RESPONSIVE LEADERBOARD AD AREA
Movie Articles

2017ರಲ್ಲಿ ಹೆಚ್ಚು ಸೌಂಡು ಮಾಡಿದ ಹೀರೋಯಿನ್ ಇವರು

ಒಂದರ ಹಿಂದೊಂದು ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಒಳ್ಳೊಳ್ಳೆ ಪಾತ್ರಗಳ ಮೂಲಕ ಕನ್ನಡ ಸಿನಿಪ್ರಿಯರ ಮನಗೆದ್ದಿರುವ ಶಾನ್ವಿ ಶ್ರೀವಾಸ್ತವ್ ಸಂಪೂರ್ಣವಾಗಿ ಕನ್ನಡದಲ್ಲೇ ತೊಡಗಿಕೊಂಡಿದ್ದಾರೆ. ಒಂದರ ಹಿಂದೆ ಒಂದರಂತೆ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು, ಸ್ಟಾರ್ ನಟರ ನೆಚ್ಚಿನ ನಾಯಕಿ ಎನಿಸಿಕೊಂಡಿದ್ದಾರೆ.

ಈ ವರ್ಷ ಸಾಹೇಬ ಚಿತ್ರದಲ್ಲಿ ನಂದಿನಿಯಾಗಿ ಮೊದಲಾರ್ಧದಲ್ಲಿ ಏನೂ ತಿಳಿಯದ ಮುಗ್ಧ ಹುಡುಗಿಯಾಗಿ, ದ್ವಿತೀಯಾರ್ಧದಲ್ಲಿ ‘ಜಂಭದ ಹುಡುಗಿ’ಯಾಗಿ ನಟಿ ಶಾನ್ವಿ ಅಭಿನಯ ಸೊಗಸಾಗಿತ್ತು. ‘ತಾರಕ್’ ಚಿತ್ರದಲ್ಲಿ ಬಬ್ಲಿ ಹುಡುಗಿ ಶಾನ್ವಿ ಸಿಕ್ಕಾಪಟ್ಟೆ ಇಷ್ಟವಾದರು. ಕಮರ್ಶಿಯಲ್ ಸಿನಿಮಾಗಳ ಬಂದು ಹಾಗೆ ಹೋಗುವ ಪಾತ್ರವಂತಲ್ಲದೆ, ಕಥೆಗೆ ಟ್ವಿಸ್ಟ್ ಕೊಡುವ ಕ್ಯಾರೆಕ್ಟರ್ ನಲ್ಲಿ ಶಾನ್ವಿ ಅಭಿನಯ ಸಖತ್. ಈ ವರ್ಷದ ಬೆಸ್ಟ್ ಮಾಸ್ ಫಿಲಂ ಎನಿಸಿಕೊಂಡಿರುವ ಮಫ್ತಿ ಚಿತ್ರದಲ್ಲಿ ಶಾನ್ವಿ ಜಾಸ್ತಿ ಹೊತ್ತು ತೆರೆ ಮೇಲೆ ಇರುವುದಿಲ್ಲ. ಆದರೆ ಇದ್ದಷ್ಟು ಹೊತ್ತು ಆಡಿಯೆನ್ಸ್ ಗೆ ರಿಲೀಫ್ ಫೀಲಿಂಗ್ ನೀಡಿದ್ದು ಸುಳ್ಳಲ್ಲ.

ಈ ವರ್ಷ 3 ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡು ಸ್ಯಾಂಡಲ್‍ವುಡ್‍ನ ಬ್ಯುಸಿ ನಟಿಯಾಗಿರುವ ಶಾನ್ವಿ ಶ್ರೀವಾಸ್ತವ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸ್ಯಾಂಡಲ್‍ವುಡ್‍ನಲ್ಲಿ ಅವರ ಕರಿಯರ್ ಗ್ರಾಫ್ ಹೀಗೆಯೇ ಯಶಸ್ವಿಯಾಗಿ ಮುಂದುವರಿಯಲಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top