RESPONSIVE LEADERBOARD AD AREA
Movie Articles

ಆ್ಯಕ್ಷನ್ ಮೂವೀಸ್ ಗೆ ಟೋನಿ ಜಾ ಕಾಮಿಡಿಗೆ ಮಿ.ಬೀಜ

ಆ್ಯಕ್ಷನ್ ಮೂವೀಸ್ ಗೆ ಟೋನಿ ಜಾ ಕಾಮಿಡಿಗೆ ಮಿ.ಬೀಜ

ಒಂದು ಮಾತು
A Day without Laughter is a day wasted – Charlie Chaplin

ಅದ್ಬುತ ಪ್ರತಿಭೆ
ಸರ್ ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್(1889-1977) ನಟ ನಿರ್ದೇಶಕ ನಿರ್ಮಾಪಕ ಸಂಗೀತ ಬರವಣಿಗೆ ಹೀಗೆ ಎಲ್ಲ ರಂಗಗಳಲ್ಲೂ ಅಪ್ರತಿಮೆ ಅದ್ಬುತ ಸಾಧನೆ ಮಾಡಿದ ವ್ಯಕ್ತಿ

ಉದಯೋನ್ಮುಖ ಪ್ರತಿಬೆ
ವಿನಾಯಕ ಬರಹಗಾರ ನಿರ್ದೇಶಕ ನಟನಾಗಿ ಶುದ್ಧ ಚಾರ್ಲೀ ಚಾಪ್ಲಿನ್ ಎಂಬ ದೈತ್ಯವನ್ನು ತನ್ನ ಕಿರುಚಿತ್ರದಲ್ಲಿ ನೆನಪಿಸುತ್ತ ಹೋಗುತ್ತಾರೆ
ಮುಕಿಚಿತ್ರಗಳ ಕಾಲದಲ್ಲಿ, ಕಪ್ಪು ಬಿಳಿಪಿನ ಯುಗದಲ್ಲಿ ತನ್ನದೆಯಾದ ಶೈಲಿಯಲ್ಲಿ ಅಭಿನಯಿಸುತ್ತ ಎಲ್ಲರ ಮನಗೆದ್ದ ಚಾಪ್ಲಿನ್ ಅವರ ಚಿತ್ರಗಳು ಜನರ ಮನಸಿನಲ್ಲಿ ಮಾಸುತ್ತಿರುವ ಕಾಲದಲ್ಲಿ , ಉತ್ತಮ ಆಲೋಚನೆ ಹಾಗೂ ಹಿಂದೆಂದೂ ನಮ್ಮಲ್ಲಿ ಆಗಿರದ ವಿನೂತನದ ಪ್ರಯತ್ನದ ಫಲವೇ ಮೀ.ಬೀಜ

ಕಲ್ಪನೆ
The true sign of intelligence is not knowledge but imagination ಅಂತ ಪುಣ್ಯತ್ಮರೊಬ್ಬರು ಹೇಳಿದ್ದಾರೆ
ಅದು ನಿಜನೆ ಒಂದು ಐಡಿಯಾ ಅಥವಾ ಕಲ್ಪನೆ, ಕಪ್ಪು ಬಿಳುಪಿನ ಕಾಲದ ಕಾಲದ ಒಂದು ಚಿತ್ರನಾ ಮತ್ತೆ ನಮ್ಮ ಸ್ಟೈಲ್ ನಲ್ಲಿ ಮರು ಸೃಷ್ಠಿ ಮಾಡಿದ್ರೆ? ಅನ್ನೊ ವಿಷಯ‌ವಸ್ತುವೆ ಮಿ.ಬೀಜನ ಅರ್ಧಗೆಲ್ಲಿಸಿತ್ತು ಇದರ ಜೊತೆ ಒಂದೊಳ್ಳೆ ತಂಡದ ಪ್ರಮಾಣಿಕ ಪ್ರಯತ್ನ ಚಿತ್ರಕ್ಕೆ ಬಲತುಂಬಿದ್ದು‌ ನೀವು ಕಿರುಚಿತ್ರ ನೋಡುತ್ತಾ ಹೋದಾಗ ತಿಳಿಯುತ್ತದೆ

ದೇಶಸುತ್ತಿಬಂದ Mr.ಬೀಜ
ಈಗಾಗಲೇ ಈ ಕಿರುಚಿತ್ರವು ಕೊಲ್ಕತ್ತಾದ ಮೇಕರ್ಸ್
ಫಿಲ್ಮಂ ಫೆಸ್ಟಿವಲ್ ಮತ್ತು ಮೈಸೂರಿನ ಕರನಾಡು ಶಾರ್ಟ್ ಫಿಲ್ಮಂ ಫೆಸ್ಟಿವಲ್ ನಲ್ಲಿ ಪ್ರದರ್ಶಿತವಾಗಿದ್ದು,
ಬೆಸ್ಟ್ ಅಮೂಲ್ಯ ಕರ್ನಾಟಕ ಫಿಲ್ಮಂ ಫೆಸ್ಟಿವಲ್,
ಇಂಡಿಯನ್ ಸಿನಿ ಫೆಸ್ಟಿವಲ್ ಗಳಲ್ಲಿ
ಅಂದರೆ 5 ರಾಷ್ಟ್ರ ಮತ್ತು ಅಂತರಾಷ್ಟ್ರೀಯ
ಕಿರುಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗಿದೆ

ಪರದೆಯಿಂದೆ ಪರದೆಮೇಲೆ ರಾರಜಿಸಿದವರು ರಂಜಿಸಿದವರು
ಈ ಕಿರುಚಿತ್ರದಲ್ಲಿ ಎನ್ ವಿನಾಯಕ್, ರೇಖಾ ರಾಜ್, ಮಾಸ್ಟರ್ ಸುಪ್ರೀತ್, ಜಯದೀಪ್, ವೇಣು ಹೆಸ್ರಳ್ಳಿ, ತೇಜೇಶ್ವರ್, ವಿಶ್ವನಾಥ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದು, ಶ್ರೀ ರಾಘವೇಂದ್ರ ಪ್ರೊಡಕ್ಷನ್ ನಲ್ಲಿ ಈ ವಿನೋದ್ ಕುಮಾರ್ ನಿರ್ಮಿಸಿದ್ದಾರೆ. ಹಾಗೂ ಚೇತನ್ ಕುಮಾರ್ ಎಸ್ ಎಂ ಅವರೇ ಇಲ್ಲಿ ಕ್ಯಾಮೆರಾ ಕೆಲಸದಿಂದಿಗೆ ಎಡಿಟಿಂಗ್ ಕೆಲಸವನ್ನೂ ಮಾಡಿದ್ದಾರೆ.

ಇನ್ನೂ ನಿರ್ದೇಶಕ ವಿನಾಯಕ
ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲೀನ್ ಅವರಿಗೆ ಈ ಕಿರುಚಿತ್ರವನ್ನು ಅರ್ಪಿಸಿರುವ ನಟ ನಿರ್ದೇಶಕ ಎನ್ ವಿನಾಯಕ್ ಅವರು, ಈಗಾಗಲೇ ಯಶ್ ಅವರ ಯಶೋಮಾರ್ಗ ಡಾಕುಮೆಂಟರಿ, ಕೆ.ಎ16 ಮ್ಯೂಸಿಕ್ ವಿಡಿಯೋ, ರೆಸ್ಟ್ ಫಾಸಿಟಿವ್, ಸ್ವಲ್ಪ ಬದಲಾಗಿ ಎಂಬ 2 ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇವರ ಮುಂದಿನ ಪ್ರೊಜೆಕ್ಟ್ ಗಳಿಗೆ ಶುಭವಾಗಲಿ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top