOARD AD AREA
Film News

ಶ್ರೀಮುರುಳಿ ‘ಭರಾಟೆ’ ಮತ್ತು ಒಂಬತ್ತು ಖಳನಟರು..!!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರುವ ‘ಭರಾಟೆ’ ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ಭರದಿಂದ ಸಾಗುತ್ತಿದೆ. ಪ್ರಮುಖ ಸಾಹಸ ದೃಶ್ಯವೊಂದರ ಚಿತ್ರೀಕರಣವನ್ನು ಸಾಹಸ ನಿರ್ದೇಶಕ ರವಿವರ್ಮ ನೇತೃತ್ವದಲ್ಲಿ ನೆಲಮಂಗಲದ ಸುತ್ತಮುತ್ತಲು ಚಿತ್ರೀಕರಿಸಲಾಗುತ್ತಿದೆ.

ಶ್ರೀಮುರಳಿಯವರ ಎದುರಿಗೆ ಖಳನಟ ಸಹೋದರರಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಶರ್ಮಾ, ಅವಿನಾಶ್, ಶರತ್ ಲೋಹಿತಾಶ್ವ, ರಾಜು ವಾಡೆ, ಮನಮೋಹನ್, ಉಗ್ರಂ ಮಂಜು ಹಾಗೂ ದೀಪಕ್ ಹೀಗೆ ಒಂಬತ್ತು ಜನ ಖ್ಯಾತ ಖಳ ನಟರು ಅಬ್ಬರಿಸಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ 50 ನೈಜ ಕುಸ್ತಿ ಪೈಲ್ವಾನರು ಮತ್ತು ಬಾಡಿ ಬಿಲ್ಡರ್ ಗಳು ಕಾಣಿಸಿಕೊಳ್ಳುತ್ತಿದ್ದಾರೆ. 60 ಲಕ್ಷ ವೆಚ್ಚದಲ್ಲಿ ಸೆಟ್ ನಿರ್ಮಿಸಲಾಗಿದ್ದು ನಿರ್ದೇಶಕ ಚೇತನ್ ಕುಮಾರ್ ನೇತೃತ್ವದಲ್ಲಿ ಚಿತ್ರದ ಚಿತ್ರೀಕರಣ ಸಾಗಿದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಇದೇ ಮೊದಲ ಬಾರಿಗೆ ಸುಪ್ರೀತ್ ಎಂಬ ಹೊಸ ನಿರ್ಮಾಪಕರು ಚಿತ್ರದ ನಿರ್ಮಾಣವನ್ನು ಮಾಡುತ್ತಿದ್ದಾರೆ. ಪದವಿ ಪರೀಕ್ಷೆಗಳನ್ನು ಬರೆಯುತ್ತಿರುವ ನಾಯಕಿ ಶ್ರೀ ಲೀಲ, ಪರೀಕ್ಷೆಗಳು ಮುಗಿದ ನಂತರ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top