RESPONSIVE LEADERBOARD AD AREA
Film News

ಶಿವಣ್ಣನ ‘ರುಸ್ತುಂ’ ಗೆ ಶ್ರದ್ದಾ ಶ್ರೀನಾಥ್ ಜೋಡಿ….!

ಯು ಟರ್ನ್ ಚೆಲುವೆ ಶ್ರದ್ಧಾ ಶ್ರೀನಾಥ್, ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಸುತ್ತಿರುವ, ‘ರುಸ್ತುಂ’ ಚಿತ್ರದ ಚಿತ್ರತಂಡದ ಜೊತೆ ಬಹಳ ಲವಲವಿಕೆಯಿಂದ ಭಾಗವಹಿಸಿದ್ದು, ಶಿವಣ್ಣನ ಜೊತೆ ಅವಕಾಶ ಸಿಕ್ಕಿದ್ದಕ್ಕಾಗಿ ಸಖತ್ ಖುಷಿ ಯಲ್ಲಿದ್ದಾರೆ.

ರವಿವರ್ಮ ನಿರ್ದೇಶಿಸುತ್ತಿರುವ ‘ರುಸ್ತುಂ’  ಚಿತ್ರ ಬಹುತೇಕ ಚಿತ್ರೀಕರಣ ಪೂರೈಸಿದೆ. ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಶಿವಣ್ಣನ ಜೊತೆ ಅಭಿನಯಿಸುತ್ತಿರುವ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಶ್ರದ್ಧಾ, ‘ಶಿವಣ್ಣ ನವರದ್ದು ಮಗುವಿನಂತ ಮನಸ್ಸು, ಅವರು ಜೊತೆಗಿದ್ದರೆ ಇಡೀ ಚಿತ್ರತಂಡವೇ ನಗುನಗುತ್ತಾ ಇರುತ್ತದೆ. ಅವರು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವುದನ್ನು ಕೇಳುತ್ತಿದ್ದಾಗ ಖುಷಿಯಾಗುತ್ತದೆ. ಅವರು ಸದಾ ಉತ್ಸಾಹದಿಂದಿರುವ ಲವಲವಿಕೆಯ ವ್ಯಕ್ತಿ’ ಎನ್ನುತ್ತಾರೆ.

‘ಯೂ ಟರ್ನ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಶ್ರದ್ಧಾ ತಮ್ಮ ಅಭಿನಯ ಚಾತುರ್ಯದಿಂದಲೇ ತಮಿಳು, ತೆಲುಗು, ಮತ್ತು ಹಿಂದಿ ಚಿತ್ರಗಳಲ್ಲಿ ಅವಕಾಶ ಪಡೆದಿದ್ದಾರೆ. ಹಿಂದಿಯಲ್ಲಿ ‘ಮಿಲನ್ ಟಾಕೀಸ್’ ಎಂಬ ಚಿತ್ರದಲ್ಲಿ ನಟಿಸಿ ಬಂದಿದ್ದು, ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಮಾಧವನ್ ಜೊತೆಗೆ ‘ಮಾರ’ ಎಂಬ ತಮಿಳು ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ.

ರಾಮೋಜಿ ರಾವ್ ಫಿಲ್ಮ್ ಸಿಟಿಯ ಬಗ್ಗೆ ಖುಷಿ ವ್ಯಕ್ತಪಡಿಸುವ ಶ್ರದ್ಧಾ, ಶಾಲಾದಿನಗಳಲ್ಲಿ ಪ್ರವಾಸಕ್ಕಾಗಿ ಇಲ್ಲಿಗೆ ಬಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಈಗ ಇದೇ ಮೊದಲ ಬಾರಿಗೆ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದು, ಸಂತಸ ನೀಡುತ್ತಿದೆ. ಅಲ್ಲದೆ ಬೆಂಗಳೂರಿನಲ್ಲಿ ಇಂತಹ ಒಂದು ಫಿಲಂ ಸಿಟಿ ಆಗಬೇಕು ಎನ್ನುತ್ತಾರೆ.’ರುಸ್ತುಂ’ ನ ರಾಣಿ ಶ್ರದ್ಧಾ ಶ್ರೀನಾಥ್ ಗೆ ಆಲ್ ದ ಬೆಸ್ಟ್ ಹೇಳೋಣವೇ?

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top