RESPONSIVE LEADERBOARD AD AREA
Film News

ರಿಯಾ ರಣ್ವಿಕಾ ಎಂಬ ಕನ್ನಡದ ಬೆಡಗಿ..!!

ರಿಯಾ ರಣ್ವಿಕಾ ಎಂಬ ಕನ್ನಡದ ಹುಡುಗಿ, ನಿರಂಜನ್ ನಾಯಕನಾಗಿ ನಟಿಸುತ್ತಿರುವ ‘ನಮ್ಮ ಹುಡುಗ್ರು ಕಥೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ರಿಯಾ ರಣ್ವಿಕಾ, ಎಚ್ ಬಿ ಸಿದ್ದು ನಿರ್ದೇಶಿಸುತ್ತಿರುವ ಚಿತ್ರ, ‘ನಮ್ ಹುಡುಗ್ರು ಕಥೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.  ಇಂಜಿನಿಯರಿಂಗ್ ಪದವೀಧರೆಯಾಗಿರುವ ಈಕೆ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ತನ್ನ ಬಾಲ್ಯದ ಕನಸನ್ನು ಈಡೇರಿಸಿ ಕೊಳ್ಳಬೇಕೆಂಬ ಆದಮ್ಯ ಆಸೆಯಿಂದ ಮೈಸೂರಿನಿಂದ ಬೆಂಗಳೂರಿಗೆ ಬಂದಿರುವ ರಿಯಾ, ಬಾಲ್ಯದಲ್ಲಿ ಕನ್ನಡಿಯ ಮುಂದೆ ನಿಂತು ಅಭಿನಯವನ್ನು ಕಲಿಯುತ್ತಿದ್ದಾರಂತೆ. ಅವರ ನಟಿಯಾಗಬೇಕೆಂಬ ಆಸೆ ಈ ಚಿತ್ರದ ಮೂಲಕ ಈಡೇರಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ಮೂರು ತಿಂಗಳುಗಳ ಅಭಿನಯ ತರಬೇತಿಯನ್ನು ಸಹ ಪಡೆದಿದ್ದಾರೆ.

” ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂಬ ಅಚಲವಾದ ನಂಬಿಕೆಯನ್ನು ಇಟ್ಟುಕೊಂಡು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಈ ಕ್ಷೇತ್ರದಲ್ಲಿ ಉತ್ತಮ ಹೆಸರು ಉಳಿಸಿಕೊಳ್ಳಬೇಕೆಂಬ ಮಹತ್ವಕಾಂಕ್ಷೆ ಹೊಂದಿದ್ದೇನೆ” ಎನ್ನುತ್ತಾರೆ.

ರಣ್ವಿಕಾಗೆ ರಮ್ಯಾ ಮತ್ತು ರಾಧಿಕಾ ಪಂಡಿತ್ ಮೆಚ್ಚಿನ ನಟಿಯರಾಗಿದ್ದು, ಚಿತ್ರರಂಗದಲ್ಲಿ ಅವರಂತೆ ಹೆಸರು ಗಳಿಸಬೇಕೆಂಬ ಬಯಕೆ ಇಟ್ಟುಕೊಂಡಿದ್ದಾರೆ. ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ನೀಡಿದ್ದು ಸೂರ್ಯ ಕಿರಣ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರ ಇದೇ ನವೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದು ಬೆಂಗಳೂರು, ಮಂಗಳೂರು, ಮಂಡ್ಯ, ಮೈಸೂರು, ಧರ್ಮಸ್ಥಳದಲ್ಲಿ ಪ್ರಯಾಣ ಮಾಡಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top