RESPONSIVE LEADERBOARD AD AREA
Film News

ಕೇರಳದ ಅದೃಷ್ಟದ ಕಟ್ಟಡದಲ್ಲಿ ಶರಣ್ ರ ‘ಅವತಾರ ಪುರುಷ’..!!

ಕಾಮಿಡಿ ಕಿಂಗ್ ಶರಣ್ ನಟಿಸುತ್ತಿರುವ ‘ಅವತಾರ ಪುರುಷ’, ಚಿತ್ರತಂಡ, ಕೇರಳದ 300 ವರ್ಷಗಳ ಹಳೆಯ ಕಟ್ಟಡದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಚಿತ್ರದ ನಿರ್ದೇಶಕ ಸಿಂಪಲ್ ಸುನಿ, ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ತಂಡ ಮಾರ್ಚ್ 16 ರಿಂದ ಕೇರಳದಲ್ಲಿ ಬೀಡುಬಿಟ್ಟಿದೆ.

ಮಳೆಗಾಲದಲ್ಲಿ ಮಳೆಯಿಂದ ತೀವ್ರ ಅನಾಹುತಕ್ಕೆ ಒಳಗಾಗಿದ್ದ ಕೇರಳ, ಈಗ ಚೇತರಿಸಿಕೊಂಡಿದ್ದು ಅಲ್ಲಿಯ ಸುಂದರ ತಾಣಗಳಲ್ಲಿ ಚಿತ್ರತಂಡ ಚಿತ್ರೀಕರಣ ನಡೆಸುತ್ತಿದೆ. ಒಲಪ್ಪಮನ್ನಾ ಮತ್ತು ಪಾಲಕ್ಕಡ್ ಮುಂತಾದ ಭವ್ಯ ಪರಂಪರೆಯ ಸುಂದರ ತಾಣಗಳಲ್ಲಿ ಚಿತ್ರ ಚಿತ್ರೀಕರಿಸಲಾಗುತ್ತಿದೆ.

“ಸುಮಾರು 100 ಎಕರೆ ವಿಸ್ತೀರ್ಣವುಳ್ಳ ಈ ಜಾಗದಲ್ಲಿ ಮುನ್ನೂರು ವರ್ಷಕ್ಕಿಂತಲೂ ಹಳೆಯದಾದ ಕಟ್ಟಡವಿದ್ದು, ಅದರ ಪಕ್ಕದಲ್ಲಿಯೇ ಕಲ್ಯಾಣಿ ಇದೆ. ಇದಕ್ಕೆ ಭವ್ಯವಾದ ಇತಿಹಾಸವಿದೆ. ಮಾಲಿವುಡ್ ಸೂಪರ್ ಸ್ಟಾರ್ ಗಳಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ತಮ್ಮ ಚಿತ್ರಗಳಲ್ಲಿ ಒಂದು ಭಾಗವನ್ನಾದರೂ ಈ ಸ್ಥಳದಲ್ಲಿ ಚಿತ್ರೀಕರಿಸುತ್ತಾರಂತೆ. ಇದನ್ನು ಬಹಳ ಅದೃಷ್ಟದ ಸ್ಥಳವೆಂದೇ ಅವರು ಪರಿಗಣಿಸುತ್ತಾರಂತೆ” ಎನ್ನುತ್ತಾರೆ ಪುಷ್ಕರ ಮಲ್ಲಿಕಾರ್ಜುನಯ್ಯ

ಈ ಮೊದಲು ಕನ್ನಡದ ‘ಆಟೋಗ್ರಾಫ್’ ಚಿತ್ರವನ್ನು ಈ ಸ್ಥಳದಲ್ಲಿ ಚಿತ್ರೀಕರಿಸಲಾಗಿತ್ತು. ಬಹಳ ವರ್ಷದ ಬಳಿಕ ಶರಣ್ ಅವರ ‘ಅವತಾರ ಪುರುಷ’ ಚಿತ್ರವನ್ನು ಇಲ್ಲಿ ಚಿತ್ರೀಕರಿಸಲಾಗುತ್ತಿದೆ.

ಚಿತ್ರದಲ್ಲಿ ಶರಣ್, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು ವಿಲಿಯಂ ಡೇವಿಡ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎರಡನೇ ಹಂತದ ಚಿತ್ರೀಕರಣ ಏಪ್ರಿಲ್ 5 ರವರೆಗೂ ಕೇರಳದಲ್ಲಿ ಮುಂದುವರೆಯಲಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top