RESPONSIVE LEADERBOARD AD AREA
Film News

ಸಿಂಪಲ್ ಸುನಿಯ ‘ಬಜಾರ್’ ಗೆ ಭೇಟಿ ನೀಡಲು ಇನ್ನಷ್ಟು ದಿನ ಕಾಯಬೇಕು..!

ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಚಿತ್ರ ಈ ಮೊದಲು ಸಂಕ್ರಾಂತಿ ಸಂದರ್ಭದಲ್ಲಿ (ಜನವರಿ 11) ಬಿಡುಗಡೆಯಾಗುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಇದೀಗ ಸುನಿ ಈ ಚಿತ್ರ ಬಿಡುಗಡೆಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದ್ದಾರೆ.

ಪ್ರಾಣಿ ದಯಾ ಮಂಡಳಿ (ಅನಿಮಲ್ ಬೋರ್ಡ್) ಮತ್ತು ಥಿಯೇಟರ್ ಗಳ ಕೊರತೆಯ ಕಾರಣ ನೀಡಿ ಚಿತ್ರ ಬಿಡುಗಡೆ ಮುಂದೂಡುತ್ತಿರುವ ಬಗ್ಗೆ ಸಿಂಪಲ್ ಸುನಿ ಹೇಳಿದ್ದಾರೆ.

ಈ ಚಿತ್ರದಲ್ಲಿ ಪಾರಿವಾಳಗಳ ಬಳಕೆಯನ್ನು ಮಾಡಿದ್ದು ಈ ಕುರಿತಾಗಿ ಅನಿಮಲ್ ಬೋರ್ಡ್ ನವರು ಕೆಲವು ವಿವರಣೆಗಳನ್ನು ಕೇಳಿದ್ದಾರೆ. ಈ ಕುರಿತು ಈಗಾಗಲೇ ಸಾಕಷ್ಟು ಮಾಹಿತಿಯನ್ನು ನೀಡಿದ್ದರೂ ಅವರು ಇನ್ನಷ್ಟು ಸಮಯ ಕೇಳಿದ್ದಾರೆ. ಹೀಗಾಗಿ ಚಿತ್ರ ಬಿಡುಗಡೆ ತಡವಾಗುತ್ತಿದೆ.

ಅಲ್ಲದೆ ಅದೇ ವಾರ 8 ಚಿತ್ರಗಳು ಬಿಡುಗಡೆಯಾಗುತ್ತಿದ್ದು, ರಜನಿಕಾಂತ್ ಅಭಿನಯದ ‘ಪೆಟ್ಟಾ’, ರಾಮ್ ಚರಣ್ ತೇಜ ಅಭಿನಯದ ‘ವಿನಯ ವಿಧೇಯ ರಾಮ’ ಹಾಗೂ ಅಜಿತ್ ಅಭಿನಯದ ‘ವಿಶ್ವಂ’ ಚಿತ್ರಗಳು ತೆರೆಗೆ ಬರುತ್ತಿವೆ.

ಬ್ಲಾಕ್ ಬಸ್ಟರ್ ಹಿಟ್ ‘ಕೆಜಿಎಫ್’, ಆ ಬಳಿಕ ಬಿಡುಗಡೆಯಾದ ‘ಅನಂತು v/s ನುಸ್ರತ್’ ಚಿತ್ರಗಳು ಇನ್ನೂ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಹಾಗಾಗಿ ‘ಬಜಾರ್’ ಗೆ ಥಿಯೇಟರ್ ಗಳ ಅಭಾವ ಉಂಟಾಗಿದೆ ಎನ್ನಲಾಗಿದೆ.

ತನ್ನ ಹಾಡುಗಳು ಹಾಗೂ ವಿಭಿನ್ನ ಟೀಸರ್ ನಿಂದ ಗಮನ ಸೆಳೆದಿರುವ ಧನವೀರ್ ಗೌಡ ಮತ್ತು ಪ್ರಭುದೇವ ಅಭಿನಯದ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಪ್ರೇಕ್ಷಕರು ಈ ಚಿತ್ರಕ್ಕಾಗಿ ಇನ್ನಷ್ಟು ದಿನ ಕಾಯಬೇಕಿದೆ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top