RESPONSIVE LEADERBOARD AD AREA
Film News

ಶ್ರೀ ಭರತ ಬಾಹುಬಲಿ ಸಿನಿಮಾನ ಚಿತ್ರಮಂದಿರದಲ್ಲಿ ನೋಡಿದವರಿಗೆ ಒಂದು ಕೋಟಿ ರೂಪಾಯಿ

ಬೊಂಬಾಟ್ ಹಾಡುಗಳಿಂದ ಭರವಸೆ ಮೂಡಿಸುವ ಟ್ರೈಲರ್ ನಿಂದ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ, ಮಾಸ್ಟರ್ಪೀಸ್ ಡೈರೆಕ್ಟರ್ ಮಂಜು ಮಾಂಡವ್ಯ ನಾಯಕನಾಗಿ ನಟಿಸಿರುವ “ಶ್ರೀ ಭರತ ಬಾಹುಬಲಿ” ಚಿತ್ರ ಇದೇ ಜನವರಿ 17ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಸಂಕ್ರಾಂತಿ ಹಬ್ಬದ ವೀಕೆಂಡ ಎಂಬ ಅತ್ಯಾಕರ್ಷಣೆಯ ಕಾರಣದಿಂದ ಪರಭಾಷೆಯ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಳು ಇದೇ ದಿನಾಂಕದ ಆಸುಪಾಸು ಬಿಡುಗಡೆ ಆಗುತ್ತಿದೆ. ಇದನ್ನು ಅರಿತಿರುವ ಚಿತ್ರದ ನಿರ್ಮಾಪಕರಾದ “ಟಿ ಶಿವಪ್ರಕಾಶ್” ಅವರು ಭರತ ಬಾಹುಬಲಿಗೆ ಸಿನಿ ಪ್ರಿಯರನ್ನು ಆಕರ್ಷಿಸಲು ಕನ್ನಡ ಚಿತ್ರರಂಗದಲ್ಲಿ ‘ನಾ ಭೂತೋ ನ ಭವಿಷ್ಯತಿ’ ಎಂಬಂತಹ ಬಹುಮಾನಗಳನ್ನು ಕೊಡುಗೆಯಾಗಿ ಇಟ್ಟಿದ್ದಾರೆ. ಹೌದು ಹೃದಯವಂತ ನಿರ್ಮಾಪಕರಾದ ಟಿ ಶಿವಪ್ರಕಾಶ್ ಅವರು ತಮ್ಮ ಸಿನಿಮಾಗೆ ಯಾವುದೇ ರೀತಿ ಕುಂದುಕೊರತೆ ಬಾರದಂತೆ, ಸಿನಿಮಾದಲ್ಲಿ ದೊಡ್ಡ ಸ್ಟಾರ್ ಇಲ್ಲದಿದ್ದರೂ ಕಥೆಯನ್ನು ನಂಬಿ, ಮಂಜುಮಾಂಡವ್ಯ ಅವರ ಬರವಣಿಗೆ ಮತ್ತು ನಿರ್ದೇಶನದ ಸಾಮರ್ಥ್ಯವನ್ನು ನಂಬಿ ಈಗಾಗಲೇ 6 ಕೋಟಿ ಹಣವನ್ನು ಚಿತ್ರಕ್ಕೆ ಖರ್ಚು ಮಾಡಿದ್ದಾರೆ. ಈಗ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇರುವಾಗ ಪರಭಾಷಾ ಚಿತ್ರಗಳಿಂದ ತಮ್ಮ ಹೆಮ್ಮೆಯ ಕನ್ನಡ ಸಿನಿಮಾಗೆ ಯಾವ ಕಾರಣಕ್ಕೂ ಕಡಿಮೆಯಾಗದೆ ಎಲ್ಲಾ ಸಿನಿಪ್ರಿಯ ಜನರ ಗಮನ ಸೆಳೆಯುವಂತೆ ಆಗಲಿ ಎಂಬ ಸದುದ್ದೇಶದಿಂದ “ಶ್ರೀ ಭರತ ಬಾಹುಬಲಿ” ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. 5 ಲಕ್ಷ ಬೆಲೆ ಬಾಳುವ 10 ಕಾರುಗಳು ಹಾಗೂ 5 ಲಕ್ಷ ಬೆಲೆಬಾಳುವ 10 ಚಿನ್ನದ ಆಭರಣಗಳು ಈ ಬಹುಮಾನದಲ್ಲಿ ಸೇರಿದೆ. 20 ಜನ ಅದೃಷ್ಟವಂತ ಪ್ರೇಕ್ಷಕರು ಈ ಬಹುಮಾನವನ್ನು ಪಡೆದುಕೊಳ್ಳಲಿದ್ದಾರೆ.

ಪ್ರೇಕ್ಷಕರು ಮಾಡಬೇಕಾಗಿರುವುದಿಷ್ಟೇ, ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಾರೂ “ಶ್ರೀ ಭರತ ಬಾಹುಬಲಿ” ವೀಕ್ಷಿಸಿ ಟಿಕೆಟ್ ಜೊತೆಗೆ ನೀಡಲಾಗುವ ಕೂಪನ್ ಅನ್ನ ಕೇಳಿ ಪಡೆದು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಚಿತ್ರ ತಂಡವು “ಲಕ್ಕಿ ಪಿಕ್”ನಲ್ಲಿ 20ಜನ ಅದೃಷ್ಟವಂತ ಪ್ರೇಕ್ಷಕರನ್ನು ಆಯ್ಕೆ ಮಾಡಿ ಯಾವ ನಂಬರ್ ಬಹುಮಾನ ಗೆದ್ದಿದೆ ಎಂಬುದನ್ನು ತಿಳಿಸುತ್ತಾರೆ, ಕಾರು ಹಾಗು ಆಭರಣಗಳನ್ನು ಆಯಾ ಅದೃಷ್ಟವಂತ ನಂಬರ್ ಇರೋ ಕೂಪನ್ ಹೊಂದಿರುವ ಪ್ರೇಕ್ಷಕರಿಗೆ ನೀಡಲಾಗುವುದು.

ಇದು ನಿರ್ಮಾಪಕ ಶಿವಪ್ರಕಾಶ್ ಅವರ ಗಂಡೆದೆಯ ನಿರ್ಧಾರವೇ ಸರಿ. ಅವರೇ ಹೇಳಿರುವ ಪ್ರಕಾರ ಈ ಒಂದು ಕೋಟಿ ಬಹುಮಾನ ನಿರ್ಧಾರವು ಸಿನಿ ಪ್ರಿಯರನ್ನು “ಶ್ರೀ ಭರತ ಬಾಹುಬಲಿ” ಸಿನಿಮಾಗೆ ಆಕರ್ಷಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ. ಏಕೆಂದರೆ ಬಹಳ ಅದ್ಭುತವಾಗಿ ಸಿನಿಮಾ ಮೂಡಿ ಬಂದಿದ್ದು, ಇಂತಹ ಒಂದು ಸಿನಿಮಾನ ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡದೆ ಮಿಸ್ ಮಾಡಿಕೊಳ್ಳಬಾರದು ಎಂಬುದೇ ಅವರಿಗಿರುವ ಶ್ರೇಯೋಭಿಲಾಷೆ.

“ಶ್ರೀ ಭರತ ಬಾಹುಬಲಿ” ಚಿತ್ರದ ಹಾಡುಗಳನ್ನಾಗಲಿ, ಟ್ರೈಲರ್ ಗಳನ್ನಾಗಲಿ ನೋಡಿದರೆ ಗೊತ್ತಾಗುತ್ತೆ, ಇದೊಂದು ಬಹಳ ರಂಜನೀಯ ಹಾಗೂ ಒಳ್ಳೆ ಕಥೆ ಇರುವ ಸಿನಿಮಾ ಅಂತ. ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು ಎಂದೂ ಕೈ ಬಿಡುವುದಿಲ್ಲ ಎಂಬುದನ್ನು ನಂಬಿ ಅದ್ದೂರಿಯಾಗಿ ಸಿನಿಮಾವನ್ನ ನಿರ್ಮಿಸಲಾಗಿದೆ. ಮಂಜು ಮಾಂಡವ್ಯ ಅವರು ರಚಿಸಿ ನಿರ್ದೇಶಿಸಿ ನಾಯಕನಾಗಿ ನಟಿಸಿದ್ದಾರೆ, ಚಿತ್ರದ ಹಾಡುಗಳು ಹಾಗೂ ಟ್ರೈಲರ್ ನಲ್ಲಿ ಬಹಳ ಚೆನ್ನಾಗಿ ಕಾಣುತ್ತಾ “ಹೊಸ ಹೀರೋ” ಭರವಸೆ ಮೂಡಿಸಿದ್ದಾರೆ. ಚಿನಕುರಳಿ ಹಾಸ್ಯಕ್ಕೆ ಹೆಸರಾದ ಚಿಕ್ಕಣ್ಣ ಸಿನಿಮಾದಲ್ಲಿ ಬಹಳ ಮಜಾ ಕೊಡೋದು ಗ್ಯಾರಂಟಿ. ಮೊದಲ ಬಾರಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿರುವ ನಾಯಕಿ ಸಾರಾ ಹರೀಶ್ ಪಡ್ಡೆಗಳ ಹೊಸ ಕ್ರಶ್ ಆಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ಪ್ರೇಕ್ಷಕರಿಗೆ ಖುಷಿಕೊಡುವ ಹಲವಾರು ಅಂಶಗಳಿದ್ದು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಪೈಸಾ ವಸೂಲ್ ಮನರಂಜನೆ ಗ್ಯಾರಂಟಿ ಅನ್ನೋದು ಚಿತ್ರತಂಡದ ಭರವಸೆ. ಆದ್ದರಿಂದ ಒಳ್ಳೆಯ ಸಿನಿಮಾನ ನೋಡಿದಂಗೆಯೂ ಆಗುತ್ತೆ, ಅದೃಷ್ಟ ಇದ್ದರೆ ಕಾರು – ಆಭರಣ ನಿಮ್ಮದು ಆಗುತ್ತೆ. ಹೀಗಾಗಿ ಇಂತಹ ಅವಕಾಶ ಮಿಸ್ ಮಾಡಿಕೊಳ್ಳದೇ, ನೋಡಲೇಬೇಕು ಶ್ರೀ ಭರತ ಬಾಹುಬಲಿ. ಇದೇ ಜನವರಿ 17 ನೇ ತಾರೀಖಿನಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top