RESPONSIVE LEADERBOARD AD AREA
Film News

ಗಣರಾಜ್ಯೋತ್ಸವದ ಮುನ್ನಾದಿನ ‘ಸೀತಾರಾಮ ಕಲ್ಯಾಣ’ ಬಿಡುಗಡೆ..!?

ಜಾಗ್ವಾರ್ ಹೀರೋ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರ ಗಣರಾಜ್ಯೋತ್ಸವ ದಿನದ ಹಿಂದಿನ ದಿನ ಅಂದರೆ ಜನವರಿ 25 ರಂದು ತೆರೆಗೆ ಬರಲು ಸಿದ್ಧವಾಗಿದೆ. ಇದೇ ಡಿಸೆಂಬರ್ 10ರಂದು ಸೆನ್ಸಾರ್ ಮಂಡಳಿಯ ಮುಂದೆ ಬರಲಿರುವ ‘ಸೀತಾರಾಮ..’ ‘ಯು’ ಸರ್ಟಿಫಿಕೇಟ್ ಪಡೆಯುವ ಆತ್ಮವಿಶ್ವಾಸದಲ್ಲಿ ಇದ್ದಾನೆ.

ನಿಖಿಲ್ ಕುಮಾರ್ ತಮ್ಮ ಜನ್ಮದಿನವನ್ನು ಜನವರಿ 22ರಂದು ಆಚರಿಸಿಕೊಳ್ಳುತ್ತಿದ್ದು, ಅದೇ ದಿನ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ನಿರ್ದೇಶಕ ಹರ್ಷ ಜೊತೆಗೂಡಿ ಸ್ವತಃ ನಿಖಿಲ್ ಕುಮಾರ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿಗಾ ವಹಿಸಿದ್ದು, ಚಿತ್ರ ಉತ್ತಮವಾಗಿ ಮೂಡಿ ಬರಲು ಶ್ರಮಿಸುತ್ತಿದ್ದಾರಂತೆ.

ರಚಿತಾ ರಾಮ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಹಿರಿಯ ನಟ ಶರತ್ ಕುಮಾರ್, ಹಿಂದಿಯ ಮಧೂ, ರವಿಶಂಕರ್, ಚಿಕ್ಕಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ. ಚನ್ನಾಂಬಿಕ ಪ್ರೊಡಕ್ಷನ್ ತಯಾರಿಸುತ್ತಿರುವ ಈ ಚಿತ್ರಕ್ಕೆ, ಜೆ ಸ್ವಾಮಿ ಛಾಯಾಗ್ರಹಣ ಇದೆ.

ಅನೂಪ್ ರಿಬೆನ್ಸ್ ಚಿತ್ರಕ್ಕೆ ಸಂಗೀತ ನೀಡಿದ್ದು ಇತ್ತೀಚಿಗೆ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಒಟ್ಟು ನಾಲ್ಕು ಹಾಡುಗಳಿದ್ದು,10 ದಿನಗಳಿಗೆ ಒಂದರಂತೆ ಹಾಡಿನ ಆಡಿಯೋ ರಿಲೀಸ್ ಮಾಡಲು ಯೋಜಿಸಲಾಗಿದೆ.

ಎ ಹರ್ಷ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ 130ಕ್ಕೂ ಹೆಚ್ಚು ಕಲಾವಿದರು ಅಭಿನಯಿಸುತ್ತಿದ್ದು, ಹಿಂದಿಯ ‘ಮೈನೆ ಪ್ಯಾರ್ ಕಿಯಾ’ ಖ್ಯಾತಿಯ ಹಿರಿಯ ನಟಿ ಭಾಗ್ಯಶ್ರೀ ಮತ್ತು ಸಂಜಯ್ ಕಪೂರ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರು ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top