RESPONSIVE LEADERBOARD AD AREA
Film News

ಪವರ್ ಸ್ಟಾರ್ ಜನ್ಮದಿನಕ್ಕೆ ‘ನಟಸಾರ್ವಭೌಮ’ ತಂಡದ ವಿಶೇಷ ಉಡುಗೊರೆ..!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ 50 ನೇ ದಿನದತ್ತ ದಾಪುಗಾಲಿಡುತ್ತಿದೆ. ಈ ನಡುವೆ ಪುನೀತ್ ತಮ್ಮ ಜನ್ಮದಿನವನ್ನು ಮಾರ್ಚ್ 17 ರಂದು ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಚಿತ್ರತಂಡ ಅಪ್ಪು ಜನ್ಮದಿನಕ್ಕೆ ಸ್ಪೆಷಲ್ ಆದ ಕೊಡುಗೆಯನ್ನು ನೀಡಲು ನಿರ್ಧರಿಸಿದೆ.

‘ನಟಸಾರ್ವಭೌಮ’ ದ ಟೈಟಲ್ ಸಾಂಗ್, “ನಟಸಾರ್ವಭೌಮ… ಇಸ್ ದ ಕಿಂಗ್ ಆಫ್ ಸಿನಿಮಾ…” ಎಂಬ ಗೀತೆ ಬಹಳ ಜನಪ್ರಿಯವಾಗಿತ್ತು. ಈ ಹಾಡನ್ನು ನಿರ್ದೇಶಕ ಪವನ್ ಒಡೆಯರ್ ರಚಿಸಿದ್ದು, ಡಿ ಇಮ್ಮಾನ್ ಸಂಗೀತ ನೀಡಿದ್ದರು. ಈಗ ಇದೇ ಟ್ರ್ಯಾಕ್ ಗೆ ಪುನೀತ್ ಅವರ ಚಿತ್ರ ಜೀವನದ ಅಂಶಗಳನ್ನು ಒಳಗೊಂಡ ಸಾಹಿತ್ಯವನ್ನು ಅಳವಡಿಸಲು ಯೋಚಿಸಲಾಗಿದೆ. ಈ ಹಾಡನ್ನು ರೀರೆಕಾರ್ಡಿಂಗ್ ಮಾಡಿದ ಬಳಿಕ ಚಿತ್ರದ 50 ನೇ ದಿನದ ಸಂಭ್ರಮ ಹಾಗೂ ಪುನೀತ್ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಪವರ್ ಸ್ಟಾರ್ ಅವರಿಗೆ ಉಡುಗೊರೆಯಾಗಿ ನೀಡಲು ಚಿತ್ರದ ನಿರ್ದೇಶಕ ಮತ್ತು ಚಿತ್ರತಂಡ ಯೋಜನೆಯನ್ನು ಹಾಕಿಕೊಂಡಿದೆ ಎನ್ನಲಾಗಿದೆ.

ಈ ಚಿತ್ರದಲ್ಲಿ ಪವರ್ ಸ್ಟಾರ್ ಗೆ ನಾಯಕಿಯರಾಗಿ ಅನುಪಮಾ ಪರಮೇಶ್ವರನ್, ರಚಿತರಾಮ್ ನಟಿಸಿದ್ದಾರೆ. ರವಿಶಂಕರ್ ಹಾಗೂ ಹಾಸ್ಯ ನಟ ಚಿಕ್ಕಣ್ಣ ಈ ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರ ಭರ್ಜರಿ ಗಳಿಕೆ ಮತ್ತು ಪ್ರೇಕ್ಷಕರ ಮೆಚ್ಚುಗೆ ಪಡೆದು 50ನೇ ದಿನದತ್ತ ದಾಪುಗಾಲಿಡುತ್ತಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top