RESPONSIVE LEADERBOARD AD AREA
Film News

ಧ್ರುವ ಸರ್ಜಾ ‘ಪೊಗರು’ ಚಿತ್ರಕ್ಕೆ ನಾಯಕಿ ಸಿಕ್ಕಾಯ್ತು..!!

ಧ್ರುವ ಸರ್ಜಾ ಅಭಿನಯಿಸುತ್ತಿರುವ ಪೊಗರು ಚಿತ್ರದ ನಾಯಕಿ ಯಾರು?! ಈ ಪ್ರಶ್ನೆಗೆ ಈಗ ಉತ್ತರ ದೊರಕಿದ್ದು, ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ‘ಇನ್ಕೇಂ ಇನ್ಕೇಂ ಕಾವಾಲೆ…’ ಎನ್ನುತ್ತಾ ತೆಲುಗಿನಲ್ಲಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಪಟ್ಟ ಪಡೆದುಕೊಂಡ ರಶ್ಮಿಕಾ ಮಂದಣ್ಣ ಕನ್ನಡದ ಭರ್ಜರಿ ಹೀರೋ ಧ್ರುವ ಸರ್ಜಾರ ಪೊಗರು ಚಿತ್ರದಲ್ಲಿ ಅಭಿನಯಿಸುವುದು ಖಚಿತವಾಗಿದೆ

ತೆಲುಗಿನ ‘ಗೀತ ಗೋವಿಂದಂ’ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಗೆ ವ್ಯಾಪಕ ಬೇಡಿಕೆ ಬಂದಿದ್ದು, ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ಈ ಮೊದಲು ಯಾವುದೇ ಭಾಷೆಯಲ್ಲಾಗಲಿ ಅತ್ಯುತ್ತಮ ಚಿತ್ರಕಥೆಗಳು ಸಿಕ್ಕರೆ ನಾನು ಅಭಿನಯಿಸಲು ಸಿದ್ಧ ಎಂದು ಹೇಳಿದ್ದ ರಶ್ಮಿಕಾ ಈಗ ಮತ್ತೊಂದು ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ನಂದಕಿಶೋರ್ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಪೊಗರು’ ಚಿತ್ರಕ್ಕೆ ಕೆಲದಿನಗಳಿಂದ ನಾಯಕಿಯ ಹುಡುಕಾಟ ನಡೆದಿತ್ತು.

ಚಿತ್ರದ ಟೀಸರ್ ಕಳೆದ ಅಕ್ಟೋಬರ್ 6 ರಂದು (ಧ್ರುವ ಜನ್ಮದಿನ) ಬಿಡುಗಡೆಯಾಗಿದ್ದು, ಚಿತ್ರದ ಎರಡನೇ ಹಂತದ ಚಿತ್ರೀಕರಣ ಬರುವ ನವೆಂಬರ್ 20 ರಂದು ಪ್ರಾರಂಭವಾಗಲಿದೆ. ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಒದಗಿಸಿದ್ದು ಗಂಗಾಧರ್ ಚಿತ್ರಕ್ಕೆ ಹಣ ಹೂಡಿದ್ದಾರೆ.

ಈ ನಡುವೆ ರಶ್ಮಿಕಾ, ದರ್ಶನ್ ನಾಯಕತ್ವದ ‘ಯಜಮಾನ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹೀಗೆ ತೆಲುಗು ಮತ್ತು ಕನ್ನಡ ಎರಡರಲ್ಲೂ ಅಭಿನಯಿಸುತ್ತಿರುವ ಈ ಚೆಲುವೆ ವಿಜಯ್ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೇಡ್’ ಎಂಬ ತೆಲುಗು ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top