RESPONSIVE LEADERBOARD AD AREA
Film News

ಟೆನ್ಷನ್ ಕೊಡೋದೆ “ರಿಲ್ಯಾಕ್ಸ್ ಸತ್ಯ’ನ ಸ್ಪೆಷಾಲಿಟಿ

ಅಕಿರನಂತಹ ಸ್ಟೈಲಿಶ್ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ ಮಾಡಿದ್ದ ನವೀನ್ ರೆಡ್ಡಿ “ರಿಲ್ಯಾಕ್ಸ್ ಸತ್ಯ” ಸಿನಿಮಾದಲ್ಲಿ ಎಂಗೇಜಿಂಗ್ ಕಿಡ್ನಾಪ್ ಡ್ರಾಮಾ ತೋರಿಸಿದ್ದಾರೆ. ಈ ಚಿತ್ರದಲ್ಲಿ ಸ್ಟೈಲ್ ಜೊತೆ ಕಂಟಿನ್ಯೂಯಸ್ ಆಗಿ ಸಸ್ಪೆನ್ಸ್ ಕ್ಯಾರಿ ಮಾಡುವ ಕಂಟೆಂಟ್ ಕೂಡ ಇದೆ.

ರಾತೋರಾತ್ರಿ ದುಡ್ಡು ಮಾಡಿ ಶ್ರೀಮಂತರಾಗಿ ಬಿಡಬೇಕೆನ್ನುವ ದುಷ್ಟ ಉಮೇದಿಯಲ್ಲಿ ಶ್ರೀಮಂತ ಹುಡುಗಿಯೊಬ್ಬಳನ್ನು ಕಿಡ್ನಾಪ್ ಮಾಡಿರುವ ದಾಸಣ್ಣ ಹಾಗೂ ಸತ್ಯ, ವಿರುದ್ಧ ಸ್ವಭಾವದ ಖದೀಮರು. ಅವರು ಮಾಡಿಕೊಂಡಿರುವ ಕಿಡ್ನಾಪ್ ಪ್ಲಾನ್ನಲ್ಲಿ ಯಾವುದೇ ಲೂಪ್ ಹೋಲ್ ಗಳಿಲ್ಲ. ಕಿಡ್ನಾಪ್ ಮಾಡಿ ಹುಡುಗಿ ಅಪ್ಪನಿಗೆ ಫೋನ್ ಮಾಡಿ ದುಡ್ಡು ಕೇಳಿ, ದುಡ್ಡು ತರಿಸಿಕೊಳ್ಳುವ ತನಕ ಅವರ ಎಲ್ಲ ಪ್ಲಾನ್ ಪರ್ಫೆಕ್ಟ್ ಆಗಿ ವರ್ಕೌಟ್ ಆಗುವಂತಿದೆ. ಆದರೆ ಕಿಡ್ನಾಪ್ ಆಗಿರುವ ಹುಡುಗಿಗೆ ಕಿಡ್ನಾಪ್ ಮಾಡಿರುವ ಇಬ್ಬರಲ್ಲಿ ಒಬ್ಬರ ಪರಿಚಯವಿದೆ. ಇಂತಿಪ್ಪ ಪರಿಸ್ಥಿತಿಯಲ್ಲಿ ಕಿಡ್ನಾಪ್ ಮಾಡಿದವರಿಗೆ ಅವರು ದುರಾಸೆ ಪಟ್ಟಂತಹ ದುಡ್ಡು ಸಿಗುತ್ತದಾ? ಅಸಲಿ ಆ ಹುಡುಗಿ ಯಾರು? ಈ ಕಿಡ್ನಾಪ್ ಎಪಿಸೋಡು ಎಂತೆಂಥ ತಿರುವು ಪಡೆದುಕೊಂಡು ಎತ್ತೆತ್ತ ಸಾಗುತ್ತದೆ? ಅನ್ನೋದೆ ರಿಲ್ಯಾಕ್ಸ್ ಸತ್ಯನ ಸಸ್ಪೆನ್ಸ್ ಸ್ಟೋರಿ.

ಕಿಡ್ನಾಪರ್ ಗಳಾಗಿ ಪ್ರಭು ಮುಂಡ್ಕರ್ ಹಾಗೂ ಉಗ್ರಂ ಮಂಜು ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ. ಆಗಾಗ ಬೆದರಿ “ಡೂಸ್” ಆಗುವ ಪುಕ್ಕಲು ಯುವಕನಾಗಿ, ಲವರ್ ಬಾಯ್ ಆಗಿ ಪ್ರಭು ಮುಂಡ್ಕೂರ ಇಷ್ಟ ಆಗುತ್ತಾರೆ. ಉಗ್ರಂ ಮಂಜು ಕಣ್ಣಿನಲ್ಲೇ ನಟಿಸುತ್ತಾ ತಮಗೆ ಸಿಕ್ಕಿರುವ ಸದಾವಕಾಶವನ್ನು ಚಿನ್ನದಂತೆ ಬಳಸಿಕೊಂಡಿದ್ದಾರೆ. ಮಾನ್ವಿತಾ ಹರೀಶ್ ಅಭಿನಯದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಕಿಡ್ನಾಪ್ ಗೊಳಗಾದ ಬೆದರಿದ ಫೇಸ್ ಎಕ್ಸ್ಪ್ರೆಷನ್ ನಲ್ಲೂ ಮುದ್ದಾಗಿ ಕಾಣುತ್ತಾರೆ. ಪೊಲೀಸ್ ಪಾತ್ರದಲ್ಲಿ ಎದುರಾಗಿ ಕಾಮಿಡಿ ಮಾಡುವ ಕಡ್ಡಿಪುಡಿ ಚಂದ್ರು ಸ್ವಲ್ಪ ನಗಿಸುತ್ತಾರೆ. ಸಿನಿಮಾದ ಪ್ರತಿ ಫ್ರೇಮ್ನಲ್ಲೂ ಇರುವ ಪ್ರಭು, ಮಾನ್ವಿತಾ ಹಾಗೂ ಉಗ್ರಂ ಮಂಜು ಅಚ್ಚುಕಟ್ಟಾದ ಅಭಿನಯ ನೀಡಿರುವುದರಿಂದಲೇ ಸಿನಿಮಾದಲ್ಲೊಂದು ನೈಜ ಪರಿಸರ ಸೃಷ್ಟಿಯಾಗಿದೆ.

ಆನಂದ್ ರಾಜವಿಕ್ರಮ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಉತ್ತಮವಾಗಿದೆ, ರೀ ರೆಕಾರ್ಡಿಂಗ್ ಸಿನಿಮಾದ ಟೆಕ್ನಿಕಲ್ ಹೈಲೈಟ್. ಯೋಗಿ ಅವರ ಛಾಯಾಗ್ರಹಣದಲ್ಲಿ “ಲೈಟಿಂಗ್” ಗಮನ ಸೆಳೆಯುತ್ತದೆ. ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ ಫಸ್ಟ್ ಕ್ಲಾಸ್.

ಒಂದು ಸಸ್ಪೆನ್ಸ್ ಸಿನಿಮಾ ಅಂತ ನೋಡಿದಾಗ “ರಿಲ್ಯಾಕ್ಸ್ ಸತ್ಯ” ಒಳ್ಳೆಯ ಅಂಕದೊಂದಿಗೆ ಪಾಸ್ ಆಗುತ್ತಾನೆ. ಚಿತ್ರಕಥೆಯಲ್ಲಿ ಟೆನ್ಷನ್ ಕ್ರಿಯೇಟ್ ಮಾಡುವಲ್ಲಿ, ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ನಿರ್ದೇಶಕ ನವೀನ್ ರೆಡ್ಡಿ ಗೆಲ್ಲುತ್ತಾರೆ. ದ್ವಿತೀಯಾರ್ಧದಲ್ಲಿ ಬರುವ ಅನಾವಶ್ಯಕ ಎರಡು ಹಾಡುಗಳ ಹೊರತಾಗಿ ಇಡೀ ಸಿನಿಮಾ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಖಂಡಿತವಾಗಿಯೂ ಕನ್ನಡ ಆಡಿಯನ್ಸ್ ಗೆ ಹೊಸ ಅನುಭವ ನೀಡುವಂತಹ ಸಿನಿಮಾ. ಕಡಿಮೆ ಪಾತ್ರಧಾರಿಗಳು, ಕೆಲವೇ ಕೆಲವು ಲೊಕೇಶನ್ನು, ಭರಪೂರ ಟೆನ್ಷನ್ ಕೊಡಮಾಡೋ “ರಿಲ್ಯಾಕ್ಸ್ ಸತ್ಯ”ನನ್ನ ಒಮ್ಮೆ ನೋಡಿ ಚಿಲ್ ಆಗಬಹುದು.

ನಮ್ ಸಿನಿಮಾ ರೇಟಿಂಗ್ – 3.25/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top