RESPONSIVE LEADERBOARD AD AREA
Film News

‘ಭರಾಟೆ’ ಹಾಡಿಗೆ ಭರ್ಜರಿ ಚಿತ್ರೀಕರಣ..!!

ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕಳೆದ ಐದು ದಿನಗಳಿಂದ ಸುಮಾರು 200 ಜನ ಸಹ ನೃತ್ಯ ಕಲಾವಿದರೊಂದಿಗೆ ನಾಯಕ ಶ್ರೀಮುರಳಿ, ನಾಯಕಿಯರಾದ ಶ್ರೀ ಲೀಲಾ ಮತ್ತು ರಚಿತಾ ರಾಮ್, ಅಹೋರಾತ್ರಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಹಾಕಿರುವ ಅದ್ದೂರಿ ಸೆಟ್ ನಲ್ಲಿ ಮೋಹನ್ ಅವರ ನೃತ್ಯ ನಿರ್ದೇಶನದಲ್ಲಿ ಈ ಮೂವರು ಹೆಜ್ಜೆ ಹಾಕಿದ್ದಾರೆ. ‘ಬಿಟ್ಟಾಕ್ರಿ… ಡಿಪ್ರೆಶನ್ ಹುಡ್ಕೊಳ್ರಿ ಸಲ್ಯೂಷನ್…’ ಎನ್ನುವ ವಿಶಿಷ್ಟ ಡ್ಯಾನ್ಸ್ ನಂಬರನ್ನು ನಿರ್ದೇಶಕ ಚೇತನ್ ಕುಮಾರ್ ಬರೆದಿದ್ದಾರೆ.

“ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಕೇಳುತ್ತಿದ್ದರೆ ಡಿಪ್ರೆಶನ್ ನಲ್ಲಿ ಮುಳುಗಿರುವ ಯುವಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ” ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.

ಸುಪ್ರೀತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗಿರೀಶ್ ಗೌಡ ಛಾಯಾಗ್ರಹಣವಿದ್ದು, ಇನ್ನು ಮೂರು ಹಾಡುಗಳ ಚಿತ್ರೀಕರಣ ಹಾಗೂ ಆರು ದಿನಗಳ ಮಾತಿನ ಭಾಗದ ಚಿತ್ರೀಕರಣ ಮುಗಿಸಿದರೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಂತೆ ಎನ್ನುತ್ತದೆ ಚಿತ್ರತಂಡ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top