RESPONSIVE LEADERBOARD AD AREA
Film News

ಶರಣ್ ರ ‘ವಿಕ್ಟರಿ-2’ ಗೆ ಬಾಲಿವುಡ್ ಗಾಯಕ…!

ಸ್ಯಾಂಡಲ್ ವುಡ್ ನಲ್ಲಿ ಸಕತ್ ಸುದ್ದಿ ಮಾಡುತ್ತಿರುವ ಶರಣ್ ಅಭಿನಯದ ವಿಕ್ಟರಿ 2 ಚಿತ್ರ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಚಿತ್ರಕ್ಕೆ ಸಂಗೀತ ನೀಡುತ್ತಿರುವ ಅರ್ಜುನ್ ಜನ್ಯ, ಬಾಲಿವುಡ್ ನ ಯುವ ಗಾಯಕ ದಿವ್ಯ ಕುಮಾರ್ ರನ್ನು ಮುಂಬೈಯಿಂದ ಈ ಚಿತ್ರಕ್ಕಾಗಿ ಕರೆತಂದಿದ್ದಾರೆ.

ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಜನ್ಯ ಈ ಮೊದಲು ಜೀ ಕನ್ನಡ ದ ಸ ರಿ ಗ ಮ ಪ ಮೂಲಕ ಪರಿಚಿತರಾದ ಪ್ರತಿಭೆ ಸಂಚಿತ್ ಹೆಗಡೆ ಸೇರಿದಂತೆ ಅನೇಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ ಖುಷಿಯಲ್ಲಿರುವ ದಿವ್ಯ ಕುಮಾರ್, ಬಾಲಿವುಡ್ ಹಿಟ್ ಚಿತ್ರಗಳಾದ ಕೈ ಪೋ ಚೆ, ಭಾಗ್ ಮಿಲ್ಕಾ ಭಾಗ್, ಫೈಂಡಿಂಗ್ ಫ್ಯಾನಿ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.
ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ‘ಪ್ಲೀಜ್ ಟ್ರಸ್ಟು… ನಾನು ಚೀಪ್ ಅಂಡ್ ಬೆಸ್ಟು..’ ಎಂಬ ವಿಶೇಷ ಕ್ಯಾಚಿ ಹಾಡಿಗೆ ದಿವ್ಯ ಕುಮಾರ್ ಧ್ವನಿ ನೀಡಿದ್ದಾರೆ. ಇದರ ಲಿರಿಕಲ್ ವಿಡಿಯೋ ಇದೇ ಸೆಪ್ಟೆಂಬರ್ 3ರಂದು ಬಿಡುಗಡೆಯಾಗಲಿದೆ.

ಶರಣ್ ಮತ್ತು ರವಿಶಂಕರ್ ಮಹಿಳಾ ಮಣಿಗಳ ಲುಕ್ ನಲ್ಲಿ ಕಾಣಿಸಿಕೊಂಡ ಈ ಚಿತ್ರದ ಸ್ಟಿಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹರಿ ಸಂತೋಷ್ ನಿರ್ದೇಶನದಲ್ಲಿ ಬರುತ್ತಿರುವ ಈ ರೋಮ್ಯಾಂಟಿಕ್ ಕಾಮಿಡಿಯಲ್ಲಿ ಅಪೂರ್ವ ಮತ್ತು ಅಮಿತಾ ಸೂದ್, ಶರಣ್ ಗೆ ಜೋಡಿಯಾಗಿದ್ದಾರೆ.
ತರುಣ್ ಶಿವಪ್ಪ ನಿರ್ಮಾಣ, ಗುರುಪ್ರಶಾಂತ್ ರೈ ಛಾಯಾಗ್ರಹಣ ಈ ಚಿತ್ರಕ್ಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top