RESPONSIVE LEADERBOARD AD AREA
Film News

“ಮುಜೆ ಅರೆಸ್ಟ್ ಬೋಲೆ ತೋ ಅಲರ್ಜಿ…! ಎನ್ ಕೌಂಟರ್ ಬೋಲೆ ತೋ.. ಎನರ್ಜಿ..!!”

“ಮುಜೆ ಅರೆಸ್ಟ್ ಬೋಲೆ ತೋ ಅಲರ್ಜಿ…! ಎನ್ ಕೌಂಟರ್ ಬೋಲೆ ತೋ.. ಎನರ್ಜಿ..!!” ಈಗ ಎಲ್ಲೆಡೆ ಹವಾ ಎಬ್ಬಿಸುತ್ತಿರುವ ಈ ಖಡಕ್ ಡೈಲಾಗ್ ‘ರುಸ್ತುಂ’ ಚಿತ್ರದ್ದು. ಭಾನುವಾರವಷ್ಟೇ ಚಿತ್ರತಂಡ, ಶಿವಣ್ಣರ ಈ ಪವರ್ಫುಲ್ ಡೈಲಾಗ್ ಅನ್ನು ಬಿಡುಗಡೆ ಮಾಡಿದೆ.

ಇದೇ ಮೊದಲ ಬಾರಿಗೆ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸುತ್ತಿರುವ ಈ ಚಿತ್ರ, ಈಗ ಎಲ್ಲರ ಗಮನ ಸೆಳೆದಿದ್ದು, ಶಿವಣ್ಣ ಅವರ ಅಭಿಮಾನಿಗಳು ಕಾತರದಿಂದ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಶಿವಣ್ಣ, ಚಿತ್ರದಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಐದು ವಿಶೇಷವಾದ ಆಕ್ಷನ್ ದೃಶ್ಯಗಳಿದ್ದು, ಮೂರನ್ನು ಶಿವಣ್ಣ ನಿಭಾಯಿಸಿದ್ದಾರೆ. ಒಂದರಲ್ಲಿ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಚೇಸ್ ದೃಶ್ಯವಾಗಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ನಿರ್ದೇಶಕರ,ತಂತ್ರಜ್ಞರ ಜೊತೆಯಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿರುವ ರವಿವರ್ಮ ಅವರು ಇದೇ ಮೊದಲ ಬಾರಿಗೆ ‘ರುಸ್ತುಂ’ಗಾಗಿ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.

ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮತ್ತು ಮಯೂರಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಆಡಿಯೋ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಮೇ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದರಂತೆ ರವಿವರ್ಮ. ಚಿತ್ರ ಈಗ ರೀ ರೆಕಾರ್ಡಿಂಗ್ ಹಂತದಲ್ಲಿದ್ದು, ಸೆನ್ಸಾರ್ ಮಂಡಳಿಯ ಮುಂದೆ ಬರಲಿದೆ. ಬಳಿಕ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದೆ.

ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ‘ಟಗರು’ ಖ್ಯಾತಿಯ ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top