RESPONSIVE LEADERBOARD AD AREA
Film News

ಹಾಸ್ಯದ ಹೊನಲು ಹರಿಸಲು ಶರಣ್ ಜೊತೆಗೂಡಿದ ಸಿಂಪಲ್ ಸುನಿ..!

ಸಿಂಪಲ್ ಸುನಿ, ಶರಣ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ.. ಈ ಮೂವರು ಹೊಸ ಚಿತ್ರವೊಂದಕ್ಕೆ ಒಗ್ಗೂಡಿದ್ದಾರೆ. ಮಹಾಭಾರತದ ಕಥೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಹಾಸ್ಯದ ಹೊಸರುಚಿಯನ್ನು ಬಡಿಸಲು ಈ ಮೂವರು ಸಿದ್ಧರಾಗಿದ್ದಾರೆ.

ಈ ಮೊದಲು ಶರಣ್ ಅವರು, ಸಿಂಪಲ್ ಸುನಿ ಅವರ ಜೊತೆಯಲ್ಲಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಅದು ಇದೀಗ ಕೈಗೂಡಿದ್ದು ಪುಷ್ಕರ ಫಿಲಂಸ್ ಇನ್ನೂ ಹೆಸರಿಡದ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಈಗ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆಯುತ್ತಿದೆ. ಇತರೆ ತಾರಾಗಣ ಹಾಗೂ ತಂತ್ರಜ್ಞರ ಆಯ್ಕೆಯಲ್ಲಿ ಚಿತ್ರತಂಡ ತೊಡಗಿಕೊಂಡಿದ್ದು, ಮೊದಲ ಹಂತದ ಚಿತ್ರೀಕರಣ ಇದೇ ಜನವರಿ 22ರಂದು ಬಾಳೆಹೊನ್ನೂರಿನಲ್ಲಿ ಪ್ರಾರಂಭವಾಗಲಿದೆ.

“ಶರಣ್ ಅವರ ಅಭಿನಯ ನನಗೆ ತುಂಬಾ ಇಷ್ಟ. ಅವರ ‘ಅಧ್ಯಕ್ಷ’ ಸಿನಿಮಾವನ್ನು ಎರಡೆರಡು ಬಾರಿ ನೋಡಿ ನಕ್ಕಿದ್ದೇನೆ. ಅತ್ಯಂತ ಭಿನ್ನವಾದ ಅವರ ಮ್ಯಾನರಿಸಂ ನನಗೆ ತುಂಬಾ ಇಷ್ಟ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚಿತ್ರದ ಕಥೆಯನ್ನು ಹೆಣೆದಿದ್ದೇವೆ. ಇದಕ್ಕಾಗಿ ಮಹಾಭಾರತದ ಹಲವು ಪುಸ್ತಕಗಳನ್ನು ಓದಿದ್ದು, ಚಿತ್ರಕ್ಕೆ ಉತ್ತಮ ಹಿನ್ನೆಲೆಯನ್ನು ದೊರಕಿಸಿ ಕೊಡಲು ಪ್ರಯತ್ನಿಸಿದ್ದೇನೆ” ಅನ್ನುತ್ತಾರೆ ಸುನಿ.

“ಮಹಾಭಾರತದಲ್ಲಿ ತ್ರಿಶಂಕು ಸ್ಥಿತಿಯ ಕುರಿತು ಉಲ್ಲೇಖವಿದೆ. ಇಂದಿನ ಸಮಕಾಲೀನ ಸ್ಥಿತಿಗೆ ಮಹಾಭಾರತದ ಕಥೆಯನ್ನು ಹೊಂದಿಸಿಕೊಂಡು,ಈ ಚಿತ್ರದ ಮೂಲಕ ವಿಶೇಷವಾದ ವಿಷುಯಲ್ ಟ್ರೀಟ್ ಅನ್ನು ಪ್ರೇಕ್ಷಕರಿಗೆ ನೀಡಲಿದ್ದೇವೆ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಸಿಂಪಲ್ ಸುನಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top